ಓಬವ್ವ ಪ್ರಶಸ್ತಿಗೆ ಡಾ.ಕವಿತಾ ಭಾಜನ

DR.Kavitha IPS
Published on

ಚಿತ್ರದುರ್ಗ: ಜೋಗಿಮಟ್ಟಿ ರಸ್ತೆಯ ಐದನೇ ತಿರುವು ಸಮೀಪ ಜೋಗಿಮಟ್ಟಿ ಗೆಳೆಯರ ಬಳಗದಿಂದ ನ. 30ರಂದು 9ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ.

ತಾಯಿ ಭುವನೇಶ್ವರಿ ದೇವಿಗೆ ಮಹಾಪೂಜೆ, ಧ್ವಜಾರೋಹಣ ನೆರವೇರಿದ ನಂತರ ಉಚಿತ ಆರೋಗ್ಯ ತಪಾಸಣೆ, ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಆಯೋಜಿಸಲಾಗಿದೆ.

ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನ ಸಹಯೋಗದೊಂದಿಗೆ ನೀಡಲಾಗುವ 2023ನೇ ಸಾಲಿನ ವೀರವನಿತೆ ಒನಕೆ ಓಬವ್ವ ಪ್ರಶಸ್ತಿಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್‌ಪಿ ಡಾ.ಬಿ.ಟಿ.ಕವಿತಾ, ಮಾಧ್ಯಮ ಸೇವಾರತ್ನ ಪ್ರಶಸ್ತಿಗೆ ಪತ್ರಕರ್ತ ವಿಜಯ್ ಭರಮಸಾಗರ ಭಾಜನರಾಗಲಿದ್ದಾರೆ.

ಬೆಳಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ವಹಿಸುವರು. ಉದ್ಯಮಿ ಸುರೇಶ್‌ಬಾಬು ಧ್ವಜಾರೋಹಣ ನೆರವೇರಿಸುವರು. ಅತಿಥಿಗಳಾಗಿ ಕಾಂಗ್ರೆಸ್ ಮುಖಂಡರಾದ ಕೆ.ಸಿ.ನಾಗರಾಜ್, ಸುನಿಲ್‌ಕುಮಾರ್ ಭಾಗವಹಿಸುವರು ಎಂದು ಬಳಗದ ಅಧ್ಯಕ್ಷ ಎಸ್.ರಾಘವೇಂದ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net