

ಗುಂಡ್ಲುಪೇಟೆ: ಪಟ್ಟಣದಲ್ಲಿ ಓಣಂ ಹಬ್ಬವನ್ನು ಕೇರಳ ಮೂಲದವರು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.
ಮುಂಜಾನೆಯೇ ಕೇರಳ ಉಡುಗೆಗಳನ್ನು ತೊಟ್ಟ ಮಹಿಳೆಯರು ಮನೆ ಮುಂಭಾಗದಲ್ಲಿ ಹೂವಿನ ದಳಗಳಿಂದ ವಿವಿಧ ವರ್ಣಗಳ ರಂಗೋಲಿ ಬಿಡಿಸಿ ಅದರ ನಡುವೆ ದೀಪ ಹಚ್ಚಿ ಪೂಜೆ ಸಲ್ಲಿಸಿದರು. ಶುಭ್ರ ವಸ್ತ್ರಧಾರಿ ಪುರುಷರು ಹಾಗೂ ಮಕ್ಕಳು ಸಾಂಪ್ರದಾಯಿಕ ಓಣಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಕೇರಳ ಸಮಾಜದ ಮುಖಂಡರಾದ ಕೆ.ವಿ.ಶ್ರೀನಿವಾಸ್, ಮುಕುಂದ, ಶರತ್‌ಕುಮಾರ್ ಸೇರಿದಂತೆ ಹಲವರು ವಿಶೇಷವಾದ ಖಾದ್ಯಗಳನ್ನು ತಯಾರಿಸಿ ಸಂತಸ ಪಟ್ಟರು.