ಕಂಟೈನ್​ವೆುಂಟ್ ಕರಿನೆರಳ ದರ್ಶನ!

h10-Chanmma 2
Published on

ಹುಬ್ಬಳ್ಳಿ: ಹುಬ್ಬಳ್ಳಿಯ ವ್ಯಕ್ತಿಯೊಬ್ಬನಿಗೆ ಕರೊನಾ ಸೋಂಕು ದೃಢಗೊಂಡ ನಂತರ ಕಮರಿಪೇಟೆ ಸುತ್ತಲಿನ ಪ್ರದೇಶವನ್ನು ಸಂಪೂರ್ಣ ಲಾಕ್ ಮಾಡಿದ್ದು, ಎಲ್ಲೆಡೆ ಬಿಕೋ ಎನ್ನುವ ವಾತಾವರಣ ನಿರ್ವಣಗೊಂಡಿದೆ.

ಕರೊನಾ ಸೋಂಕಿತ ವ್ಯಕ್ತಿಯ ಮನೆ ಇರುವ ಡಾಕಪ್ಪ ಸರ್ಕಲ್ ಮುಲ್ಲಾ ಓಣಿ ಸುತ್ತಲಿನ 3 ಕಿಮೀ ದೂರದ ಪ್ರದೇಶವನ್ನು ಕಂಟೈನ್​ವೆುಂಟ್ (ಸೋಂಕು ಸಂಭಾವ್ಯ ಮತ್ತು ಸಮೀಕ್ಷಾ) ಪ್ರದೇಶ ಎಂದು ಘೋಷಿಸಲಾಗಿದೆ. ಹೀಗಾಗಿ ನಗರದ ಶೇ. 80ರಷ್ಟು ಪ್ರದೇಶ ಕ್ವಾರಂಟೈನ್​ಗೆ ಒಳಗಾಗಿದೆ.

ಬಹುಶಃ ಇದೇ ಪ್ರಥಮ ಬಾರಿಗೆ ಹುಬ್ಬಳ್ಳಿಯಲ್ಲಿ ಒಂದು ಸ್ಥಳದ 3 ಕಿ.ಮೀ. ಸುತ್ತಳತೆ ಪ್ರದೇಶವನ್ನು ಒಂದು ದ್ವೀಪದ ಮಾದರಿಯಲ್ಲಿ ಹಾನಿಕಾರಕ ಸೋಂಕು ಇರಬಹುದಾದ ಪ್ರದೇಶವೆಂದು ಪ್ರತ್ಯೇಕಗೊಳಿಸಲಾಗಿದೆ.

ಕಂಟೈನ್​ವೆುಂಟ್ ಪ್ರಯುಕ್ತ ಮುಲ್ಲಾ ಓಣಿಯಿಂದ ಸಾಕಷ್ಟು ದೂರದಲ್ಲಿರುವ ಶಿರೂರು ಪಾರ್ಕ್, ವಿಜಯ ನಗರ, ಕುಸುಗಲ್ ರಸ್ತೆ ಅರಿಹಂತ ನಗರ, ಗದಗ ರಸ್ತೆ ರೈಲ್ವೆ ಕ್ವಾರ್ಟರ್ಸ್, ಹೊಸ ಗಬ್ಬೂರು ಮೊದಲಾದ ಕಡೆಗಳಲ್ಲಿ ರಸ್ತೆ ಮಧ್ಯೆ ಕಬ್ಬಿಣದ ಕಟಾಂಜನ ಕಟ್ಟಲಾಗಿದೆ. ಪೊಲೀಸರು ಟೆಂಟ್ ಹಾಕಿಕೊಂಡು 24 ಗಂಟೆ ಕಾಯತೊಡಗಿದ್ದಾರೆ. ಬೆಳಗ್ಗೆ ಇಲ್ಲದ ಬೇಲಿ ಮಧ್ಯಾಹ್ನದ ವೇಳೆಗೆ ನಡು ರಸ್ತೆಯಲ್ಲಿ ಕಾಣಿಸಿಕೊಂಡಿದ್ದು, ಅದಕ್ಕಿಂತ ಹೊರಗಿನ ನಿವಾಸಿಗಳಿಗೆ ಕಂಟೈನ್​ವೆುಂಟ್​ನ ಕರಾಳತೆಯ ಅರಿವಾಗತೊಡಗಿತು.

ವೈದ್ಯಕೀಯ ಅಧಿಸೂಚನೆ ಪ್ರಕಾರ, ಅಪಾಯಕಾರಿ ಸೋಂಕು ಸಂಭಾವ್ಯ ಪ್ರದೇಶ ಎಂದು ಗುರುತಿಸಿರುವಲ್ಲಿ ಶುಕ್ರವಾರ ಬೆಳಗ್ಗೆ ಕೆಲವು ದಿನಸಿ ಅಂಗಡಿಗಳು ತೆರೆದಿದ್ದವು. ಮಧ್ಯಾಹ್ನದ ವೇಳೆಗೆ ವಿದ್ಯಾನಗರ, ಕುಸುಗಲ್ ರಸ್ತೆ, ಕೇಶ್ವಾಪುರ, ಗೋಕುಲ ರಸ್ತೆ, ವಿಜಯ ನಗರ, ಗಬ್ಬೂರ ಕ್ರಾಸ್ ಸೇರಿ ಬಹುತೇಕ ಪ್ರದೇಶಗಳಲ್ಲಿನ ಮುಖ್ಯ ಹಾಗೂ ಒಳ ರಸ್ತೆಗಳಲ್ಲಿನ ಅಂಗಡಿಗಳನ್ನು ಸಹ ಪೊಲೀಸರು ಮುಚ್ಚಿಸಿದರು.

ಹುಬ್ಬಳ್ಳಿಯ ಪ್ರಮುಖ ಮಾರುಕಟ್ಟೆ, ಜನದಟ್ಟಣೆಯ ವಸತಿ ಪ್ರದೇಶಗಳು ಕಂಟೈನ್​ವೆುಂಟ್ ಪ್ರದೇಶದ ಒಳಗೇ ಇವೆ. ಅಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸ್ ಪಹರೆ ಹಾಕಲಾಗಿದೆ. ಅನೇಕ ಓಣಿಗಳ ಪ್ರವೇಶ ಸ್ಥಳದಲ್ಲಿ ಸ್ಥಳೀಯರೇ ಬೇಲಿ ನಿರ್ಮಾಣ ಮಾಡಿಕೊಂಡಿದ್ದಾರೆ. ಮನೆಯಿಂದ ಹೊರಗೆ ಬಂದರೆ ಲಾಠಿ ಏಟು ಬೀಳುವ ಅಪಾಯ. ಹೀಗಾಗಿ, ಮುಲ್ಲಾ ಓಣಿ ಸುತ್ತಮುತ್ತಲಿನ ಪ್ರದೇಶದವರು ಭಾರಿ ಬಿಗಿ ಪರಿಸ್ಥಿತಿ ಅನುಭವಿಸಿದರು.

ಕರೊನಾ ದೃಢಪಟ್ಟಿರುವ ವ್ಯಕ್ತಿಯಿಂದ ವೈರಾಣುಗಳು ಇನ್ನೆಷ್ಟು ಜನರಿಗೆ ವರ್ಗಾವಣೆಗೊಂಡಿವೆಯೊ ಎಂಬ ದುಗುಡ ಎಲ್ಲರನ್ನೂ ಕಾಡುತ್ತಿದೆ.

ಲಾಠಿ ರುಚಿ

ಶುಕ್ರವಾರ ಬೆಳಗ್ಗೆ ಕೆಲವೆಡೆ ವಾಹನ ಹಾಗೂ ಜನ ಸಂಚಾರ ಕಂಡು ಬಂದಿತು. ಅನಗತ್ಯ ತಿರುಗುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ನಂತರ ವಾಹನ ಸಂಚಾರ ತಹಬದಿಗೆ ಬಂದಿತು.

ಕಮರಿಪೇಟೆಗೆ ತೆರಳುವ ಎಲ್ಲ ಮುಖ್ಯ ಹಾಗೂ ಒಳ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ಯಾವುದೇ ವ್ಯಕ್ತಿ ಒಳಗೆ ಹಾಗೂ ಹೊರಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕೆಲವೆಡೆ ಸಾರ್ವಜನಿಕರು ಸಹ ಒಳ ರಸ್ತೆಗೆ ಜನರು ನುಗ್ಗದಂತೆ ಸ್ವಯಂ ಪ್ರೇರಿತವಾಗಿ ಅಡ್ಡವಾಗಿ ಕಟ್ಟಿಗೆಗಳನ್ನು ಕಟ್ಟಿದ್ದಾರೆ. ಅಲ್ಲೊಂದು, ಇಲ್ಲೊಂದು ವಾಹನ ಹಾಗೂ ಜನ ಸಂಚಾರವನ್ನು ಹೊರತುಪಡಿಸಿದರೆ ಇಡಿ ಹುಬ್ಬಳ್ಳಿ ಸ್ತಬ್ಧಗೊಂಡಂತಾಗಿದೆ.

ಮನೆಯಲ್ಲೇ ಗುಡ್​ಫ್ರೖೆಡೆ ಪ್ರಾರ್ಥನೆ

ಗುಡ್​ಫೈ›ಡೆ ಅಂಗವಾಗಿ ಮಂಟೂರ ರಸ್ತೆಯ ಚರ್ಚ್​ನಲ್ಲಿ ಧರ್ಮಗುರು ನಡೆಸಿದ ಪ್ರಾರ್ಥನೆಯನ್ನು ಫೇಸ್​ಬುಕ್ ನೇರಪ್ರಸಾರದ ಮೂಲಕ ವೀಕ್ಷಿಸಿದ ಗೂಡ್​ಶೆಡ್ ರಸ್ತೆ ಕ್ರಿಶ್ಚಿಯನ್ ನಿವಾಸಿಗಳು, ಮನೆಯಲ್ಲಿಯೇ ಕುಟುಂಬದವರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡಿದರು.

ಚನ್ನಮ್ಮ ವೃತ್ತದಲ್ಲಿ ಹಾವು ಪ್ರತ್ಯಕ್ಷ

ಶುಕ್ರವಾರ ಬೆಳಗ್ಗೆ ಚನ್ನಮ್ಮ ವೃತ್ತದಲ್ಲಿ ಹಾವು ಕಾಣಿಸಿಕೊಳ್ಳುವ ಮೂಲಕ ಕೆಲ ಸಮಯ ಆತಂಕ ಮೂಡಿತ್ತು.

ವಾಹನ ಹಾಗೂ ಜನ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಹೀಗಾಗಿ ಈದ್ಗಾ ಮೈದಾನದ ಕಡೆಯಿಂದ ರಸ್ತೆಗೆ ಇಳಿದ ಹಾವು, ಜನತಾ ಬಜಾರನತ್ತ ತೆರಳಿತು. ಇಲಿಗಳ ಬೇಟೆಗೆ ಹಾವು ಹೊರಬಂದಿತ್ತು ಎಂದು ಭಾವಿಸಲಾಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net