

ಗಂಗಾಧರ್ ಬೈರಾಪಟ್ಟಣ ರಾಮನಗರ
ಕಲಿಕೆಯಲ್ಲಿನ ಕೊರತೆ ನೀಗಿಸಬೇಕಿದ್ದ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಹಾಳೆಗಳನ್ನು ವಿತರಿಸುವಲ್ಲಿ ಸರ್ಕಾರದ ವೈಲ್ಯದಿಂದಾಗಿ ಕಲಿಕಾ ಕಂದಕ ನಿರ್ಮಾಣ ಮಾಡುತ್ತಿದೆ.
ಕರೊನಾ ಸಂದರ್ಭದಲ್ಲಿ ಮಕ್ಕಳಲ್ಲಿ ಉಂಟಾಗಿದ್ದ ಶಿಕ್ಷಣದ ಕೊರತೆ ನೀಗಿಸಲು ಮೇ 16ರಿಂದಲೇ ಶಾಲೆಗಳನ್ನು ರ್ಪೂಣ ಪ್ರಮಾಣದಲ್ಲಿ ಸರ್ಕಾರ ಆರಂಭಿಸಿದ್ದರೂ, ವ್ಯವಸ್ಥಿತವಾದ ಯೋಜನೆ ಇಲ್ಲದೆ ಮಕ್ಕಳು ಹಾಗೂ ಶಿಕ್ಷಕರು ಕೇವಲ ಕಾಟಾಚಾರಕ್ಕೆ ಶಾಲೆಗೆ ಬರುವಂತೆ ಆಗಿದೆ. ಕಲಿಕಾ ಹಾಳೆಗಳನ್ನು ವಿತರಣೆ ಮಾಡುವುದಾಗಿ ಹೇಳಿದ್ದ ಶಿಕ್ಷಣ ಇಲಾಖೆ ಇದುವರೆಗೂ ಕ್ರಮ ಕೈಗೊಳ್ಳದೇ ಇರುವ ಕಾರಣ ಮಕ್ಕಳು ಕಲಿಕೆಯಲ್ಲಿ ಮತ್ತೆ ಹಿಂದುಳಿಯುವಂತೆ ಆಗಿದೆ.
ಹಾಳೆಗಳು ವಿತರಣೆ ಆಗಿಲ್ಲ: ಕರೊನಾದಿಂದಾಗಿ ಎರಡು ವರ್ಷ ತರಗತಿಗಳು ಸಮರ್ಪಕವಾಗಿ ನಡೆಯದೇ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎನ್ನುವ ಕಾರಣಕ್ಕೆ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಣೆ ಮಾಡಿ, ಒಂದರಿಂದ 9ನೇ ತರಗತಿ ಮಕ್ಕಳಿಗೆ ಕಲಿಕಾ ಹಾಳೆಗಳ ಮೂಲಕ ಪಠ್ಯದ ಕೊರತೆ ಸರಿದೂಗಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇದು ಶ್ಲಾನೀಯವಾದರೂ ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳದೆ ಶಾಲೆ ಆರಂಭಿಸಿದೆ. ಶಾಲೆಗಳು ಆರಂಭಗೊಂಡು 45 ದಿನ ಕಳೆದರೂ ಹಾಳೆಗಳನ್ನು ವಿತರಿಸದ ಕಾರಣ ಮಕ್ಕಳು ಕಾಟಾಚಾರಕ್ಕೆ ಎನ್ನುವಂತೆ ಶಾಲೆಗೆ ಬರುವಂತೆ ಆಗಿದೆ. ಜತೆಗೆ ಶಿಕ್ಷಕರೂ ಕೆಲಸವಿಲ್ಲದೆ ಆಯಾ ರಾಮ್ ಗಯಾ ರಾಮ್ಗಳಾಗಿದ್ದಾರೆ.
ಸ್ಪಷ್ಟ ಉತ್ತರವಿಲ್ಲ: ಕಾಗದದ ಕೊರತೆ ನೆಪವೊಡ್ಡಿ ಕಲಿಕಾ ಹಾಳೆಗಳನ್ನು ಪೂರೈಕೆ ಮಾಡುವಲ್ಲಿ ವಿಲವಾದ ಶಿಕ್ಷಣ ಇಲಾಖೆ, ಇದನ್ನು ಮುಚ್ಚಿಕೊಳ್ಳಲು ಮೇ16ರಿಂದ ಆರಂಭಗೊಂಡ ಶಾಲೆಯ ಮೊದಲ 15 ದಿನಗಳನ್ನು ಮಳೆ ಬಿಲ್ಲು ಕಾರ್ಯದಲ್ಲಿ ನಡೆಸುವಂತೆ ಮಾಡುವಲ್ಲಿ ಯಶಸ್ವಿ ಆಯಿತು. ಆದರೆ ಜೂ.1 ಆದರೂ ಕಲಿಕಾ ಹಾಳೆಗಳು ಬರುತ್ತವೆ ಎನ್ನುವ ಶಿಕ್ಷಕರ ನಿರೀೆ 26 ಕಳೆದರೂ ಸಾಕಾರಗೊಳ್ಳಲೇ ಇಲ್ಲ. ಸ್ಥಳಿಯ ಸಿಆರ್ಪಿಯಿಂದ ಆರಂಭಗೊಂಡು ಡಿಡಿಪಿಐ ಕಚೇರಿವರೆಗೆ ಯಾರನ್ನು ಕೇಳಿದರೂ ನಾಳೆ, ನಾಳಿದ್ದು ಬರುತ್ತದೆ ಎನ್ನುವ ಸಿದ್ಧ ಉತ್ತರ ಸಿಗುತ್ತಿದೆ.
ವೆಚ್ಚ ಮಾಡಲು ಸಿದ್ಧರಿಲ್ಲ: ಇಲಾಖೆಯಿಂದ ಅನುದಾನ ಕೊಡುವುದಿಲ್ಲ ಎಂಬ ಕಾರಣ ಕಲಿಕಾ ಹಾಳೆಗಳನ್ನು ಜೆರಾಕ್ಸ್ ಮಾಡಿಸಿ ಮಕ್ಕಳಿಗೆ ಹಂಚಿಕೆ ಮಾಡಲು ಶಿಕ್ಷಕರೂ ಸಿದ್ಧರಿಲ್ಲ. ಬಿಇಒ ಕಚೇರಿಯನ್ನು ಸಂಪಕಿರ್ಸಿದರೆ ಜೆರಾಕ್ಸ್ ಮಾಡಿಸಿ ಕೊಡಿ ಎನ್ನುವ ಅಸಡ್ಡೆ ಉತ್ತರ ಬರುತ್ತದೆ. ಆದರೆ ಇದಕ್ಕೆ ಬೇಕಾದ ಹಣ ಯಾರು ಕೊಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. 500&1000 ರೂ. ಆದರೆ ನಾವೇ ಖರ್ಚು ಮಾಡಬಹುದು. ಒಂದು ತಿಂಗಳಿಗೆ ಬೇಕಾದ ಪ್ರತಿಗಳನ್ನು ಜೆರಾಕ್ಸ್ ಮಾಡಿಸಲು ವಿದ್ಯಾಥಿರ್ಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ವಿಷಯಕ್ಕೆ 5ರಿಂದ 50 ಸಾವಿರ ರೂ.ವರೆಗೆ ರ್ಖಚಾಗುತ್ತದೆ. ಇದನ್ನು ಭರಿಸುವುದು ಹೇಗೆ ಸಾಧ್ಯ ಎನ್ನುವುದು ಶಿಕ್ಷಕರ ಪ್ರಶ್ನೆ.
ಸ್ಪಷ್ಟ ನಿರ್ದೇಶನವೂ ಇಲ್ಲ: ಶಾಲೆಗೆ ಮಕ್ಕಳು ಬಂದರೂ ಅವರಿಗೆ ಏನು ಪಾಠ ಮಾಡಬೇಕು ಎನ್ನುವ ನಿರ್ದೇಶನವೂ ಮೇಲಿನ ಅಧಿಕಾರಿಗಳಿಂದ ಬರದೇ ಇರುವ ಕಾರಣಕ್ಕೆ ಶಿಕ್ಷಕರು ಸುಮ್ಮನೆ ಕುಳಿತುಕೊಳ್ಳುವಂತಾಗಿದೆ. ಈಗಾಗಲೇ ಶೇ.75ರಷ್ಟು ಪುಸ್ತಕಗಳನ್ನು ಪೂರೈಕೆ ಮಾಡಿದ್ದರೂ, ಪುಸ್ತಕದ ಪಾಠಗಳನ್ನು ಬೋಧಿಸುವಂತಿಲ್ಲ. ಇನ್ನು ಕಲಿಕಾ ಚೇತರಿಕೆ ಹಾಳೆಗಳು ಬರದೇ ಇರುವ ಕಾರಣದಿಂದಾಗಿ ಅನಿವಾರ್ಯವಾಗಿ ಶಿಕ್ಷಕರು ಪಠ್ಯವನ್ನೇ ಬೋಧಿಸುತ್ತಿದ್ದಾರೆ.
ಕಲಿಕಾ ಹಾಳೆಗಳ ವಿತರಣೆ ಸಂಬಂಧ ಯಾರಿಂದಲೂ ಸ್ಪಷ್ಟ ಉತ್ತರವಿಲ್ಲ. ಪಠ್ಯಪುಸ್ತಕ ವಿತರಣೆ ಆಗಿದ್ದರೂ ಇದನ್ನು ಮಕ್ಕಳಿಗೆ ಅಧಿಕೃತವಾಗಿ ಬೋಧಿಸುವಂತೆ ಇಲ್ಲ. ಈಗಾಗಲೇ 45 ದಿನಗಳು ಕಳೆದಿವೆ. ಈ ಅವಧಿಯ ಸಾಧನೆ ಶೂನ್ಯ. ಮಕ್ಕಳು ಮತ್ತು ನಾವು ಕಾಟಾಚಾರಕ್ಕೆ ಶಾಲೆಗೆ ಬರುವಂತೆ ಆಗಿದೆ. ಹೆಸರು ಹೇಳಲಿಚ್ಚಿಸದ ಶಿಕ್ಷಕ ಯಾವುದೇ ಯೋಜನೆಯನ್ನು ವ್ಯವಸ್ಥಿತವಾಗಿ ರೂಪಿಸುವಲ್ಲಿ ಸರ್ಕಾರ ವಿಲವಾಗಿದೆ. ಇದರ ಪರಿಣಾಮವಾಗಿ ಇಂದು ಸರ್ಕಾರಿ ಶಾಲೆಗಳು ದುಸ್ಥಿತಿಗೆ ತಲುಪಿವೆ. ಕಲಿತಾ ಚೇತರಿಕೆ ಕಾರ್ಯಕ್ರಮ ರೂಪಿಸಿದ ಸರ್ಕಾರ ಇದನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳದಿರುವುದು ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಉಮೇಶ್, ಅಧ್ಯಕ್ಷರು, ಎಸ್ಡಿಎಂಸಿ ಸಮನ್ವಯ ವೇದಿಕೆ