ಕಂಡಿಷನ್ ಹಾಕದೆ ಕಾಂಗ್ರೆಸ್ ಸೇರ್ಪಡೆ

Published on

ಕಲಬುರಗಿ: ಬಿಜೆಪಿಯಲ್ಲಿ ಕಳೆದ ಆರು ವರ್ಷ ಉಸಿರುಗಟ್ಟಿಸುವ ವಾತಾವರಣದಲ್ಲಿದ್ದೆ. ಇದೀಗ ನನ್ನ ಮಾತೃಪಕ್ಷಕ್ಕೆ ಖುಷಿಯಿಂದ ವಾಪಸ್ ಆಗಿದ್ದೇನೆ. ಯಾವುದೇ ಕಂಡಿಷನ್ ಹಾಕದೇ ಪಕ್ಷಕ್ಕೆ ಬಂದಿದ್ದೇನೆ. ಶಾಸಕ ಸ್ಥಾನವನ್ನು ನೀಡಬೇಕು ಎಂದು ಕಂಡಿಷನ್ ಹಾಕಿಲ್ಲ ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್‌ನಿಂದ ಅದ್ದೂರಿ ಸ್ವಾಗತ ಸ್ವೀಕರಿಸಿ ಮಾತನಾಡಿದ ಅವರು, ೨೦೧೮ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಆರು ವರ್ಷ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡಿದರೂ ಸೂಕ್ತ ಬೆಲೆ ದೊರೆಯಲಿಲ್ಲ ಎಂದು ಹೇಳಿದರು.
ನಾನು ಮೊದಲ ಬಾರಿ ಶಾಸಕನಾಗಿದ್ದಾಗ ಎಂ.ವೈ.ಪಾಟೀಲ್ ಮತ್ತು ನಾನು ಕಾಂಗ್ರೆಸ್ ಪಕ್ಷದಲ್ಲೇ ಇz್ದÉÃವು. ಭವಿಷ್ಯದಲ್ಲಿ ಏರು ಪೇರಾಗಿ ನೇರ ಸ್ಪರ್ಧೆಗೆ ಇಳಿದೆವು. ಕ್ಷೇತ್ರದಲ್ಲಿ ನಾಲ್ಕು ಬಾರಿ ಕಾಂಗ್ರೆಸ್‌ನಿAದ, ಎರಡು ಬಾರಿ ಪಕ್ಷೇತರ ಶಾಸಕನಾಗಿದ್ದೆ. ಇದೀಗ ಎಂ.ವೈ.ಪಾಟೀಲ್ ಹಾಗೂ ನಾನು ಒಂದಾಗಿz್ದÉÃವೆ. ಎಂದಿಗೂ ವೈಯಕ್ತಿಕ ದ್ವೇಷ ಇರಲಿಲ್ಲ ಎಂದರು.
ಬಿಜೆಪಿಯವರು ನಮ್ಮ ಮನೆಯಷ್ಟೇ ಒಡೆದಿಲ್ಲ. ರಾಜ್ಯದಲ್ಲಿ ವಿವಿಧೆಡೆ ಅಣ್ಣ-ತಮ್ಮಂದಿರ, ಅತ್ತೆ-ಸೊಸೆಯಂದಿರ ಒಡೆದಿz್ದÁರೆ ಎಂದು ಟೀಕಿಸಿದರು.
ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ್, ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ, ರಿತೇಶ ಗುತ್ತೇದಾರ್, ಡೇವಿಡ್ ಸಿಮಿಯೋನ್, ಸುಭಾಷ ರಾಠೋಡ, ದೇವಿಂದ್ರಪ್ಪ ಮರತೂರ, ಶಾಮರಾವ ಪ್ಯಾಟಿ, ಭೀಮರಾವ ಟಿಟಿ, ಮಹಾಂತೇಶ ಕೌಲಗಾ, ಬಸಯ್ಯ ಗುತ್ತೇದಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net