ಕಂದಾಚಾರಗಳಿಗಾಗಿ ಮಕ್ಕಳ ಬಾಲ್ಯವನ್ನು ಬಲಿ ಕೊಡದಿರಿ

CTD KANDACHARA
Published on

ಚಿತ್ರದುರ್ಗ: ಜಿಲ್ಲೆಯ ಹಲವು ಗೊಲ್ಲರಹಟ್ಟಿಗಳಲ್ಲಿ ಇನ್ನೂ ಮೌಢ್ಯ ಹಾಗೂ ಕಂದಾಚಾರಗಳು ಇರುವುದು ಬೇಸರದ ಸಂಗತಿ ಎಂದು ಭರಮಸಾಗ ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ, ಭರಮ ಸಾಗರ ಶಿಶು ಅಭಿವೃದ್ಧಿ ಯೋಜನೆ, ಗ್ರಾಪಂ ಹಾಗೂ ಭರಮಸಾಗರ ಪೊಲೀಸ್ ಠಾಣೆ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ತಾ ಲೂಕು ಹುಣಸೇಕಟ್ಟೆ ಗೊಲ್ಲರಹಟ್ಟಿ ಸರ್ಕಾರಿ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ಬಾಲ್ಯವಿವಾಹ ಮತ್ತು ಪೋಕ್ಸೊ ಕಾಯ್ದೆ ಕುರಿತ ಅರಿವು ಜಾಗೃತಿ ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು ಮೌಢ್ಯ ಹಾಗೂ ಕಂದಾಚಾರಗಳ ಪ್ರಭಾವಕ್ಕೆ ಒಳಗಾಗಿ ಬಾಲ್ಯವಿವಾಹ ಮಾಡಬಾರದು. ಮಕ್ಕಳ ಬಾಲ್ಯವನ್ನು ಬಲಿ ಕೊಡ ಬಾರದು. ಅನಕ್ಷರತೆ ಮೌಢ್ಯಗಳಿಗೆ ಕಾರಣವಾಗುತ್ತದೆ. ಬಾಲ್ಯವಿವಾಹ ಮತ್ತು ಅಪ್ರಾಪ್ತ ವಯಸ್ಸಿನಲ್ಲಿ ತಾಯಿ ಆಗುತ್ತಿರುವ ಬಾಲ ಪ್ರಕರ ಣಗಳಿಗೆ ಕಳವಳ ವ್ಯಕ್ತಪಡಿಸಿದರು.
ಭರಮಸಾಗರ ಠಾಣೆ ಸಿಪಿಐ ಮುತ್ತುರಾಜ್ ಮಾತನಾಡಿ,ಆಧುನಿಕ ಸಮಾಜದಲ್ಲೂ ಮೌಢ್ಯಾಚರಣೆ,ಗೊಡ್ಡು ಸಂಪ್ರದಾಯಗಳು ಜೀ ವಂತವಾಗಿವೆ. ಬಾಲ್ಯವಿವಾಹ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯವಿವಾಹ ಮಾಡುವಂಥ ಪಾಲಕರು ಸಂಬಂಧಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಪ್ರಾಪ್ತರ ಮೇಲಿನ ದೌರ್ಜನ್ಯ ತಡೆಗೆ ಪೋಕ್ಸೊ ಜಾರಿ ಮಾಡಲಾಗಿದೆ ಎಂದರು.
ಲಿಂಗತಜ್ಞೆ ಡಿ.ಗೀತಾ ಅವರು ಮಾತನಾಡಿ, ಬಾಲ್ಯವಿವಾಹ ಹಾಗೂ ದೌರ್ಜನ್ಯ ತಡೆಗೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಹಾಗೂ ಪೋಲಿಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡುವಂತೆ ಮಾಹಿತಿ ನೀಡಿದರು. ಜಿಲ್ಲಾ ಸಂಯೋಜಕ ಚೇತನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಗ್ರಾ.ಪಂ.ಅಧ್ಯಕ್ಷೆ ರಾಧಮ್ಮ, ಸದಸ್ಯ ಸಿದ್ದೇಶ್,ಪಿಡಿಒ ವನಜಾಕ್ಷಿ,ತಾ.ಪಂ ಸದಸ್ಯ ಸುರೇಶ್,ಸಹಾಯಕ ಶಿಶು ಅಭಿವೃದ್ಧಿ ಅ ಧಿಕಾರಿ ಹೇಮಾವತಿ,ವೃತ್ತ ಮೇಲ್ವಿಚಾರಕಿ ವಿನೋದಾ,ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net