ಓದಿನಂತೆ ಕ್ರೀಡೆಗಳತ್ತಲೂ ಆಸಕ್ತಿವಹಿಸಲಿ

NRD KRIDAKUTA
Published on

ನರಗುಂದ: ಕ್ರೀಡೆಗಳು ಮನುಷ್ಯನ ಆರೋಗ್ಯ ವೃದ್ಧಿಗೂ ಉತ್ತೇಜನ ನೀಡುತ್ತವೆ. ಅಂತೆಯೇ ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಿನೆಡೆಗೆ ಆಸಕ್ತಿವಹಿಸಿದಂತೆ ಕ್ರೀಡೆಗಳಲ್ಲಿಯೂ ಭಾಗಿಯಾಗಿ ಸದೃಢ ಆರೋಗ್ಯ ತಮ್ಮದಾಗಿಸಿಕೊಳ್ಳಬೇಕು ಎಂದು ಶಾಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ ಹೇಳಿದರು.

ಪಟ್ಟಣದ ರೋಟರ್ಯಾಕ್ಟ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕ ಕ್ರೀಡಾಕೂಟಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಂದು ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಕ್ರೀಡೆಗಳಿಂದ ದೊರೆಯುವ ಸರ್ವ ಜ್ಞಾನಗಳ ಅನುಭವದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಚನ್ನಪ್ಪ ಕೋರಿ ಮಾತನಾಡಿ, ಮಕ್ಕಳು ನಮ್ಮ ದೇಶಿಯ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದುವ ಮೂಲಕ ಹೆಮ್ಮೆಯ ಕ್ರೀಡಾಪಟುಗಳಾಗಿ ಹೆಸರುಗಳಿಸಬೇಕು ಎಂದರು.

ಶಾಲಾ ಆಡಳಿತ ಮಂಡಳಿ ಖಜಾಂಚಿ ಪ್ರವೀಣ ಆನೇಗುಂದಿ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಂ. ಕಲಹಾಳ ಹಾಗೂ 400 ಮೀಟರ್ ಓಟದಲ್ಲಿ ಎರಡು ಬಾರಿ ಚಿನ್ನದ ಪದಕ ಪಡೆದ ಅನಿಲ ಜಮಖಂಡಿ ಮಾತನಾಡಿದರು.

ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಪಿ.ವಿ. ಕೆಂಚನಗೌಡ್ರ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಫ್.ವಿ. ಶಿರುಂದಮಠ, ಶಾಲಾ ಸಂಯೋಜಕ ಬಿ.ಎಸ್. ಕಬಾಡ್ರ, ಎಂ.ಆರ್. ಜವಳಿ, ಎಸ್.ವಿ. ಬ್ಯಾಹಟ್ಟಿ, ಎಸ್.ಎಸ್. ಸಂಪಗಾವ, ಇತರರು ಉಪಸ್ಥಿತರಿದ್ದರು. ಪ್ರಜ್ಞಾ ಮುಧೋಳೆ, ಭೂಮಿಕಾ ಜ್ಯೋತೆನ್ನವರ, ಅರ್ಪಿತಾ ಸಂಗೊಳ್ಳಿ, ವೀಣಾ ಉನ್ನಿ, ತನುಶ್ರಿ ಅರಕೇರಿ ಹಾಗೂ ಪೃಥ್ವಿ ಗಾಣಿಗೇರ ಕಾರ್ಯಕ್ರಮ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net