ಓದುಗರ ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳ ಖರೀದಿಗೆ ಸೂಚನೆ

ಓದುಗರ ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳ ಖರೀದಿಗೆ ಸೂಚನೆ
Published on

ಹಾಸನ: ಜಿಲ್ಲೆಯಲ್ಲಿರುವ ಗ್ರಂಥಾಲಯಗಳಲ್ಲಿ ಓದುಗರ ಬೇಡಿಕೆಗೆ ಅನುಗುಣವಾಗಿ ಉತ್ತಮ ಪುಸ್ತಕಗಳನ್ನು ಖರೀದಿಸಿ ಸಾರ್ವಜನಿಕರಿಗೆ ಒದಗಿಸುವುದರ ಜೊತೆಗೆ ಕುಳಿತು ಓದಲು ಅಗತ್ಯ ವ್ಯವಸ್ಥೆಗೂ ಕೂಡ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಂಥಾಲಯಗಳಲ್ಲಿ ಸ್ವಚ್ಚತೆಗೆ ಅದ್ಯತೆ ನೀಡಿ ಒಳ ಮತ್ತು ಹೊರ ಆವರಣವನ್ನು ಸ್ವಚ್ಚವಾಗಿಡಲು ಸೂಚಿಸಿದರಲ್ಲದೆ, ಗ್ರಂಥಾಲಯಗಳ ಜಾಗ ಒತ್ತುವರಿಯಾಗದಂತೆ ನಿಗಾವಹಿಸಿ ಎಂದು ತಿಳಿಸಿದರು.
ಅರಕಲಗೂಡು ಶಾಖಾ ಗ್ರಂಥಾಲಯ ಹಾಗೂ ಚನ್ನರಾಯಪಟ್ಟಣ ತಾಲೂಕಿನ ಕೆ.ಸಿದ್ದಹಟ್ಟಿಯಲ್ಲಿನ ಅಲೆಮಾರಿ ಗ್ರಂಥಾಲಯಗಳಿಗೆ ನೂತನ ಕಟ್ಟಡ ನಿರ್ಮಾಣಕ್ಕಾಗಿ ನಿರ್ಮಿತಿ ಕೇಂದ್ರ ಅಥವಾ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ವೆಚ್ಚದ ಪಟ್ಟಿ ಪಡೆಯಲು ಕ್ರಮವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡು, ಜಿಲ್ಲಾ ಗ್ರಂಥಾಲಯದ ಉಪ ನಿರ್ದೇಶಕ ಹಸೀನ ತಾಜ್ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net