ಓಣಂ ಹಬ್ಬ ಆಚರಣೆ

08bnk2 web
Published on

ಬಣಕಲ್: ಬಣಕಲ್ ಹಾಗೂ ಸುತ್ತಮುತ್ತ ಮಲಯಾಳಿಗರು ಸಡಗರದಿಂದ ಓಣಂ ಹಬ್ಬ ಆಚರಿಸಿದರು. ಪೂಕಳಂ ಎಂದು ಕರೆಯುವ ಹೂವಿನ ರಂಗೋಲಿಯನ್ನು ಮನೆಯ ಅಂಗಳದಲ್ಲಿ ಬಿಡಿಸಿ ನಡುವೆ ದೀಪ ಹಚ್ಚಿಟ್ಟು ಸಂಭ್ರಮಿಸಿದರು. ಕೇರಳ ಶೈಲಿಯ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರೊಂದಿಗೆ ಹಬ್ಬ ಆಚರಿಸಿದರು. ಸುಭಾಷನಗರ, ಕುವೆಂಪು ನಗರ, ಇಂದಿರಾನಗರ, ಕೊಟ್ಟಿಗೆಹಾರ, ಬಾಳೂರು ಇತರೆಡೆ ಹಬ್ಬ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net