ಔರಾದ್​ನಲ್ಲಿ ಬಿರುಗಾಳಿ ಸಹಿತ ಮಳೆ

Capture1
Published on

ಔರಾದ್: ಪಟ್ಟಣ ಸೇರಿದಂತೆ ತಾಲೂಕಿನ ಸಂತಪುರ, ಚಿಂತಾಕಿ, ಬೇಲೂರ, ಕೌಠಾ, ಜಂಬಗಿ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ರಭಸದ ಗಾಳಿಯಿಂದ ಕೆಲವೊಂದು ಮನೆಗಳ ಪತ್ರಾಸ್ಗಳು ಹಾರಿಹೋಗಿದ್ದು, ಯಾವುದೇ ಜೀವಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ತಾಲೂಕಿನ ವಡಗಾಂವ (ದೇ) ಗ್ರಾಮದ ಬಸವ ಮಂಟಪದ ಹತ್ತಿರ ಇರುವ ತೆಂಗಿನ ಮರವೊಂದು ಗಾಳಿಯ ರಭಸಕ್ಕೆ ನೆಳಕ್ಕುರುಳಿದೆ. ಮರದ ಪಕ್ಕದಲ್ಲಿಯೇ ಅಂಗಡಿಗಳಿದ್ದರೂ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net