ಕಂದಾಯ ಇಲಾಖೆ ನೌಕರರ ಸೇವೆ ಅನನ್ಯ

2ckd3
Published on

ಚಿಕ್ಕೋಡಿ: ಗ್ರಾಮಮಟ್ಟದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ ಕಂದಾಯ ಇಲಾಖೆ ನೌಕರರ ಸೇವೆ ಮಹತ್ತರವಾದುದು ಎಂದು ತಹಸೀಲ್ದಾರ್ ಸಿ.ಎಸ್.ಕುಲಕರ್ಣಿ ಹೇಳಿದರು.

ಇಲ್ಲಿನ ಡಯಟ್ ಸಭಾಭವನದಲ್ಲಿ ತಾಲೂಕು ಆಡಳಿತ ಮಂಗಳವಾರ ಹಮ್ಮಿಕೊಂಡಿದ್ದ ಕಂದಾಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರದ ಪ್ರತಿಯೊಂದು ಕಾರ್ಯಕ್ರಮ ಮತ್ತು ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ಮುಟ್ಟಿಸುವ ಕಾರ್ಯ ಕಂದಾಯ ಇಲಾಖೆ ನೌಕರರಿಂದ ಆಗುತ್ತಿದೆ ಎಂದರು.

ಶಿರಸ್ತೆದಾರ ಪಿ.ಬಿ. ಶೀಲವಂತ ಮಾತನಾಡಿ, ಸರ್ಕಾರದ ಆಡಳಿತದ ಅಭಿವದ್ಧಿಯಲ್ಲೂ ಕಂದಾಯ ಇಲಾಖೆಯ ನೌಕರರು ಜನರಿಂದ ಭೂ ತೆರಿಗೆ ಸೇರಿ ವಿವಿಧ ತೆರಿಗೆ ವಸೂಲಿ ಮಾಡಿಕೊಡುತ್ತಿದ್ದಾರೆ ಎಂದರು.

ಪಿ.ವಿ.ಸೊಲ್ಲಾಪುರೆ, ಜಿ.ಸರಿತಾ, ಆರ್.ಬಿ.ಭರಮಪ್ಪಗೋಳ, ಕಂದಾಯ ನಿರೀಕ್ಷಕರಾದ ಆರ್.ಐ.ನಾಯಿಕ, ಡಿ.ಎಸ್.ವಂಟಗೂಡೆ, ಎಂ.ಎ.ನಾಗರಾಳೆ, ಪ್ರವೀಣ ಗಂಧ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net