ಕಂದಾಯ ವಸೂಲಿಗೆ ಚಿಕ್ಕಬಳ್ಳಾಪುರ ನಗರಸಭೆ ವಿಶೇಷ ಅಭಿಯಾನ

Tax
Published on

ಚಿಕ್ಕಬಳ್ಳಾಪುರ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಕಂದಾಯದ ವಸೂಲಿಗೆ ನಗರಸಭೆ ಅಧಿಕಾರಿಗಳು ವಿಶೇಷ ಆಂದೋಲನ ಕೈಗೊಂಡಿದ್ದಾರೆ.

ಬಾಕಿ ಇರುವ ಆಸ್ತಿ ತೆರಿಗೆ, ನೀರು, ಒಳ ಚರಂಡಿ ಸಂಪರ್ಕದ ಠೇವಣಿ ಮತ್ತು ಒಳ ಚರಂಡಿ ಸಂಪರ್ಕದ ಮಾಸಿಕ ಬಳಕೆ ಶುಲ್ಕ, ನಗರಸಭೆ ಅಂಗಡಿಗಳ ಮಳಿಗೆಗಳ ಬಾಡಿಗೆ, ಉದ್ದಿಮೆ ಪರವಾನಗಿ ಶುಲ್ಕ ವಸೂಲಿ ಮಾಡಲಾಗುತ್ತಿದೆ.

ಕಂದಾಯ ವಸೂಲಿ ಗುರಿ ಸಾಧನೆಗಾಗಿ ನಗರದ 31 ವಾರ್ಡ್‌ನಲ್ಲಿ ಸಿಬ್ಬಂದಿ, ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ, ಪ್ರತಿಯೊಬ್ಬರು ನಿಯಮಾನುಸಾರ ತೆರಿಗೆ ಪಾವತಿಸಬೇಕೆಂದು ಪೌರಾಯುಕ್ತ ಡಿ.ಲೋಹಿತ್ ಮನವಿ ಮಾಡಿದ್ದಾರೆ.

ನಗರದಲ್ಲಿ ಸ್ವಚ್ಛತೆ ನಿರ್ವಹಣೆ, ಸಮರ್ಪಕ ಕುಡಿಯುವ ನೀರು ಪೂರೈಕೆಯ ಜತೆಗೆ ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಮುಖ ಆದ್ಯತೆ ನೀಡುತ್ತಿದ್ದು ತ್ವರಿತವಾಗಿ ಸ್ಪಂದಿಸಲಾಗುತ್ತಿದೆ. ಇದರ ನಡುವೆ ಹಲವರು ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ. ಈಗಲಾದರೂ ಮನೆ ಬಳಿಗೆ ಬರುವ ಸಿಬ್ಬಂದಿ ಇಲ್ಲವೇ ಕಚೇರಿಗೆ ಬಂದು ಸುಂಕ ಪಾವತಿಸಬಹುದು ಎಂದು ತಿಳಿಸಿದ್ದಾರೆ.ಕಂದಾಯಾಧಿಕಾರಿ ರಮೇಶ್ ಬಾಬು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net