

ಚಿಕ್ಕಮಗಳೂರು: ಅಕ್ರಮವಾಗಿ ಭೂಮಿ ಕಬಳಿಸಲು ಸಂಚು ಮಾಡಿರುವ ವ್ಯಕ್ತಿಗಳ ವಿರುದ್ಧ ಹಾಗೂ ಆಸ್ತಿಗೆ ಸಂಬAಧಿಸಿದAತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿಪರ ಸಂಘಟನೆಯ ಮುಖಂಡರು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್ ಮತ್ತು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್. ವೆಂಕಟೇಶ್, ಅಜ್ಜಂಪುರ ತಾಲೂಕು ಕೆ.ಗೊಲ್ಲರಹಳ್ಳಿಯಲ್ಲಿ ರಾಜಪ್ಪ ಎಂಬುವರ ತಂದೆ ಸಣ್ಣಮಲಿಯಪ್ಪ ಕಳೆದ ೧೯೫೦-೫೧ರಲ್ಲಿ ಶಿವಪುರ ಗ್ರಾಮದಲ್ಲಿ ೫.೩೩ ಎಕರೆ ಜಮೀನನ್ನು ದೊಡ್ಡಮಲಿಯಪ್ಪ ಎಂಬುವರಿAದ ಶುದ್ಧಕ್ರಯಕ್ಕೆ ಖರೀಸಿದ್ದರೆ ಎಂದು ತಿಳಿಸಿದರು.
ಕೈಬರಹದ ಪಹಣಿ ಸಣ್ಣಮಲಿಯಪ್ಪನವರ ಹೆಸರಿಗೆ ಬರುತ್ತಿದ್ದು, ಕಂಪ್ಯೂಟರ್ ಪಹಣಿಯಲ್ಲಿ ಹೆಸರು ಕೈಬಿಟ್ಟಿರುವುದು ೫ ವರ್ಷಗಳ ಬಳಿಕ ತಿಳಿದುಬಂದಿದೆ. ಪಹಣಿ ತಿದ್ದುಪಡಿಮಾಡಿಕೊಡುವಂತೆ ಗ್ರಾಮಲೆಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದು, ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಿಕೊಡುವ ಅಧಿಕಾರ ನನಗಿಲ್ಲ, ತರೀಕೆರೆ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸುವಂತೆ ತಹಸೀಲ್ದಾರ್ ತಿಳಿಸಿದ್ದಾರೆ ಎಂದು ಹೇಳಿದರು.
ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದು, ನ್ಯಾಯಾಲಯದ ಮೂಲಕ ಆದೇಶ ಪಡೆದು ಪಹಣಿಯಾಗಬೇಕಾಗುತ್ತದೆ ಎಂದು ತಿಳಿಸಿದಾಗ ಇದಕ್ಕೆ ಸಂಬAಧಿಸಿದAತೆ ಅರ್ಜಿ ಸಲ್ಲಿಸಿ ಕೇಸು ನಡೆಯುತ್ತಿರುವಾಗ ಜಮೀನು ನೀಡಿದ ಕುಟುಂಬದ ಮಕ್ಕಳು ಮೊಕದ್ದಮೆ ಹೂಡಿಕೊಂಡು ೨೦೨೦ರ ಪಹಣಿಯ ಮೇಲೆ ಕೇಸುಮಾಡಿಕೊಂಡು ಕೊನೆಗೆ ನ್ಯಾಯಾಲಯದಲ್ಲಿ ರಾಜೀಮಾಡಿಕೊಂಡ ಬಳಿಕ ಖಾತೆ ಮಾಡಿಸಿಕೊಂಡು ಜಮೀನನ್ನು ಜೋಡಿಬೋಕಿಕೆರೆ ಗ್ರಾಮದ ರೈತರೊಬ್ಬರಿಗೆ ವ್ಯಾಪಾರಕ್ಕೆ ಕೊಟ್ಟಿದ್ದಾರೆ ಎಂದು ದೂರಿದರು.
ತರೀಕೆರೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪಹಣಿ ತಿದ್ದುಪಡಿ ಕೇಸು ನಡೆಯುತ್ತಿರುವ ವಿಚಾರವನ್ನು ಸಿವಿಲ್ ಕೋರ್ಟ್ಗೆ ತಿಳಿಸದೆ ವಂಚನೆ ಮಾಡುವ ಉz್ದೆÃಶದಿಂದ ಅಡ್ಡದಾರಿಗಳನ್ನು ಹುಡುಕಿ ವಕೀಲರೊಬ್ಬರ ಮೂಲಕ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಕ್ರಯಕ್ಕೆ ಖರೀದಿಸಿದ ಜಮೀನನ್ನು ವಂಚಿಸಲು ನಕಲಿ ಇಸಿ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.
ಹಲವು ವರ್ಷಗಳಿಂದ ತರೀಕೆರೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಇದ್ದ ಕೇಸು ಜನವರಿ ೯ರಂದು ಭೂಮಿ ಖರೀದಿಸಿದ್ದವರ ಪರವಾಗಿ ಆಗಿದೆ. ಹೈಕೋರ್ಟ್ನಲ್ಲೂ ರಾಜಿ ಡಿಕ್ರಿಯನ್ನು ಚಾಲೆಂಜ್ ಮಾಡಿದ್ದು, ನ್ಯಾಯಾಲಯ ಎಲ್ಲಾ ಕೇಸುಗಳನ್ನು ವಜಾಗೊಳಿಸಿದೆ ಎಂದು ತಿಳಿಸಿದರು.
ತರೀಕೆರೆಗೆ ಉಪವಿಭಾಗಾಧಿಕಾರಿಗಳಾಗಿ ಬಂದ ಕಾಂತರಾಜ್ ಅವರು ಹಲವು ವರ್ಷಗಳಿಂದ ಇದ್ದ ೧,೮೦೦ ಪ್ರಕರಣ ಇತ್ಯರ್ಥಪಡಿಸಿದ್ದಾರೆ. ಕೆಲವರು ಈ ಅಧಿಕಾರಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರಕರಣ ಸತ್ಯಾಸತ್ಯತೆಯನ್ನು ತಿಳಿಸಿಕೊಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ರಮೇಶ್, ದಲಿತ ಸಂಘರ್ಷ ಸಮಿತಿ ಮುಖಂಡರಾದ ಚಂದ್ರಶೇಖರ್, ಬಾಲರಾಜ್, ಮಂಜಪ್ಪ, ಜಗದೀಶ್, ಕೆ.ಗೊಲ್ಲರಹಳ್ಳಿಯ ಮನೋಜ್ ಇದ್ದರು.