

ಕಲಬುರಗಿ: ಕಾರು ಪಲ್ಟಿಯಾಗಿ ಕಲಬುರಗಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಾಬು ಹೊನ್ನಾನಾಯಕ ಸೇರಿ ಮೂವರಿಗೆ ಗಂಭೀರ ಗಾಯಗಳಾದ ಘಟನೆ ಸೋಮವಾರ ಸಂಜೆ ಕಮಲಾಪುರ ಬಳಿಯ ಹೆದ್ದಾರಿಯಲ್ಲಿ ಜರುಗಿದೆ. ಕಮಲಾಪುರ ಬಳಿ ಬೈಕ್ ಮತ್ತು ಎದುರಿನಿಂದ ಬಂದ ಇನ್ನೊಂದು ಕಾರ್ ಇವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಹೊನ್ನಾನಾಯಕ ಅವರಿದ್ದ ಕಾರ್ ಸಂಪೂರ್ಣ ನುಜ್ಜುಗುಜ್ಜಾಗಿ ಜಖಂಗೊಂಡಿದೆ.
ಅವರ ತಲೆಗೆ ತೀವ್ರ ಗಾಯವಾಗಿರುವ ಬಾಬು ಹೊನ್ನಾ ನಾಯಕ ಹಾಗೂ ಇತರರನ್ನು ಆ್ಯಂಬುಲೆನ್ಸ್ನಲ್ಲಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕರೆ ತಂದು ದಾಖಲು ಮಾಡಲಾಗಿದೆ. ಬಿಜೆಪಿ ಸರ್ಕಾರ ಆದೇಶಿಸಿರುವ ಒಳ ಮೀಸಲಾತಿ ವಿರೋಧಿಸಿ ಸೋಮವಾರ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಕಮಲಾಪುರ ಕಡೆಗೆ ತೆರಳಿ ಕೆಲ ಹಳ್ಳಿಗಳಿಗೆ ತೆರಳಿ ಜನರನ್ನು ಭೇಟಿ ಮಾಡಿ ಪ್ರಚಾರ ನಡೆಸಿ ಹೋಗುತ್ತಿರುವಾಗ ಭೀಕರ ಅವಫಾತ ಸಂಭವಿಸಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರ ಬಂದ್ ಆಗಿತ್ತು.
ಕೂಡಲೇ ೧೦೮ ವಾಹನವು ದೌಡಾಯಿಸಿ ಗಾಯಗೊಂಡವರನ್ನು ಕಲಬುರಗಿಗೆ ಕರೆದುಕೊಂಡು ಹೋದರು. ಜಖಂಗೊAಡ ಬಿದ್ದ ಕಾರನ್ನು ಪೊಲೀಸರು ರಸ್ತೆಯ ಪಕ್ಕಕ್ಕೆ ಸರಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಲಬುರಗಿ ಗ್ರಾಮೀಣ ಮತಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಹೊನ್ನಾ ನಾಯಕ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಚಿಕಿತ್ಸೆಗಾಗಿ ನಗರದ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಮಾಜಿ ಸಚಿವ ಬಾಬುರಾವ ಚವ್ಹಾಣ ಇತರರು ಭೇಟಿ ನೀಡಿ ಆರೋಗ್ಯ ವಿಚಾರಿಸಿಸದರು. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.