ಓವರ್​ಹೆಡ್​ ಟ್ಯಾಂಕ್​ ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿ

mm 31-1
Published on

ವಿಜಯಪುರ:ಅತಿವೃಷ್ಟಿ&ಪ್ರವಾಹದಿಂದ ಉಂಟಾಗುವ ಮನೆ ಹಾನಿ, ಜನ&ಜಾನುವಾರುಗಳ ಹಾನಿಗೆ ನಿಗದಿತ ಅವಧಿಯಲ್ಲಿ ತುರ್ತಾಗಿ ಪರಿಹಾರ ಒದಗಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್​ ಸಭಾಂಗಣದಲ್ಲಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಮಾತನಾಡಿದ ಅವರು, ಅತಿವೃಷ್ಟಿ ಪ್ರವಾಹದಿಂದ ಹಾನಿಗೀಡಾದ ಮನೆಗಳಿಗೆ 72 ಗಂಟೆಯೊಳಗೆ ಹಾಗೂ ಜಾನುವಾರು ಹಾನಿಗೆ 42 ಗಂಟೆಯೊಳಗೆ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ತುರ್ತು ಪರಿಸ್ಥಿತಿಯಲ್ಲಿ ತುರ್ತಾಗಿ ನೀಡುವ ಪರಿಹಾರವಾಗುವುದರಿಂದ ಈ ಕಾರ್ಯವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಯಾವುದೇ ಪ್ರಕರಣಗಳನ್ನು ಬಾಕಿ ಉಳಿಸಿಕೊಳ್ಳದೆ, ಪ್ರಕರಣಗಳನ್ನು ಇತ್ಯರ್ಥಪಡಿಸಿ, ತುರ್ತಾಗಿ ನಿಗದಿತ ಅವಧಿಯಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

* ಪ್ರವಾಹ ಪರಿಸ್ಥಿತಿ ನಿಭಾಯಿಸಿ

ಜಿಲ್ಲೆಯಲ್ಲಿ ಅತಿವೃಷ್ಟಿ& ಪ್ರವಾಹಕ್ಕೊಳಪಡುವ ಪ್ರದೇಶಗಳ ಮಾಹಿತಿ ಅಧಿಕಾರಿಗಳು ಮುಂಚಿತವಾಗಿ ಹೊಂದಿರಬೇಕು. ಯಾವ ನದಿಯಿಂದ ಎಷ್ಟು ಪ್ರಮಾಣದ ನೀರು ಬಂದಲ್ಲಿ ಹಳ್ಳಿಗಳು ಬಾಧಿತವಾಗಲಿವೆ ಎಂಬುವುದು ತಿಳಿದುಕೊಂಡಿರಬೇಕು. ಸಂಪೂರ್ಣ ಮಾಹಿತಿ ಅರಿತುಕೊಂಡಲ್ಲಿ ಮಾತ್ರ ಪ್ರವಾಹದಂತಹ ಪರಿಸ್ಥಿತಿ ಸಮರ್ಥವಾಗಿ ಹಾಗೂ ಸಮರ್ಪಕವಾಗಿ ನಿಭಾಯಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಂಪೂರ್ಣ ಮಾಹಿತಿ ಅರಿತುಕೊಳ್ಳಬೇಕೆಂದು ತಾಕೀತು ಮಾಡಿದರು.

* ಬೆಳೆಹಾನಿ ಪರಿಹಾರ ಪರಿಗಣಿಸಿ

ಬೆಳೆ ಹಾನಿಗೆ ಸಂಬಂಧಿಸಿದ ಯಾವುದೇ ಕಡತಗಳನ್ನು ಬಾಕಿ ಉಳಿಸಿಕೊಳ್ಳದಂತೆ ಸೂಚಿಸಿ, ಬೆಳೆ ಹಾನಿ ಪರಿಹಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಕಾರ್ಯದಲ್ಲಿ ಯಾವುದೇ ರ್ನಿಲಕ್ಷ ವಹಿಸದೆ ತುರ್ತು ಎಂದು ಪರಿಗಣಿಸಿ ರೈತರನ್ನು ಅಲೆದಾಡಿಸದೆ ಪರಿಹಾರ ಪೋರ್ಟಲ್​ ಮೂಲಕ ನಿಗದಿತ ಕಾಲಾವಧಿಯೊಳಗೆ ಪರಿಹಾರ ದೊರಕಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.

* ಓವರ್​ಹೆಡ್​ ಟ್ಯಾಂಕ್​ ಸ್ವಚ್ಛಗೊಳಿಸಿ

ಜಿಲ್ಲೆಯ ಗ್ರಾಮಮಟ್ಟದಲ್ಲಿರುವ ಓವರ್​ ಹೆಡ್​ ಟ್ಯಾಂಕ್​ಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಅಲ್ಲದೆ, ಅವುಗಳನ್ನು ಸ್ವಚ್ಛಗೊಳಿಸುವ ಮಾಹಿತಿ ಜನರಿಗೆ ನೀಡಬೇಕು. ಸ್ವಚ್ಛಗೊಳಿಸಿದ ಕುರಿತು ಸಂಬಂಧಿಸಿದ ಗ್ರಾ.ಪಂ. ನಲ್ಲಿ ಲಾಗ್​ ಪುಸ್ತಕ ನಿರ್ವಹಿಸಿ, ಪುಸ್ತಕದಲ್ಲಿ ಪಿಡಿಒಗಳು, ಸದಸ್ಯರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ವಹಿಸಿ ಸಹಿ ಮಾಡಿ ದೃಢೀಕರಿಸಿ ಸಂರಸುವಂತೆ ಸೂಚಿಸಿದರು.

* ಕಲುಷಿತ ನೀರು ಸೇರದಂತೆ ಎಚ್ಚರವಹಿಸಿ

ಮಳೆಗಾಲ ಸಂದರ್ಭದಲ್ಲಿ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಎಚ್ಚರಿಕೆ ವಹಿಸುವ ಜತೆಗೆ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಅಥವಾ ಕೊಳಚೆ ನೀರು ಸೇರದಂತೆ ಕಟ್ಟೆಚ್ಚರ ವಹಿಸಬೇಕು. ಕುಡಿಯುವ ನೀರು ಪೂರೈಸುವ ಮುನ್ನ ನೀರಿನ ಮೂಲ, ನೀರು ಸಂಗ್ರಹಿಸುವ ಸ್ಥಳ, ನೀರಿನ ಮುಕ್ತಾಯದ ಹಂತದ ಸೇರಿದಂತೆ 3 ಕಡೆ ಪರೀಸಿದ ನಂತರವೆ ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಸಿಕೊಂಡು ನೀರು ಪೂರೈಕೆಗೆ ಕ್ರಮ ವಹಿಸಬೇಕು. ವಿಜಯಪುರ ನಗರದ 35 ವಾರ್ಡ್​ಗಳ ವ್ಯಾಪ್ತಿಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಪರೀೆಗೊಳಪಡಿಸಿ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

* ಅತಿವೃಷ್ಟಿ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿ

ಜಿಲ್ಲೆಯಲ್ಲಿ ಎದುರಾಗಬಹುದಾದ ಅತಿವೃಷ್ಟಿ& ಪ್ರವಾಹ ಪರಿಸ್ಥಿತಿಯಿಂದ ಜನರಿಗೆ ಆಶ್ರಯ ಒದಗಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಎತ್ತರದ ಪ್ರದೇಶದಲ್ಲಿ ಕಾಳಜಿ ಕೇಂದ್ರಗಳ ನಿರ್ಮಾಣಕ್ಕೆ ಮುಂಚಿತವಾಗಿಯೇ ಗುರುತಿಸಬೇಕು. ಬಾಧಿತವಾಗುವ ಪ್ರದೇಶಗಳ ಜನರಿಗೆ ಸುಲಭವಾಗಿ ಕೇಂದ್ರಗಳ ಮಾಹಿತಿ ದೊರಕುವಂತಿರಬೇಕು. ಈ ಕುರಿತು ಜನರಿಗೆ ಮಾಹಿತಿ ಒದಗಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಕಂದಾಯೇತರ ಅಧಿಕಾರಿಗಳನ್ನು ನೋಡಲ್​ ಅಧಿಕಾರಿಗಳನ್ನು ನೇಮಿಸಬೇಕು. ಕಾಳಜಿ ಕೇಂದ್ರ ಉತ್ತಮ ಸ್ಥಿತಿಯ ಕಟ್ಟಡ ಸೇರಿದಂತೆ ಮೂಲ ಸೌಲಭ್ಯ ಹೊಂದಿರಬೇಕು ಎಂದು ಹೇಳಿದರು.

* ವಿಫಲ ಬೋರ್​ವೆಲ್​ಗಳನ್ನು ಮುಚ್ಚಿಸಿ

ಜಿಲ್ಲೆಯಲ್ಲಿ ವಿಫಲವಾದ ಬೊರವೆಲ್​ಗಳು ಇದ್ದರೆ ಕೂಡಲೇ ಅಂತಹ ಬೊರವೆಲ್​ಗಳನ್ನು ಮುಚ್ಚಲು ಕ್ರಮ ವಹಿಸಬೇಕು. ಗ್ರಾ.ಪಂ. ಮತ್ತು ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಬೊರವೆಲ್​ಗಳ ಮಾಹಿತಿಯನ್ನು ಅಧೀನ ಸಿಬ್ಬಂದಿಯಿಂದ ಸಂಗ್ರಹಿಸಿಟ್ಟುಕೊಳ್ಳುವಂತೆ ಅವರು ಸೂಚನೆ ನೀಡಿದ ಅವರು, ವಿಪತ್ತು ನಿರ್ವಹಣೆಯಲ್ಲಿ ಅಗ್ನಿಶಾಮಕ ಇಲಾಖೆ ಪಾತ್ರ ಅತಿ ಮಹತ್ವದ್ದಾಗಿದೆ. ಕಳೆದ 5 ವರ್ಷಗಳಲ್ಲಿ ಅಗ್ನಿ ಶಾಮಕ ಇಲಾಖೆಗೆ ಬಂದಿರುವ ದೂರುಗಳು, ದೂರುಗಳಿಗೆ ಸ್ಪಂದಿಸಿದ ವಿವರ ಸೇರಿದಂತೆ ವರ್ಗೀಕರಿಸಿ ಸಮಗ್ರ ಮಾಹಿತಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

* ತುರ್ತು ರಕ್ಷಣಾ ಸಾಮಗ್ರಿ ಸಿದ್ಧವಾಗಿಟ್ಟುಕೊಳ್ಳಿ

ತುರ್ತು ಸಂದರ್ಭದಲ್ಲಿ ರಕ್ಷಣಾ ಸಾಮಗ್ರಿ ಬೋಟ್ಸ್​, ರೋಪ್ಸ್​, ಲೈಫ್​ ಜಾಕೆಟ್​ ಸೇರಿದಂತೆ ಇತ್ಯಾದಿ ಸಾಮಗ್ರಿಗಳನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸುಸಜ್ಜಿತವಾಗಿಟ್ಟುಕೊಳ್ಳಬೇಕು. ಕೃಷ್ಣಾ&ಭೀಮಾ ನದಿ ಒಳ ಹರಿವು ಕುರಿತು ಮಹಾರಾಷ್ಟ್ರ ರಾಜ್ಯದ ಅಧಿಕಾರಿಗಳೊಂದಿಗೆ ನಿರಂತರ ಸಾಧಿಸಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಕೇಂದ್ರ 1077 ವಿದ್ದು, ತಾಲೂಕಾ ಮಟ್ಟದಲ್ಲಿ ಸಹಾಯವಾಣಿ ಆರಂಭಿಸಬೇಕು. ಆಗಾಗ ಜಿಲ್ಲಾ ವಿಪತ್ತು ಪ್ರಾಧಿಕಾರ ಸಭೆ ನಡೆಸಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಪ್ರವಾಹ ಎದುರಿಸಲು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಗತ್ಯ ಸಲಹೆ&ಸೂಚನೆ ನೀಡಬೇಕು. ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸಲು ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.

* ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಅಗತ್ಯ

ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಂಗನವಾಡಿ, ಶಾಲೆ ಕಟ್ಟಡ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಶಿಥಿಲಾವಸ್ಥೆ ಕಟ್ಟಡಗಳನ್ನು ಪಾಠ ಬೋಧನೆಗೆ ಬಳಸಬಾರದು. ಅಂತಹ ಕಟ್ಟಡಗಳಿದ್ದಲ್ಲಿ ತೆರವುಗೊಳಿಸಲು ೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಅಂಗನವಾಡಿ ಕಟ್ಟಡಗಳಿದ್ದಲ್ಲಿ ಸಿಡಿಪಿಒ ಕ್ರಮ ವಹಿಸಬೇಕು. ವಿದ್ಯಾರ್ಥಿಗಳ ಸುರಕ್ಷತೆ ಭದ್ರತೆ ಮುಖ್ಯವಾಗಿದೆ. ಯಾವುದೇ ಅಹಿತಕರ ಟನೆ ಜರುಗಿದಂತೆ ಮುನ್ನೆಚ್ಚರಿಕೆ ವಹಿಸಬೇಕು. ಶಾಲಾ ಆವರಣ, ಅಂಗನವಾಡಿ ಆವರಣದಲ್ಲಿ ವಿದ್ಯುತ್​ ಕಂಬ, ತಂತಿ, ಅಪಾಯಕಾರಿ ಗಿಡಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಹೆಸ್ಕಾಂ ಇಲಾಖೆಯಿಂದ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿ, ನಿಗದಿತ ಇಲಾಖೆಗಳು ಮಾತ್ರವಲ್ಲದೇ ಎಲ್ಲ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ, ಜವಾಬ್ದಾರಿಯುತವಾಗಿ ಕಾರ್ಯನಿರ್ವವಹಿಸುವಂತೆ ಜಿಲ್ಲಾಧಿಕಾರಿಗಳು ಖಡಕ್​ ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಹೆಚ್ಚುವರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಮತ್ತಿತರರಿದ್ದರು.

ವಿಜಯಪುರದ ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್​ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾತನಾಡಿದರು. ಸೋಮಲಿಂಗ ಗೆಣ್ಣೂರ, ಹೆಚ್ಚುವರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net