ಕಂದಾಯ ಭೂಮಿ ಅರಣ್ಯಕ್ಕೆ ವರ್ಗಾಯಿಸದಿರಲು ಒತ್ತಾಯ

26 ckm 4
ಚಿಕ್ಕಮಗಳೂರಿನಲ್ಲಿ ನವೀಕರಿಸಬಹುದಾದ ಇಂಧನಮೂಲಗಳ ನಿಗಮದ ಅಧ್ಯಕ್ಷ ಟಿ.ಡಿ,ರಾಜೇಗೌಡ ಅವರಿಗೆ ಮನವಿ ಸಲ್ಲಿಸಿದ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲೆಯಲ್ಲಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸ ದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎಂ.ಪಿ.ಕುಮಾರಸ್ವಾಮಿ, ಹುಣಸೆಮಕ್ಕಿ ಲಕ್ಷ್ಮಣ್‌, ಶಿವರಾಜೇಗೌಡ, ಗಣೇಶಮೂರ್ತಿ ಮತ್ತಿತರರಿದ್ದರು.
Published on
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸ ದಂತೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳು ನವೀಕರಿಸಬಹುದಾದ ಇಂಧನ ನಿಗಮ ಮಂಡಳಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲೆ ಹಾಗೂ ಮೂಡಿಗೆರೆ ತಾಲೂಕಿನ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಬಾರದು. ಭವಿಷ್ಯದ ಮಕ್ಕಳಿಗೆ ಮೂಲಭೂತ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಕಂದಾಯ ಭೂಮಿಯನ್ನು ಅರಣ್ಯಕ್ಕೆ ಸೇರಿಸದೇ ೪/೧ ನೋಟಿ ಫಿಕೇಷನ್‌ನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಮೂಡಿಗೆರೆ ಭಾಗದ ಕಳಸ ತಾಲೂಕು ಹಾಗೂ ಆಲ್ದೂರು, ವಸ್ತಾರೆ ಹೋಬಳಿಯ ಹಲವು ಭಾಗಗಳ ಗ್ರಾಮಗಳಲ್ಲಿ ೪/೧ ನೋಟಿಫಿಕೇಷನ್ ಪರಿವರ್ತನೆ ಮಾಡಲು ಅರಣ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಬಹುತೇಕ ಈ ಗ್ರಾಮದ ಭೂಮಿಗಳಲ್ಲಿ ಕೃಷಿಕರು, ನಿವೇಶನ ರಹಿತರು ವಾಸವಾಗಿದ್ದು ಜೊತೆಗೆ ಸಾವಿರಾರು ಮಂದಿ ನಿವೇಶನಕ್ಕಾಗಿ ಕಾದು ಕುಳಿತುಕೊಂಡಿದ್ದಾರೆ ಎಂದು ಹೇಳಿದರು. ಇನ್ನೂ ಕೆಲವೆಡೆ ಸಾವಿರಾರು ಕುಟುಂಬಗಳು, ಬೆಳೆಗಾರರ ಕೂಲಿಲೈನ್‌ಗಳಲ್ಲಿ ನಿವೇಶನಕ್ಕಾಗಿ, ಸ್ವಂತ ಮನೆ ನಿರ್ಮಿಸಿಕೊಳ್ಳಲು ಕನಸು ಕಾಣುತ್ತಿದ್ದಾರೆ. ಅಂಗನವಾಡಿ ಶಾಲೆ, ಆಟದ ಮೈದಾನ, ಸಮುದಾಯ ಭವನ, ಸ್ಮಶಾನಕ್ಕೆ ಜಾಗವಿಲ್ಲದೇ ಹಾಹಾಕಾರಪಡುವಂತಾಗಿದೆ ಎಂದರು. ಮೂಡಿಗೆರೆ ತಾಲೂಕು ಸೇರಿದಂತೆ ಜಿಲ್ಲೆಯ ಯಾವುದೇ ಗ್ರಾಮದ ಕಂದಾಯ ಭೂಮಿಯನ್ನು ಅರಣ್ಯ ಎಂದು ಪರಿವರ್ತನೆ ಮಾಡಬೇಕಾದರೆ ಎಲ್ಲಾ ಮೂಲಭೂತ ಸೌಲಭ್ಯದ ಕೊರತೆಗಳನ್ನು ನೀಗಿಸಬೇಕಾಗಿದೆ ಮತ್ತು ಅರಣ್ಯಕ್ಕೆ ವರ್ಗಾಯಿಸಬೇಕಾದ ವೇಳೆಯಲ್ಲಿ ಮುಂದಿನ ಪೀಳಿಗೆಗೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರವನ್ನು ಕೈ ಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಸ್ಸಿಎಸ್ಟಿ  ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ವಿಎಸ್‌ಎಸ್ ಅಧ್ಯಕ್ಷ ಶಿವರಾಜೇಗೌಡ, ಮುಖಂಡರಾದ ಗಣೇಶಮೂರ್ತಿ, ಸತೀಶ್, ಜಗದೀಶ್, ಕಿಶನ್, ಉಮೇಶ್, ದೇವರಾಜ್, ಪುಟ್ಟಸ್ವಾಮಿ, ಕೃಷ್ಣಮೂರ್ತಿ, ಕುಮಾರಸ್ವಾಮಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net