

ಕಲಬುರಗಿ: ರಸ್ತೆಗಳು ಹಾಳಾಗಲು ಹೆಚ್ಚು ಭಾರವುಳ್ಳ ಲಾರಿಗಳು ಓಡಾಡುವುದು ಪ್ರಮು ಕಾರಣವಾಗಿದೆ. ಇದರ ವಿರುದ್ಧ ಸತತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರಡ್ಡಿ ತಿಳಿಸಿದರು.
ನಗರದ ಸಾರಿಗೆ ಸದನದಲ್ಲಿ ಬುಧವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಓವರ್ ಲೋಡ್ ವಾಹನಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದು, ಕಲ್ಯಾಣ ರ‍್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ೬೦೭ ಪ್ರಕರಣ ದಾಖಲಾಗಿವೆ. ಕಲಬುರಗಿ ಜಿಲ್ಲೆಯಲ್ಲಿ ೨೪೦ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಒಂದು ಟನೆ (ಚಿತ್ತಾಪುರದ ಬಾಗೋಡಿ ಮರಳು ಸಾಗಣೆ) ಆಗಿದೆ ಎಂದು ಕ್ರಮ ತೆಗೆದುಕೊಳ್ಳುವುದಲ್ಲ. ಎಲ್ಲ ಕಡೆ ಗರ್ಡ್ಗಳನ್ನು, ಸಿಬ್ಬಂದಿಯನ್ನು ನಿಯೋಜಿಸಬೇಕು. ಓವರ್ ಲೋಡ್ ಕಂಡ ತಣ ಆ್ ಲೋಡ್ ಮಾಡಿಸಬೇಕು. ಗ್ರಾಮೀಣ ಭಾಗದಲ್ಲಿ ರಸ್ತೆ ಹದಗೆಡಲು ಓವರ್ಲೋಡ್ ಕಾರಣವಾಗಿದ್ದು, ನಿರಂತರ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ವಿಮೆ ರಹಿತ, ಚಾಲನಾ ಪರವಾನಗಿ ಇಲ್ಲದ, ಹೆಲ್ಮೆಟ್ ಇಲ್ಲದ, ರ‍್ಯಾಶ್ ಡೆವಿಂಗ್ ಸೇರಿ ಚಾಲನಾ ನಿಯಮಗಳ ಉಲ್ಲಂನೆ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಲಾಗಿದೆ. ಇಡೀ ರಾಜ್ಯದಲ್ಲಿ ೧೫ ಸಾವಿರ ಪ್ರಕರಣ ದಾಖಲಿಸಿ, ೧೩,೫೦೦ ಕೋಟಿ ರೂ. ರಾಜಧನ ಸಂಗ್ರಹದ ಗುರಿ ಹೊಂದಲಾಗಿದೆ. ಕಳೆದ ರ‍್ಷ ಕಲ್ಯಾಣ ರ‍್ನಾಟಕ ಭಾಗದಲ್ಲಿ ಶೇ.೯೨ ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.
ವಾಹನಗಳಿಗೆ ಜಿಪಿಎಸ್ ಕಡ್ಡಾಯವಾಗಿ ಹಾಕಿಸಬೇಕು. ವಿರೋಧ ಪಡಿಸುವುದರಲ್ಲಿ ರ‍್ಥವಿಲ್ಲ. ಜಿಪಿಎಸ್ ವಿರುದ್ಧ ಕರ್ಟ್ಗೆ ಹೋದವರಿಗೆ ಸೋಲಾಗಿದ್ದು, ಕರ‍್ಟ್ ಸಹ ಜಿಪಿಎಸ್ ಇರಲಿ ಎಂದು ಆದೇಶಿಸಿದೆ. ಎಚ್ಎಸ್ಆರ್ಪಿ ಉದ್ದೇಶ ಈಡೇರಿಸಲು ಜಿಪಿಎಸ್ ಬೇಕಾಗುತ್ತದೆ. ಇದು ಎಲ್ಲ ಚಟುವಟಿಕೆಗಳ ನಿಯಂತ್ರಣಕ್ಕೆ ಪೂರಕ ಎಂದು ಹೇಳಿದರು.
ಸಭೆಯಲ್ಲಿ ಕೆಕೆಆರ್ಟಿಸಿ ಎಂಡಿ ಎಂ.ರಾಚಪ್ಪ, ವಿಭಾಗೀಯ ಜಂಟಿ ಸಾರಿಗೆ ಅಧಿಕಾರಿ ಸಿದ್ದಪ್ಪ ಎಚ್., ಆರ್ಟಿಒಗಳಾದ ಆನಂದ ಪರ‍್ಥನಳ್ಳಿ, ವಸಂತ ಚವ್ಹಾಣ್, ಜಿ.ಕೆ.ಬಿರಾದಾರ, ಕೆ.ದಾಮೋದರ ಸೇರಿ ವಿಭಾಗದ ಎಲ್ಲ ಆರ್ಟಿಒ ಅಧಿಕಾರಿಗಳು ಇದ್ದರು.
ಸ್ರ‍್ಕಾ$ಪ್ ಟಕಕ್ಕೆ ಅವಕಾಶ: ಕೇಂದ್ರ ರ‍್ಕಾರವೂ ೧೫ ರ‍್ಷದ ವಾಹನಗಳನ್ನು ಸ್ರ‍್ಕಾ$ಪ್ ಮಾಡುವ ಯೋಜನೆ ಜಾರಿಗೆ ತಂದಿದ್ದು, ರಾಜ್ಯದಲ್ಲಿ ಬೆಂಗಳೂರು, ಕೊಪ್ಪಳ ಸೇರಿ ಮೂರು ಕಡೆಯಲ್ಲಿ ಸ್ರ‍್ಕಾ$ಪ್ ಟಕಗಳು ಇವೆ. ಕಲಬುರಗಿಯಲ್ಲಿ ಯಾರಾದರೂ ನಿಯಮದಂತೆ ಸ್ರ‍್ಕಾ$ಪ್ ಟಕ ಆರಂಭಿಸಲು ಮುಂದೆ ಬಂದರೆ ಅವಕಾಶ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರಡ್ಡಿ ತಿಳಿಸಿದರು.
ಒತ್ತಡ ನಿಯಂತ್ರಣ: ಶಕ್ತಿ ಯೋಜನೆಯಿಂದ ಚಾಲಕ ಕಂ ನರ‍್ವಾಹಕರ ಕರ‍್ಯದೊತ್ತಡ ಹೆಚ್ಚಾಗಿದ್ದು, ಆರೋಗ್ಯ ಸಮಸ್ಯೆ ತೀವ್ರವಾಗುತ್ತಿದೆ ಎಂಬ ಪತ್ರರ‍್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಮಲಿಂಗಾರಡ್ಡಿ, ನಿಯಮದಂತೆ ಚಾಲಕ ಕಂ ನರ‍್ವಾಹಕರನ್ನು ನಿಯೋಜಿಸಲಾಗುತ್ತದೆ. ಸಾಮಾನ್ಯವಾಗಿ ೪೦ ರ‍್ಷಕ್ಕಿಂತ ಹೆಚ್ಚು ವಯಸ್ಸಾದವರಿಗೆ ಆರೋಗ್ಯ ತಪಾಸಣೆ ಮಾಡದಿದ್ದರೆ ಸಮಸ್ಯೆ ಆಗಿದೆ ಎಂದು ಸಚಿವ ರಾಮಲಿಂಗಾರಡ್ಡಿ ತಿಳಿಸಿದರು. ಒತ್ತಡ ನಿಯಂತ್ರಣಕ್ಕೆ ಹೆಚ್ಚುವರಿ ಸಿಬ್ಬಂದಿ ನೇಮಕ ನಡೆದಿದೆ ಎಂದು ಕೆಕೆಆರ್ಟಿಸಿ ವ್ಯವಸ್ಥಾಪಕ ನರ‍್ದೇಶಕ ರಾಚ್ಚಪ್ಪ ತಿಳಿಸಿದರು.