ಓದಿನ ಜತೆಗೆ ಕ್ರೀಡೆಗಳಿಗೂ ಆದ್ಯತೆ ಕೊಡಿ

7SGR1
ಸಾಗರದಲ್ಲಿ ಏರ್ಪಡಿಸಿದ್ದ 14 ವರ್ಷದೊಳಗಿನವರ ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟವನ್ನು ಸಂಜಯ ವಿದ್ಯಾಕೇಂದ್ರದ ಮುಖ್ಯಸ್ಥೆ ಡಾ. ರಾಜನಂದಿನಿ ಶಾಟ್‌ಪಟ್ ಎಸೆದು ಉದ್ಘಾಟಿಸಿದರು. ಮೈತ್ರಿ ಪಾಟೀಲ್, ಸವಿತಾ ವಾಸು, ಇ.ಪರಶುರಾಮಪ್ಪ, ಮಾಲತೇಶ್ ಇತರರಿದ್ದರು.
Published on

ಸಾಗರ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಓದಿನ ಒತ್ತಡದಿಂದ ಮಾನಸಿಕ ಖಿನ್ನತೆಗೆ ಒಳಗುತ್ತಿದ್ದಾರೆ. ಹಾಗಾಗಿ ಮಕ್ಕಳನ್ನು ಮನೋವಿಕಾಸಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪಾಲಕರು, ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು.

ಸಾಗರದ ನೆಹರು ಮೈದಾನದಲ್ಲಿ ಗುರುವಾರ ಶಿಕ್ಷಣ ಇಲಾಖೆ ಮತ್ತು ಜ್ಞಾನಸಾಗರ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ಏರ್ಪಡಿಸಿದ್ದ 14 ವರ್ಷದೊಳಗಿನ ಬಾಲಕ-ಬಾಲಕಿಯರ ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಅಂಕಗಳ ಹಿಂದೆ ಮಕ್ಕಳು ಓಡುತ್ತಿದ್ದಾರೆ. ಮಕ್ಕಳು ಶತಾಯಗತಾಯ ಹೆಚ್ಚಿನ ಅಂಕಗಳನ್ನು ಪಡೆಯಲೇಬೇಕು ಎಂಬ ಮನಸ್ಥಿತಿ ಪಾಲಕರದು. ಮಕ್ಕಳ ಮನಸ್ಸಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದ್ದು, ಅವರಿಗೆ ಮಾನಸಿಕ ಸ್ಥೆರ್ಯದ ಅಗತ್ಯವಿದೆ. ಪಾಠದ ಜತೆ ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು

ಸಂಜಯ ವಿದ್ಯಾಕೇಂದ್ರದ ಮುಖ್ಯಸ್ಥೆ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ವೈದ್ಯೆಯಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ನನಗೆ ಮಕ್ಕಳ ಮನಸ್ಥಿತಿಯ ಅರಿವಿದೆ. ಓದು ಒಂದನ್ನೇ ಮಕ್ಕಳ ಮೇಲೆ ಹೇರುವ ಕೆಲಸವಾಗಬಾರದು. ಓದು ಎಷ್ಟು ಅಗತ್ಯವೋ ಆಟೋಟಗಳು ಅಷ್ಟೇ ಅಗತ್ಯ. ದಕ್ಷಿಣ ವಲಯದ ಮಟ್ಟದ ಕ್ರೀಡಾಕೂಟವನ್ನು ನಮ್ಮ ಸಂಸ್ಥೆ ಪ್ರತಿನಿಸುವ ಮೂಲಕ ಕ್ರೀಡೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದೆ. ಆಧುನಿಕ ತಂತ್ರಜ್ಞಾನವೂ ಕೂಡ ಮಕ್ಕಳನ್ನು ಆಕರ್ಷಿಸುತ್ತಿದ್ದು, ಅದನ್ನು ಶಿಕ್ಷಣಕ್ಕೆ ಪೂರಕವಾಗಿ ಮಾತ್ರ ಬಳಸಬೇಕು ಎಂದರು.

ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಕ್ಷೇತ್ರ ಶಿಕ್ಷಣಾಕಾರಿ ಇ.ಪರಶುರಾಮಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್, ಪ್ರಮುಖರಾದ ದೇವೇಂದ್ರಪ್ಪ, ಡಾ. ಅನ್ನಪೂರ್ಣಾ, ಭೂಮೇಶ್, ಪಾಲಾಕ್ಷಪ್ಪ, ರಮೇಶ್, ಹನುಮಂತಪ್ಪ, ಪ್ರಶಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net