ಕಂಚೀಶ್ರೀಗಳ ಅದ್ದೂರಿ ನಗರಪ್ರವೇಶ:ಪೂಜಾಕೈಂಕರ್ಯ

ಕಂಚೀಶ್ರೀಗಳ ಅದ್ದೂರಿ ನಗರಪ್ರವೇಶ:ಪೂಜಾಕೈಂಕರ್ಯ
Published on

ಹಾಸನ: ಕಂಚೀಪುರಂನ ಶ್ರೀಕಂಚೀ ಕಾಮಕೋಟಿ ಪೀಠದ 70 ನೇ ಪೀಠಾಧಿಪತಿಗಳಾಗಿರುವ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಮಹಾಸ್ವಾಮೀಜಿ ಅವರ ವಿಜಯಯಾತ್ರೆಯ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳುತ್ತಿರುವ ಮಾರ್ಗಮಧ್ಯ ಶ್ರೀಗಳು ಗುರುವಾರ ನಗರದಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡರು.

ನಗರದ ಹೊರವಲಯದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ, ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಸಿಬ್ಬಂದಿ ಹಾಗು ಶ್ರೀಪೀಠದ ಸದ್ಭಕ್ತರು ಸ್ವಾಮೀಜಿ ಅವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ನಂತರ ಬಿ.ಎಂ.ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂಭಾಗದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜ್ ಆಸ್ಪತ್ರೆಯ ಆವರಣದವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿಯರು ಪೂರ್ಣಕುಂದೋಂದಿಗೆ ಜಯಘೋಷದೊಂದಿಗೆ ಬರಮಾಡಿಕೊಂಡರು.

ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಮಹಾಸ್ವಾಮೀಜಿ ಅವರು ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಆವರಣದಲ್ಲಿರುವ ಐತಿಹಾಸಿಕ ಶ್ರೀ ಹಳ್ಳದ ರಾಮೇಶ್ವರ ದೇವಾಲಯದ ಆವರಣದಲ್ಲಿ ಪೂಜಾಕೈಂಕರ್ಯ ನೆರವೇರಿಸುವರು.

ಶುಕ್ರವಾರ ಬೆಳಿಗ್ಗೆ ರಾಮೇಶ್ವರ ದೇವಾಲಯದಲ್ಲಿ ಪೂಜೆ ನಂತರ ಭಕ್ತಾದಿಗಳಿಗೆ ದರ್ಶನ ನೀಡಿ ನಂತರ ಸಂಜೆ ಕಾಲೇಜಿನ ಸಭಾಂಗಣದಲ್ಲಿ ಸ್ವಾಮಿಜಿಗಳು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.

ಶನಿವಾರ ಬೆಳಿಗ್ಗೆ 7 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ಪೂಜಾ ಕೈಂಕರ್ಯಗಳು ಇರಲಿದ್ದು, ಆ ಸಮಯದಲ್ಲಿಯೇ ಭಕ್ತಾದಿಗಳು ಪೂಜ್ಯರ ದರ್ಶನ ಪಡೆಯಬಹುದಾಗಿದೆ. ಅಂದು ಮಧ್ಯಾಹ್ನ 02 ಗಂಟೆಗೆ ಸ್ವಾಮೀಜಿಯವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಯಣ ಬೆಳೆಸುವರು ಎಂದು ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ನಿರ್ದೇಶಕ ಡಾ.ಪ್ರಸನ್ನ ನರಸಿಂಹ ರಾವ್ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಯು.ಶೈಲಜಾ.ನಗರದ ಸದ್ಭಕ್ತರು,ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net