ಕಂದಾಯ ಪಾವತಿಸಿ ಸೌಲಭ್ಯ ಪಡೆಯಿರಿ

ldh revenu
ಕಲ್ಲತ್ತಿಪುರ ಗ್ರಾಮದಲ್ಲಿ ಗಡ ಪಿಡಿಒ ಟಿ.ಶಿವಮೂರ್ತಿ, ಕಾರ್ಯದರ್ಶಿ ಗಂಗಣ್ಣ, ಆರ್. ಸತೀಶ ಆರ್.ಗಗನ್ ಗ್ರಾಮಸ್ಥರ ಮನೆ ಬಾಗಿಲಿಗೆ ತೆರಳಿ ಕಂದಾಯ ಪಾವತಿ ಮಾಡುವಂತೆ ಮನವಿ ಮಾಡಿದರು.
Published on

ಲಿಂಗದಹಳ್ಳಿ: ಅನೇಕ ವರ್ಷಗಳಿಂದ ತಿಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಬಾಕಿ ಉಳಿಸಿಕೊಂಡಿರುವುದರಿಂದ ಗ್ರಾಮಗಳಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾಮಸ್ಥರು ಕಂದಾಯ ಸಕಾಲಕ್ಕೆ ಪಾವತಿ ಮಾಡುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಗಡ ಪಿಡಿಒ ಟಿ.ಶಿವಮೂರ್ತಿ ಹೇಳಿದರು.

ಕಲ್ಲತ್ತಿಪುರ ಗ್ರಾಮದಲ್ಲಿ ನಡೆದ ಕಂದಾಯ ವಸೂಲಾತಿ ಆಂದೋಲನದಲ್ಲಿ ಮಾತನಾಡಿದ ಅವರು, ಸರ್ಕಾರ ಬಾಕಿ ಉಳಿದಿರುವ ಕಂದಾಯ ವಸೂಲಿ ಮಾಡಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದೆ. ಕುಡಿಯುವ ನೀರಿನ ಕಂದಾಯ, ನಿವೇಶನ, ವಾಸದ ಮನೆ, ಅಂಗಡಿ, ಹೋಟೆಲ್, ರೆಸಾರ್ಟ್, ಲಾಡ್ಜ್‌ಗಳ ಕಂದಾಯವನ್ನು ಸಕಾಲದಲ್ಲಿ ಪಾವತಿ ಮಾಡದೆ ಇದ್ದರೆ ಅಂಥವರ ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ಗ್ರಾಮಸ್ಥರು ಇದಕ್ಕೆ ಅವಕಾಶ ನೀಡದೆ ಕಾಲ ಕಾಲಕ್ಕೆ ಸರಿಯಾಗಿ ಕಂದಾಯ ಪಾವತಿಸಿ ಗ್ರಾಪಂ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಕಂದಾಯ ವಸೂಲಾತಿ ಆಂದೋಲನದಲ್ಲಿ ಗ್ರಾಪಂ ಕಾರ್ಯದರ್ಶಿ ಗಂಗಣ್ಣ, ಸಿಬ್ಬಂದಿ ಆರ್.ಸತೀಶ, ಆರ್.ಗಗನ್, ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net