ಓದು ಜ್ಞಾನ ವೃದ್ಧಿಗೆ ಸಹಕಾರಿ

CTD NNN
Published on

ಚಿತ್ರದುರ್ಗ: ಓದು ಆತ್ಮವಿಶ್ವಾಸ,ಜ್ಞಾನ ವೃದ್ಧಿಗೆ ಸಹಕಾರಿ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಜೆ.ಯಾದವ್ ರೆಡ್ಡಿ ಹೇಳಿದರು. ದಾವಣಗೆರೆ ವಿವಿ,ನ ಗರದ ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ‘ದಸರಾ ಸಾಹಿತ್ಯ ಸಿರಿಯಡಿ ಪರಮೇಶ್ವರಪ್ಪ ಕುದರಿ ಅವರ ಗಣ್ಯರ ಸಂದರ್ಶನ‘ಮನದಂಗಳ’,ಕಥಾಸಂಕಲನ‘ಕೊನೆಗೂ ಅರ್ಥವಾಗದವಳು’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅ ವರು,ಜನರಲ್ಲಿ ಓದುವ ಸಂಸ್ಕೃತಿ ಕಡಿಮೆಯಾಗಿ,ನೋಡುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಇದರಿಂದ ನಮ್ಮೆಲ್ಲರ ಜ್ಞಾನ ಕಡಿಮೆಯಾಗುತ್ತದೆ.ಪು ಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ, ಜ್ಞಾನದಿಂದ ಜಗತ್ತನ್ನೇ ಗೆಲ್ಲಬಹುದು. ಪುಸ್ತಕ ಸಂಸ್ಕೃತಿ ಎಂದಿಗೂ ಸಹಾ ನಾಶವಾಗುವು ದಿಲ್ಲ ಎಂದರು.
ಕಥಾ ಸಂಕಲನದ ಕುರಿತು ನಿವೃತ್ತ ಉಪನ್ಯಾಸಕಿ ಶೈಲಾವಿಜಯಕುಮಾರ್ ಮಾತನಾಡಿ,ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ,ರಾಕ್ಷಸರನ್ನು ಮೀರಿಸುವ ಒಂದು ವರ್ಗ ತಲೆ ಎತ್ತುತ್ತಿದೆ. ಮೃಗೀಯ ಸಂಸ್ಕೃತಿ ಹೊಂದಿದವರ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಆತ ಂಕ ವ್ಯಕ್ತಪಡಿಸಿದರು. ಕಥಾ ಸಂಕಲನ ಸರಳವಾಗಿದೆ ಎಂದರು.
ಸಾಹಿತಿ ಹುರಳಿ ಎಂ.ಬಸವರಾಜು‘ಮನದಂಗಳ’ಕೃಷಿ ಅವಲೋಕನ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ ಅಧ ಕ್ಷ ಕೆ.ಎಂ.ವೀರೇಶ್,ಲೇಖಕ ಪರಮೇಶ್ವರಪ್ಪ ಕುದರಿ ಗಂಜಿಗಟ್ಟೆ ಕೃಷ್ಣಮೂರ್ತಿ,ಜಗನ್ನಾಥ್,ಷರೀಫಾಬಿ ಇತರರು ಇದ್ದರು.ಪ್ರಾಚಾರ‌್ಯೆ ಎಂ. ಆರ್.ಜಯಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿದರು. ತನುಜಾ ಪ್ರಾರ್ಥಿಸಿದರು. ಶಿವಕುಮಾರ್ ಸ್ವಾಗತಿಸಿ,ಡಾ.ಹನುಮಂತರೆಡ್ಡಿ ವಂದಿ ಸಿದರು. ಪದ್ಮಶ್ರೀ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net