

ತರೀಕೆರೆ: ಅಜ್ಜಂಪುರ ಪಟ್ಟಣದ ಬುಕ್ಕಾಂಬುದಿ ರಸ್ತೆಯಲ್ಲಿ ಶಿಥಿಲಗೊಂಡಿದ್ದ ಓವರ್‌ಹೆಡ್ ಟ್ಯಾಂಕ್ ತೆರವು ಕಾರ್ಯಾಚರಣೆಗೆ ಅಗತ್ಯ ಎಚ್ಚರಿಕೆ ಕ್ರಮಕೈಗೊಳ್ಳದ ಪರಿಣಾಮ ಭಾರಿ ಅನಾಹುತ ಎದುರಾಗಿತ್ತು.
ಅದೃಷ್ಟವಶಾತ್ ಇಬ್ಬರು ಸಣ್ಣಪುಟ್ಟ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ ಸಂಜೆ ಅಜ್ಜಂಪುರ ಪಪಂ ಅಧಿಕಾರಿಗಳು 80 ವರ್ಷಗಳ ಹಿಂದಿನ ಓವರ್‌ಹೆಡ್ ಟ್ಯಾಂಕ್ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ಓವರ್‌ಹೆಡ್ ಟ್ಯಾಂಕ್ ಅರೆಕ್ಷಣದಲ್ಲಿ ಉರುಳಿ ವಿದ್ಯುತ್ ಕಂಬದ ಮೇಲೆ ಬಿದ್ದಿತು. ಟ್ಯಾಂಕ್ ಬೀಳುವ ವೇಳೆ ರಸ್ತೆಗೆ ಬಂದ ಕಾರೊಂದು ಚಾಲಕನ ಸಮಯ ಪ್ರಜ್ಞೆಯಿಂದ ಪಾರಾಗಿದೆ.