ಓವರ್ ಹೆಡ್ ಟ್ಯಾಂಕ್‌ನಡಿ ವಾಸಿಸುತ್ತಿದ್ದ

Published on

ಕುಟುಂಬಕ್ಕೆ ಮನೆ ಮಂಜೂರು | ಶಾಸಕ ಪುಟ್ಟಸ್ವಾಮಿ ನಡೆಗೆ ನಾಗರಿಕರ ಮೆಚ್ಚುಗೆ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ವ್ಯಕ್ತಿಯೊಬ್ಬ ನೀರಿನ ಓವರ್ ಹೆಡ್ ಟ್ಯಾಂಕ್‌ನಡಿ ವಾಸವಾಗಿದ್ದನ್ನು ಗಮನಿಸಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರು ಸ್ಥಳದಲ್ಲೇ ಮನೆ ಮಂಜೂರು ಮಾಡಿದ್ದಾರೆ.

ಹೊಸೂರು ಗ್ರಾಮದ ಮಡಿವಾಳ ಲಿಂಗಪ್ಪ 2 ವರ್ಷಗಳ ಹಿಂದೆ ಮನೆ ಕಳೆದುಕೊಂಡಿದ್ದರು. ಮನೆ ಕಟ್ಟಿಸಿಕೊಳ್ಳಲು ಸಾಧ್ಯವಾಗದೆ ಗ್ರಾಮದ ನೀರಿನ ಓವರ್ ಹೆಡ್ ಟ್ಯಾಂಕ್ ಕಂಬಗಳಿಗೆ ತೆಂಗಿನಗರಿಗಳನ್ನು ಹೊದಿಸಿ ವಾಸಕ್ಕೆ ವ್ಯವಸ್ಥೆ ಮಾಡಿಕೊಂಡು, ಬದುಕು ಸಾಗಿಸುತ್ತಿದ್ದರು. ತನಗೆ ಮನೆಯಿಲ್ಲದೆ ತಾನು ನಿರಾಶ್ರಿತನಂತೆ ವಾಸ ಮಾಡುತ್ತಿರುವುದನ್ನು ಅಧಿಕಾರಿಗಳಿಗೆ ತಿಳಿಸಿ ಮನೆ ನಿರ್ಮಿಸಿಕೊಡಲು ಹಲವು ಬಾರಿ ಕೇಳಿಕೊಂಡಿದ್ದರೂ ಪ್ರಯೋಜನವಾಗಿರಲಿಲ್ಲ. ಮಳೆ, ಗಾಳಿಯನ್ನೂ ಲೆಕ್ಕಿಸದೆ ಸೊಳ್ಳೆ ಕಾಟ ತಾಳಿಕೊಂಡು ಬೀದಿ ನಾಯಿಗಳ ಜತೆ ವಾಸಿಸುತ್ತಿದ್ದರು.

ಬೆಂಬಲಿಗರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಲಿಂಗಪ್ಪನ ಸ್ಥಿತಿಯನ್ನು ಗಮನಿಸಿ ಬೇಸರ ವ್ಯಕ್ತಪಡಿಸಿದರಲ್ಲದೇ ತಾಪಂ ಇಒ ಹೊನ್ನಯ್ಯ ಮತ್ತು ಗ್ರಾ.ಪಂ ಅಧ್ಯಕ್ಷೆ ಗೀತಾ ನಾಗರಾಜ ಅವರನ್ನು ಸ್ಥಳಕ್ಕೆ ಕರೆಸಿ, ಲಿಂಗಪ್ಪನಿಗೆ ಸರ್ಕಾರದಿಂದ ಕೂಡಲೇ ಮನೆ ಮಂಜೂರು ಮಾಡಬೇಕು ಎಂದು ಸೂಚನೆ ನೀಡಿದರು. ಮಂಜೂರು ಮಾಡಿದ ಮನೆಯನ್ನು ಅಧಿಕಾರಿಗಳೇ ಖುದ್ದು ಕಟ್ಟಿಸಿಕೊಡಬೇಕು. ಮನೆ ಪೂರ್ಣಗೊಳಿಸಲು ಸರ್ಕಾರದ ಅನುದಾನ ಸಾಲದಾದಲ್ಲಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀತಾ ನಾಗಪ್ಪ, ಮುಖಂಡರಾದ ಚಂದ್ರಣ್ಣ, ಲಕ್ಷ್ಮಣರಾವ್, ಬೊಮ್ಮಣ್ಣ, ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net