ಕಂದಾಯ ಜಮೀನು ಮಂಜೂರಾತಿಗೆ ಒತ್ತಾಯಿಸಿ ಪ್ರತಿಭಟನೆ

24 ckm 3
ಚಿಕ್ಕಮಗಳೂರು ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಡಿಎಸ್‌ಎಸ್ ಕಾರ್ಯಕರ್ತರು ಒತ್ತುವರಿ ಮಾಡಿರುವ ಕಂದಾಯ ಜಮೀನನ್ನು ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿದರು. ಬಾಲಕೃಷ್ಣ ಬಿಳೇಕಲ್ಲು, ಗಿರೀಶ್, ಪ್ರಸನ್ನ, ಕೆ.ಕೆ.ಬಾಬು, ವಸಂತ್ ಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಒತ್ತುವರಿ ಮಾಡಿರುವ ಕಂದಾಯ ಜಮೀನನ್ನು ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಮುಖಂಡರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು ಕಳಸ ತಾಲೂಕು ತನೂಡಿ ಗ್ರಾಮದ ಸ.ನಂ.೩೬ರಲ್ಲಿ ೧೭೦ ಕುಟುಂಬಗಳು ಸರ್ಕಾರಿ ಜಮೀನನ್ನು ಪೂರ್ವಿಕರ ಕಾಲದಿಂದಲೂ ಸಾಗುವಳಿ ಮಾಡಿ ಕಾಫಿ, ಮೆಣಸು, ಬಾಳೆ ಹಾಗೂ ತೆಂಗು ಬೆಳೆದು ಮತ್ತು ಮನೆ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಜಮೀನು ಮತ್ತು ವಾಸದ ಮನೆ ಬಿಟ್ಟರೆ ಬೇರೆ ಯಾವುದೇ ಆಸ್ತಿ ಈ ಕುಟುಂಬಕ್ಕಿಲ್ಲ. ಇತ್ತೀಚೆಗೆ ಅರಣ್ಯ ಇಲಾಖೆ ೭೫ ಕುಟುಂಬಕ್ಕೆ ಹಕ್ಕುಪತ್ರ ನೀಡಿದೆ. ಉಳಿದ ಹತ್ತು ಕುಟುಂಬಗಳಿಗೆ ಮೂಲಹಕ್ಕುಪತ್ರ ಹಾಗೂ ೮೫ ಕುಟುಂಬಕ್ಕೆ ಹಕ್ಕುಪತ್ರವನ್ನೇ ನೀಡಿರುವುದಿಲ್ಲ ಎಂದು ತಿಳಿಸಿದರು.

ಸ್ವಾಧೀನಾನುಭವದಲ್ಲಿರುವ ಜಮೀನು ಮಂಜೂರಾತಿ ಕೋರಿ ಹಿಂದೆ ನಮೂನೆ ೫೦, ೫೩, ೯೪ಸಿ ಅಡಿ ಅರ್ಜಿ ಸಲ್ಲಿಸಲಾಗಿದೆ. ಆದರೂ ಮಂಜೂರಾತಿ ದೊರಕಿಲ್ಲ. ಅಲ್ಲದೇ ಜಮೀನಿನ ಸ್ವಾಧೀನತೆ ಬಗ್ಗೆ ಯಾವುದೇ ಹಕ್ಕುಪತ್ರ, ಸಾಗುವಳಿ ಚೀಟಿ ನೀಡಿರುವುದಿಲ್ಲ ಎಂದು ಆರೋಪಿಸಿದರು.

ಈ ಸರ್ವೆ ನಂಬರ್‌ನಲ್ಲಿ ಅರಣ್ಯ ಇಲಾಖೆಯಿಂದ ರೆವಿನ್ಯೂ ಇಲಾಖೆಗೆ ೮೦೦ ಎಕರೆ ಪ್ರದೇಶ ಮಂಜೂರಾಗಿದ್ದು, ಆ ಪ್ರದೇಶದಲ್ಲಿ ಹಲವು ಕುಟುಂಬಗಳಿಗೆ ಜಮೀನು ವಿಲೇವಾರಿ ಮಾಡಲಾಗಿದೆ. ಈ ಪೈಕಿ ೧೯೯೧ರಲ್ಲಿ ಗೋಮಾಳ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡ ಕೃಷಿಕರಿಗೆ ಜಮೀನು ಮಂಜೂರಾತಿ ನೀಡದೆ ಅರ ಣ್ಯ ಪ್ರದೇಶವೆಂದು ಘೋಷಣೆ ಮಾಡಲಾಗಿದೆ ಎಂದು ದೂರಿದರು.

ಆದ್ದರಿಂದ ಸಂಬAಧಿಸಿದ ಅಧಿಕಾರಿಗಳು ಶೀಘ್ರವೇ ಪರಿಶೀಲನೆ ನಡೆಸಿ ಸ್ವಾಧೀನ ಹಾಗೂ ಸಾಗುವಳಿ ಅನುಭವದಲ್ಲಿರುವ ಜಾಗವನ್ನು ಅವರ ಹೆಸರಿಗೆ ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಿ ಖಾತೆ ದಾಖಲಿಸಿ ಮುಂದಿನ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ಗಿರೀಶ್, ಪ್ರಸನ್ನ, ಖಜಾಂಚಿ ಕೆ.ಕೆ. ಬಾಬು, ರಾಜ್ಯಸಮಿತಿ ಸದಸ್ಯ ವಸಂತ್‌ಕುಮಾರ್, ಕಳಸ ತಾಲೂಕು ಸಂಚಾಲಕ ವಸಂತ್, ರವಿ, ಉಮೇಶ್, ಮಹಿಳಾ ಸಂಚಾಲಕಿ ಪವಿತ್ರ, ಮುಖಂಡರಾದ ರಘು, ನಾಗೇಶ್, ಅಚ್ಚು, ಶೋಭಾ, ಗ್ರಾಮಸ್ಥರಾದ ಸೀನಾ, ಲಕ್ಷö್ಮಣ್, ದಾನಪ್ಪ, ಚಂದ್ರು, ಸುರೇಶ್, ಸುಧಾ, ಕಮಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net