

ಬಾಗಲಕೋಟೆ: ಔಷಧ ಶಾಸದಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ಇದ್ದು, ಅಹಮದಾಬಾದ್‌ನಲ್ಲಿ ರಾಷ್ಟ್ರೀಯ ಯುವ ವಿಜ್ಞಾನಿಗಳ ಸಮಾವೇಶ ನಡೆಸಲಾಗುವುದೆಂದು ಇಂಡಿಯನ್ ಾರ್ಮಾಕಾಲಜಿಕಲ್ ಸೊಸೈಟಿ ಅಧ್ಯಕ್ಷ ಡಾ. ಶಿವಪ್ರಕಾಶ ರತ್ನಮ್ ಹೇಳಿದರು.
ನಗರದ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಶತಾಬ್ಧಿ ಭವನದಲ್ಲಿ ಶುಕ್ರವಾರ ಹಾನಗಲ್ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯ, ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಇಂಡಿಯನ್ ಾರ್ಮಾಕಾಲಜಿಕಲ್ ಸೊಸೈಟಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರಿನಲ್ಲಿ ನಡೆದ ಸಮ್ಮೇಳನಕ್ಕಿಂತ ಬಾಗಲಕೋಟೆಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧಕರು ಭಾಗವಹಿಸಿದ್ದು ಸಮ್ಮೇಳನದ ಯಶಸ್ವಿಗೆ ಸಾಕ್ಷಿ. ಾರ್ಮಾಕಾಲಜಿ ವಿಷಯದಲ್ಲಿ ಸಂಶೋಧನೆಗೆ ನಮ್ಮ ಸಂಸ್ಥೆಯು ಹೆಚ್ಚು ಆದ್ಯತೆ ನೀಡುತ್ತಿದ್ದು, ಸಂಶೋಧಕರಿಗೆ ಅಗತ್ಯದ ಹಣಕಾಸಿನ ನೆರವು ನೀಡುತ್ತೇವೆ. ಔಷಧಶಾಸ ತಜ್ಞರು ಹೆಚ್ಚು ಹೆಚ್ಚು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅಹಮದಾಬಾದ್‌ನಲ್ಲಿ ನಮ್ಮ ಾರ್ಮಾಕಾಲಜಿಕಲ್ ಸೊಸೈಟಿಯಿಂದ ರಾಷ್ಟ್ರೀಯ ಯುವ ವಿಜ್ಞಾನಿಗಳ ಸಮ್ಮೇಳನ ಆಯೋಜಿಸಲಾಗುವುದು. ಇದರಿಂದ ಯುವ ವಿಜ್ಞಾನಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ದೇಶದಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಾದರೆ, ದೇಶದ ಅಭಿವೃದ್ಧಿ ಸಾಧ್ಯ. ಬಿವಿವಿ ಸಂಘದ ಗುಣಮಟ್ಟದ ಶಿಕ್ಷಣದ ದಾಸೋಹದೊಂದಿಗೆ ತಾನೂ ಅಭಿವೃದ್ಧಿಯಾಗುತ್ತ ಸುತ್ತಮುತ್ತಲಿನ ಪ್ರದೇಶವನ್ನು ಪ್ರಗತಿಯತ್ತ ಸಾಗುವಂತೆ ಮಾಡಿದೆ ಎಂದರು.
ಭೂಪಾಲ್ ಮತ್ತು ಜಮ್ಮು ಏಮ್ಸ್ ಅಧ್ಯಕ್ಷ ಡಾ. ವೈ.ಕೆ. ಗುಪ್ತಾ ಮಾತನಾಡಿ, ಪುಸ್ತಕದ ಜತೆಗೆ ಸಾಮಾಜಿಕ ವ್ಯವಸ್ಥೆಯಿಂದ ಕಲಿಯುವುದೇ ನಿಜವಾದ ಶಿಕ್ಷಣವಾಗಿದ್ದು, ನಮ್ಮ ಭಾರತದ ಮಹಾವಿದ್ಯಾಲಯಗಳಲ್ಲಿ ಕಲಿಕಾ ಪದ್ಧತಿಗಳು ಬದಲಾಗಬೇಕಿವೆ. ಪುಸ್ತಕ,ಪ್ರಾಯೋಗಿಕವಾಗಿ ಜೀವನದ ಸಮಾಜದ ಮೂಲಕ ಪಾಠ ಕಲಿಯುವ ಶೈಕ್ಷಣಿಕ ಪದ್ಧತಿ ಬೇಕಾಗಿದೆ. ಬಾಗಲಕೋಟೆ ಕೃಷ್ಣಾನದಿ ತೀರದ ಮುಳಗಡೆ ಪ್ರದೇಶವಾದರೂ ಉತ್ತಮ ವಾತಾವರಣ ಹೊಂದಿದ ನಗರವಾಗಿದೆ ಎಂದು ಹೇಳಿದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಮಾತನಾಡಿ, ನಮ್ಮ ಾರ್ಮಕಾಲಜಿ ಕಾಲೇಜು ಔಷಧ ಶಾಸಜ್ಞರ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ವೇದಿಕೆಯಾಗುತ್ತಿರುವುದು ಹೆಮ್ಮೆಯ ವಿಷಯ. ಸಮ್ಮೇಳನದ ಲಿತಾಂಶ ಫಲಶೃತಿಯಾಗಲಿ. ಸಮ್ಮೇಳನದಲ್ಲಿ ಚರ್ಚೆ ಮತ್ತು ಸಂವಾದಗಳು ನಡೆದು ಆರೋಗ್ಯಕರ ಸಮಾಜದ ಸ್ಥಾಪನೆಗೆ ನೆರವಾಗಲಿ ಎಂದರು.
ಇಂಡಿಯನ್ ಾರ್ಮಾಕಾಲಜಿಕಲ್ ಸೊಸೈಟಿಯ ಕಾರ್ಯದರ್ಶಿ ಡಾ. ಬಿ. ಕಲಾಕುಮಾರ, ಡಾ. ಪ್ರಕಾಶ ದಿವಾನ, ಡಾ. ಎ. ರಾಮಕಿಶನ್, ಡಾ. ಪೂರಣ ಎಲ್. ಸಾಹೂ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಹಾನಗಲ್ ಕುಮಾರೇಶ್ವರ ಮಹಾವಿದ್ಯಾಲಯದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ವೈದ್ಯಕೀಯ ಅಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಎಸ್.ಎನ್. ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಮಲ್ಲಾಪುರ ಉಪಸ್ಥಿತರಿದ್ದರು. ಡಾ. ವೈ. ಶ್ರೀನಿವಾಸ ಸ್ವಾಗತಿಸಿದರು, ಮತ್ತು ಡಾ. ವಿ.ಎಂ. ಚಂದ್ರಶೇಖರ ವಂದಿಸಿದರು.
ದೇಶ ವಿದೇಶಗಳಿಂದ ಅಂದಾಜು 1500 ಸಂಶೋಧಕರು, ಅಧ್ಯಾಪಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. 26 ವೈಜ್ಞಾನಿಕ ಗೋಷ್ಠಿಗಳು ನಡೆದವು. ಅಂದಾಜು 500 ಸಂಶೋಧನಾ ಲೇಖನಗಳ ಮಂಡನೆ, ಚರ್ಚೆ, ಸಂವಾದ, ವಿಚಾರಗೋಷ್ಠಿಗಳ ಮೂಲಕ ಹೊಸ ವಿಚಾರಗಳ ಅನಾವರಣಗೊಂಡವು.