ಕಂದವಾರ ಕೆರೆ ಬಳಿ ಪರಿಸರಸ್ನೇಹಿ ಪಾರ್ಕ್

21CBP6
Published on

ಚಿಕ್ಕಬಳ್ಳಾಪುರ : ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಂದವಾರ ಕೆರೆ ಬಳಿ 8.10 ಕೋಟಿ ರೂ. ವೆಚ್ಚದಲ್ಲಿ ಕೆಆರ್‌ಎಸ್‌ನ ಬೃಂದಾವನ ಮಾದರಿಯಲ್ಲಿಯೇ ಪರಿಸರಸ್ನೇಹಿ ಎಕೋ ಥೀಮ್ ಪಾರ್ಕ್ ನಿರ್ಮಿಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಜಿಲ್ಲಾಡಳಿತ ಭವನ ಮುಂಭಾಗದ ಗೋಪಾಲಕೃಷ್ಟ ಅಮಾನಿಕೆರೆಯಲ್ಲಿ ಬುಧವಾರ ಪರಿಶೀಲನೆ ನಡೆಸಿ, ಎಚ್.ಎನ್ ವ್ಯಾಲಿ ನೀರಿನಿಂದ ಗೋಪಾಲಕೃಷ್ಣ ಅಮಾನಿಕರೆ ಭಾಗಶಃ ತುಂಬಿದ್ದು, ಈ ಕೆರೆಯನ್ನು ಪ್ರವಾಸೋದ್ಯಮ ಕೇಂದ್ರವಾಗಿ ಪರಿವರ್ತಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಎಚ್.ಎನ್.ವ್ಯಾಲಿ ಮೂಲಕ ಜಿಲ್ಲೆಯ ಕೆರೆಗಳ ಅಂತರ್ಜಲ ಹೆಚ್ಚಿಸಲು 44 ಕೆರೆಗಳನ್ನು ಆಯ್ಕೆ ಮಾಡಿದ್ದು ಈ ಪೈಕಿ ಸಣ್ಣ ನೀರಾವರಿಯ ಇಲಾಖೆ ವ್ಯಾಪ್ತಿಯಡಿ 32 ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಈವರೆಗೆ 17 ಕೆರೆಗಳಿಗೆ ಶೇ.30ರಷ್ಟು, 6 ಕೆರೆಗಳಿಗೆ ಶೇ.50 ಹಾಗೂ 7 ಕೆರೆಗಳಿಗೆ ಶೇ.51 ರಿಂದ 99 ರಷ್ಟು ನೀರನ್ನು ತುಂಬಿಸಲಾಗಿದೆ. 2 ಕೆರೆಗಳನ್ನು ತುಂಬಿಸಬೇಕಾಗಿದೆ. ಇದರ ಜತೆಗೆ ಜಿಪಂ ವ್ಯಾಪ್ತಿಯ 12 ಕೆರೆಗಳನ್ನು ಆಯ್ಕೆ ಮಾಡಿದ್ದು 6 ಕೆರಗಳಿಗೆ ಶೇ.30, 5 ಕೆರೆಗಳಿಗೆ ಶೇ.99 ರಷ್ಟು ನೀರು ತುಂಬಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net