ಕಂಡೆಕ್ಟರ್ ಹಲ್ಲೆ ಪ್ರಕರಣ ,ಕರವೇ ಬೃಹತ್ ಪ್ರತಿಭಟನೆ

IMG-20250225-WA0057
Published on

ಕಂಡೆಕ್ಟರ್ ಹಲ್ಲೆ ಪ್ರಕರಣ

ಕರವೇ ಬೃಹತ್ ಪ್ರತಿಭಟನೆ

ವಿಜಯವಾಣಿ ಸುದ್ಸಿಜಾಲ

ಬೆಳಗಾವಿ :ಕನ್ನಡದ ಕಂಡೆಕ್ಟರ್ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ,ಗಡಿ ಪಾರು ಮಾಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಕರವೇ ರಾಜಾದ್ಯಕ್ಷ ಟಿ.ಎ.ನಾರಾಯಣಗೌಡ ಕಂಡೆಕ್ಟರ್ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ರದ್ದು ಪಡೆಸಬೇಕು,

ಸುಳ್ಳು ಪ್ರಕರಣಗಳು ದಾಖಲಾಗದಂತೆ ಕ್ರಮ ವಹಿಸಬೇಕು,ಪುಂಡಾಟಿಕ ಗುಂಡಾಗಿರಿಗೆ ಅವಕಾಶ ನೀಡಬಾರದು ,ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕು ಎಂದು ಎಚ್ಚರಿಸಿದರು.

ಭಾಷೆ ಹೆಸರಿನಲ್ಲಿ ಹಲ್ಲೆ,ದೌರ್ಜನ್ಯ ನಡೆಯಬಾರದು ಎಂದು ಗುಡುಗಿದರು‌.

ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮರ್ಮಾಂಗೊ ಭೇಟಿ ನೀಡಿ ಮಾತನಾಡಿದರು.

ಹಲ್ಲೆ ಆರೋಪಗಳನ್ನು ಬಂಧಿಸಲಾಗಿದೆ, ನಗರದಲ್ಲಿ ಗುಂಡಾಗಿರಿ, ರೌಡಿಸಂ ಅವಕಾಶ ನೀಡಲ್ಲ ಎಂದು ಖಡಕ್ ಸಂದೇಶ ನೀಡಿದರು.

ಜಿಲ್ಲಾದ್ಯಕ್ಷ ದೀಪಕ ಗುಡಗನಟ್ಟಿ,ದಶರಥ ಬನೋಶಿ,ಗಣೇಶ ರೋಖಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net