ಕಂಟೈನರ್ ತಡೆದು ಗೋವುಗಳ ರಕ್ಷಣೆ

CTT00001
Published on

ಚಿತ್ರದುರ್ಗ:ಚಳ್ಳಕೆರೆ ಕಡೆಯಿಂದ ದಾವಣಗೆರೆ ಕಡೆಗೆ ಸಾಗುತ್ತಿದ್ದ ಗೋವುಗಳಿದ್ದ ಕಂಟೈನರ್‌ನ್ನು ವಿಎಚ್‌ಪಿ,ಬಜರಂಗಳ ಕಾರ‌್ಯಕರ್ತರು ಚೆಸ್‌ಮಾಡಿ ತಡೆದು ಅದರಲ್ಲಿದ್ದ 14 ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಳ್ಳಕೆರೆಯಿಂದ ಕಂಟೈನರ್‌ನಲ್ಲಿ ರಾಸುಗಳನ್ನು ಸಾಗಿ ಸಲಾಗುತ್ತಿದೆ ಎಂಬ ಮಾಹಿತಿ ತಲುಪಿದ ಕೂಡಲೇ ಆಕ್ಟಿವ್ ಆದ ಸಂಘ ಪರಿವಾರದ ಕಾರ‌್ಯಕರ್ತರು ನಗರದ ಹೊರವಲಯ ಮದಕರಿಪುರ ದ ದಾವಣಗೆರೆ ಬೈಪಾಸ್ ಬಳಿ ಬೆನ್ನಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸರು ಕೂಡ ಧಾವಿಸಿದ್ದು ಕಾರ‌್ಯಕರ್ತರು ಹಾಗೂ ಪೊಲೀಸರನ್ನು ನೋಡಿದ ಕಂಟೈ ನರ್‌ನಲ್ಲಿದ್ದ ಚಾಲಕ ಮತ್ತಿತರರು ಪರಾರಿ ಯಾಗಿದ್ದಾರೆ. ಗೋವುಗಳು ಎಲ್ಲಿಂದ ತರಲಾಗಿದೆ, ಎಲ್ಲಿಗೆ ಸಾಗಿಸಲಾಗುತ್ತಿತ್ತು, ಕಂಟೈನರ್ ಯಾರ ದ್ದು ಎಂಬಿತ್ಯಾದಿ ಮಾಹಿತಿ ಕುರಿತಂತೆ ತನಿ ಖೆ ನಡೆಸಬೇಕಿದೆ. ಇದಕ್ಕಾಗಿ ಸ್ವಯಂ ಆಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗೋವುಗಳನ್ನು ಚಳ್ಳ ಕೆರೆ ರಸ್ತೆಯಲ್ಲಿರುವ ಸರ್ಕಾರಿ ಗೋ ಶಾಲೆ ವಶಕ್ಕೆ ಒಪ್ಪಿಸಲಾಗಿದೆ ಎಂದು ಗ್ರಾಮಾಂತರ ಠಾಣೆ ಪಿಐ ಸುನೀಲ್‌ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net