ಕಂಡಕ್ಟರ್ ಗುರು ಹಾಡು ವೈರಲ್

20-07-Shiva-6
ರಾಯಚೂರಿನಿಂದ ಮಾನ್ವಿಗೆ ಹೋಗುತ್ತಿರುವ ಸಾರಿಗೆ ಸಂಸ್ಥೆ ಬಸ್‌ನಲ್ಲಿ ನಿರ್ವಾಹಕ ಗುರು ದೇವರಮನಿ ಹಾಡು ಹೇಳುವ ಮೂಲಕ ಪ್ರಯಾಣಿಕರನ್ನು ರಂಜಿಸುತ್ತಿರುವುದು.
Published on

ರಾಯಚೂರು: ಶಕ್ತಿ ಯೋಜನೆ ಬಗ್ಗೆ ಮಹಿಳಾ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವ ಹಾಡು ಹಾಡುವ ಮೂಲಕ ಹೆಸರುವಾಸಿಯಾಗಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ವಾಹಕ ಗುರು ದೇವರಮನಿ ಜಾಕಿ ಚಿತ್ರದ ಹಾಡಿದ ದಾಟಿಯಲ್ಲಿ ಬಸ್‌ನಲ್ಲಿ ಹಾಡಿದ ವಿಡಿಯೋ ವೈರಲ್ ಆಗಿದೆ.
ರಾಯಚೂರಿನಿಂದ ಮಾನ್ವಿಗೆ ತೆರಳುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 24 ಮಹಿಳೆಯರ ಆಧಾರ್ ಕಾರ್ಡ್ ಹಿಡಿದು ಜಾಕಿ ಚಿತ್ರದ ಎಕ್ಕರಾಜಾ ರಾಣಿ ಹಾಡಿನ ದಾಟಿಯಲ್ಲಿ ಅಕ್ಕ ತಂಗಿಯರ ಆಧಾರ ಕಾರ್ಡ್ ನನ್ನ ಕೈಯಲ್ಲಿ, ಶಕ್ತಿ ಯೋಜನೆ ಚೀಟಿ ನಿಮ್ಮ ಉಡಿಯಲ್ಲಿ, ಸಿದ್ದರಾಮಯ್ಯ ಸಾಬರಿಗೆ ಒಮ್ಮೆ ಜೈ ಅಂದು ಬೀಡಿ, ದೇವರವನೆ ಒಮ್ಮೆ ಗುಡಿ ಸುತ್ತಿ ಬನ್ನಿ ಎಂದು ಹಾಡುವ ಮೂಲಕ ಪ್ರಯಾಣಿಕರನ್ನು ರಂಜಿಸಿದ.
ಅದಕ್ಕೆ ಮಹಿಳಾ ಪ್ರಯಾಣಿಕರು ಕೂಡಾ ಚಪ್ಪಾಳೆ ತಟ್ಟುವ ಮೂಲಕ ಗುರು ದೇವರಮನಿಗೆ ಪ್ರೋತ್ಸಾಹಿಸಿದರು. ಇದೇ ಸಂದರ್ಭದಲ್ಲಿ ಶಕ್ತಿ ಯೋಜನೆಯ ಬಗ್ಗೆ ಮಹಿಳೆಯರಿಗೆ ಮಾಹಿತಿಯನ್ನು ನೀಡಿದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net