ಔಷಧಿ ವ್ಯಾಪಾರಿಗಳಿಂದ ತಿರಂಗಾ ಮೆರವಣಿಗೆ

Aushadh vyapari - Copy
Published on

ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಸದಸ್ಯರು ನಗರದಲ್ಲಿ ತ್ರಿವರ್ಣ ಧ್ವಜದ ಮೆರವಣಿಗೆ ನಡೆಸಿದರು.

ಜನವಾಡ ರಸ್ತೆಯಲ್ಲಿ ಇರುವ ಫಾರ್ಮಾ ಭವನದಿಂದ ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತ ಅಂಬೇಡ್ಕರ್ ವೃತ್ತ, ಜಿಲ್ಲಾ ಆಸ್ಪತ್ರೆ ಮಾರ್ಗವಾಗಿ ಸಂಚರಿಸಿ, ಪುನಃ ಫಾರ್ಮಾ ಭವನಕ್ಕೆ ಬಂದು ಮೆರವಣಿಗೆ ಸಮಾರೋಪಗೊಳಿಸಿದರು.

ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಿವರಾಜ ಪಾಟೀಲ, ಸಂಘದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಉಪಾಧ್ಯಕ್ಷ ವಿಜಯಕುಮಾರ ಬಿರಾದಾರ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಖಾಲೀದ್ ಷರೀಫ್, ಕಾರ್ಯದರ್ಶಿ ಮಾದಪ್ಪ, ಖಜಾಂಚಿ ಸಂಜು ನೂಕಲವಾರ್, ವೀರಕುಮಾರ ಮಜಗೆ, ಸುರೇಶ ಬಿರಾದಾರ ಹಿಪ್ಪಳಗಾಂವ್, ಸಾಯಿಬಣ್ಣ ಮೊದಲಾದ ಪದಾಧಿಕಾರಿಗಳು, ಸದಸ್ಯರು ಹಾಗೂ ನೂರಾರು ಔಷಧಿ ವ್ಯಾಪಾರಿಗಳು ಭಾಗವಹಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net