ಕಂಪ್ಯೂಟರ್ ಕೇಂದ್ರಗಳಿಗೆ ಮುಗಿಬಿದ್ದ ಜನತೆ

28blrp2
Published on

ಬೇಲೂರು: ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಇನ್ನಿತರ ಯೋಜನೆಯ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸಲು ಶುಕ್ರವಾರ ಪಟ್ಟಣದ ವಿವಿಧ ಕಂಪ್ಯೂಟರ್ ಕೇಂದ್ರಗಳ ಮುಂದೆ ಜನರು ಮಳೆಯನ್ನೂ ಲೆಕ್ಕಿಸದೆ ಜಮಾಯಿಸಿದ್ದರು.


ರಾಜ್ಯ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಇನ್ನೂ ಸಾಕಷ್ಟು ಜನರು ಹೆಸರು ನೋಂದಾಯಿಸಿಲ್ಲ. ಇದರಲ್ಲಿ ಬಹುತೇಕ ಕೂಲಿ ಕಾರ್ಮಿಕರು, ಕಾರ್ಮಿಕ ಮಹಿಳೆಯರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ತಮ್ಮ ಮೊಬೈಲ್‌ನೊಂದಿಗೆ, ಮಳೆಯ ನಡುವೆಯೂ ಆಧಾರ್ ಕಾಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಹಿಡಿದು ಬೆಳ್ಳಂಬೆಳಗ್ಗೆಯೇ ಸಾಕಷ್ಟು ಸಂಖ್ಯೆಯಲ್ಲಿ ಪಟ್ಟಣದ ವಿವಿಧ ಕಂಪೂಟರ್ ಕೇಂದ್ರಗಳ ಮುಂದೆ ಸಾಲಿನಲ್ಲಿ ನಿಂತಿದ್ದರು. ಎಲ್ಲೆಡೆ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿ ಕಂಡುಬಂತು. ಕೆಲವೆಡೆ ಮಾತಿನ ಚಕಮಕಿಯೂ ನಡೆಯಿತು. ಅಲ್ಲದೇ, ನೂರಾರು ಸಂಖ್ಯೆಯಲ್ಲಿದ್ದ ಜನರನ್ನು ಕಂಪ್ಯೂಟರ್ ಕೇಂದ್ರಗಳ ಸಿಬ್ಬಂದಿ ನಿಭಾಯಿಸಲಾಗದೆ ಪೊಲೀಸರನ್ನು ಕರೆಯಿಸಿದ ಘಟನೆಯೂ ಬೇಲೂರು ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಕಂಪ್ಯೂಟರ್ ಕೇಂದ್ರದಲ್ಲಿ ಕಂಡು ಬಂತು.


ಕೆಲವರು ‘ನಾವು ಬೆಳಗ್ಗೆಯೇ ಬಂದಿದ್ದೇವೆ, ಈಗ ಬಂದವರು ಮುಂದೆ ಹೋಗುತ್ತಿದ್ದಾರೆ. ಅವರನ್ನು ಹಿಂದಕ್ಕೆ ಕಳುಹಿಸಿ’ ಎಂದು ಗಲಾಟೆ ಮಾಡುತಿದ್ದುದು ಅಲ್ಲಲ್ಲಿ ಕಾಣಬಹುದಾಗಿತ್ತು. ಇದರ ನಡುವೆ ಕೆಲ ಸಮಯ ಸರ್ವರ್ ಸಮಸ್ಯೆಯಿಂದಾಗಿ ಜನರು ಗಂಟೇ ಗಟ್ಟಲೇ ಕಾಯುವಂತಾಗಿತ್ತು. ಕೆಲವರು ತಮ್ಮ ಅವಧಿಗಾಗಿ ಟೋಕನ್ ಪಡೆದು ನಂತರ ಬರುವುದಾಗಿ ತೆರಳಿದರೆ, ದೂರದೂರುಗಳಿಂದ ಕೆಲಸ ಕಾರ್ಯಗಳನ್ನು ಬಿಟ್ಟು ಬಂದವರು ಮಾತ್ರ ತಮ್ಮ ಸರತಿಗಾಗಿ ಸಾಲಿನಲ್ಲೇ ಕಾಯುವಂತಾಯಿತು.

ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net