ಓಬವ್ವ ಜಯಂತಿ ಮನೆ ಮನೆ ಉತ್ಸವವಾಗಲಿ

CTD ONAKE OBAVA..
Published on

ಚಿತ್ರದುರ್ಗ:ವೀರ ವನಿತೆ ಒನಕೆ ಓಬವ್ವ ತನ್ನ ತ್ಯಾಗ, ಬಲಿದಾನದ ಮೂಲಕ ನಾಡಿಗೆ ಆದರ್ಶ ಸ್ತ್ರೀಯಾಗಿದ್ದಾಳೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪ ರಿಷತ್ ಅಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ ಹೇಳಿದರು.

ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಒನಕೆ ಓಬವ್ವ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಶೌರ್ಯ, ಸಾಹಸದ ಪ್ರತೀಕವಾದ ಈ ಉತ್ಸವವನ್ನು ಎಲ್ಲ ಜಾತಿ, ಮತ, ಪಂಥ, ಧರ್ಮದ ಮಹಿಳೆಯರು ಆಚರಿಸಬೇಕು. ವೀರ ವನಿತೆ ಓಬವ್ವ ತ್ಯಾಗ, ಸಾಮಾಜಿಕ ಸಾಮರಸ್ಯಕ್ಕೆ ಐಕಾನ್ ಆಗಬೇಕಾಗಿದೆ ಎಂದರು.

ಮದಕರಿ ನಾಯಕರಾಳಿದ ದುರ್ಗದ ಕೋಟೆ ರಕ್ಷಿಸಲು ತನ್ನನ್ನೇ ಸಮರ್ಪಿಸಿಕೊಂಡ ಓಬವ್ವ ವೀರಗಾಥೆ ಪ್ರತಿ ಮನೆ, ಮನಸ್ಸುಗಳನ್ನು ತಲುಪಬೇಕಿದೆ. ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ತತ್ವಾದರ್ಶಗಳೊಂದಿಗೆ ಹೋರಾಡುತ್ತಿರುವ ಜನಪರ ಹೋರಾಟಗಾರರು ಸಾಮಾಜಿಕ ಸಾಮರಸ್ಯ ಗಟ್ಟಿಗೊಳಿಸಲು ದುರ್ಗದ ಮನೆ, ಮನೆಯ ಉತ್ಸವದಂತೆ ಓಬವ್ವ ಜಯಂತಿಯನ್ನು ಆಚರಿಸುವಂತಾಗಬೇಕೆಂದರು.

ಬಿಎಸ್‌ಐ ಜಿಲ್ಲಾ ಕಾರ‌್ಯದರ್ಶಿ ನನ್ನಿವಾಳ ರವಿಕುಮಾರ್, ಬೆಸ್ಕಾಂ ತಿಪ್ಪೇಸ್ವಾಮಿ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಅವಿನಾಶ್, ಇ.ನಾಗೇಂದ್ರಪ್ಪ, ಇಂದೂಧರ್, ಗೌತಮ್, ರಾಮಶೇಖರ್, ಶಕುಂತಲಾ, ಜಿ.ಶಾಂತಮ್ಮ, ಉಷಾ, ಮಾನಸಾ, ಬನ್ನಿಕೋಡ್ ರಮೇಶ್, ಸಚಿನ್, ತಿಪ್ಪಮ್ಮ, ಶಾಂತಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net