

ಕಲಬುರಗಿ: ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಆಟವು ಮುಖ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗದಿಂದ ಅಂತರ ವಿಭಾಗಗಳ ಖೋ ಖೋ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಆಟದಿಂದ ಏಕಾಗ್ರತೆ, ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಒತ್ತಡ ನಿವಾರಿಸುವ ಶಕ್ತಿ ದೊರೆಯುತ್ತದೆ. ಬೇರೆ ಆಟಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕೀರ್ತಿ ತರಬೇಕು ಎಂದರು.
ಸೂಕ್ತ ತರಬೇತಿ ಸಿಕ್ಕಾಗ ರಾಷ್ಟç, ಅಂತಾರಾಷ್ಟಿçÃಯ ಮಟ್ಟದಲ್ಲಿ ಭಾಗವಹಿಸಲು ಸಾಧ್ಯ. ಸೋಲು, ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ ಎಂದರು.
ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಸ್.ಎಂ.ಹೋಳಿ ಮಾತನಾಡಿ, ಆಟಗಳಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೈಹಿಕವಾಗಿ ಸದೃಢರಾಗುತ್ತಾರೆ. ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕವಾಗಿ ಪ್ರಬಲವಾಗುತ್ತಾರೆ. ಜಾಣತನದ ನಿರ್ಣಯ ಕೈಗೊಳ್ಳುವಂತೆ ಪ್ರಚೋಧಿಸಿ ಬುದ್ಧಿಶಕ್ತಿಯ ಬೆಳವಣಿಗೆಗೆ ಸಹಾಯಕವಾಗಿದೆ ಎಂದರು.
ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಮಕ್ಕಳು ಆಟ ಆಡುವುದರಿಂದ ಮೆದುಳು ಬಲವಾಗಿ ಮತ್ತು ಬುದ್ಧಿವಂತವಾಗಿ ಬೆಳೆಯುತ್ತದೆ. ಉತ್ತಮ ಸಂವಹನ, ಒಳ್ಳೆಯ ತೀರ್ಮಾನ ತೆಗೆದುಕೊಳ್ಳುವಿಕೆ, ಭಯ ಹೋಗಲಾಡಿಸುತ್ತದೆ. ದೈಹಿಕ ಸದೃಢತೆಯಿಂದ ಮಾತ್ರ ಸಾಧನೆ ಸಾಧ್ಯ ಎಂದರು.
ಮುಕ್ತಾAಬಿಕ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಎಂ.ಆರ್.ಹುಗ್ಗಿ, ವಿದ್ಯಾರ್ಥಿ ಸಂಘದ ಸಲಹೆಗಾರ ಡಾ.ಸೀಮಾ ಪಾಟೀಲ್, ಐಕ್ಯೂಎಸಿ ಸಂಯೋಜಕ ಡಾ.ಸಿದ್ಧಲಿಂಗರೆಡ್ಡಿ, ಅಪ್ಪ ಪಬ್ಲಿಕ್ ಶಾಲೆಯ ಅನೀಲ ನಾಟೀಕರ ಇದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಮಿಲಿಂದ ಸುಳ್ಳದ ಸ್ವಾಗತಿಸಿದರು. ಜವೇರಿಯಾ ಅಂಜುಮ್ ನಿರೂಪಣೆ ಮಾಡಿದರು.