ಔರಾದ್ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ

Ravi Swamy
Published on

ಔರಾದ್: ಏಕತಾ ಫೌಂಡೇಷನ್ ಅಧ್ಯಕ್ಷ ರವೀಂದ್ರ ಸ್ವಾಮಿ ಜನ್ಮ ದಿನ ನಿಮಿತ್ತ ಪಟ್ಟಣದ ಬಸ್ ನಿಲ್ದಾಣ, ಶಿವಾಜಿ ವೃತ್ತ ಸೇರಿ ವಿವಿಧೆಡೆ ಸ್ವಚ್ಛತಾ ಅಭಿಯಾನ ಜರುಗಿತು.

ರವೀಂದ್ರ ಸ್ವಾಮಿ ನೇತೃತ್ವದಲ್ಲಿ 100 ಯುವಕರ ತಂಡ ಬಸ್ ನಿಲ್ದಾಣ ಸ್ವಚ್ಛಗೊಳಿಸಿತು. ಫೌಂಡೇಷನ್ ಕಾರ್ಯಕರ್ತರು ಸುಮಾರು ಎರಡು ಗಂಟೆ ಸ್ವಚ್ಛತೆ ನಡೆಸಿದರು. ನಮ್ಮೂರಿನ ಸ್ವಚ್ಛತೆ ನಮ್ಮೆಲ್ಲರ ಹೊಣೆ. ಇದು ಕೇವಲ ಪೌರ ಕಾರ್ಮಿಕರ ಕೆಲಸವಲ್ಲ ಎಂಬ ಜಾಗೃತಿಯನ್ನೂ ಮೂಡಿಸಿದರು. ಬಸ್ ನಿಲ್ದಾಣದ ಅಲ್ಲಲ್ಲಿ ಕಸದ ಬುಟ್ಟಿಗಳನ್ನು ಇಟ್ಟರೆ, ಕುಡಿಯುವ ನೀರಿಗಾಗಿ ಮಡಿಕೆ ಇಡಲಾಯಿತು.

ಅಮರ ಸ್ವಾಮಿ ಸ್ಥಾವರಮಠ, ಓಂಕಾರ ಸ್ವಾಮಿ, ಶರಣಪ್ಪ ಪಾಟೀಲ್, ರಂಜಿತ ಪಾಟೀಲ್, ರಾಜಕುಮಾರ ಎಡವೆ, ಪ್ರಶಾಂತ ರೂಪನರ್, ಸೂರ್ಯಕಾಂತ ಸ್ವಾಮಿ, ವೀರೇಶ ಸ್ವಾಮಿ, ಗಣೇಶ ಸ್ವಾಮಿ, ಮಹೇಶ ಸ್ವಾಮಿ, ಲೋಕೇಶ, ಸಂತೋಷ ಕಂಟೆ, ಲಖನ್ ವಾಘಮಾರೆ, ಚಿಂಟು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net