ಬೈಲಹೊಂಗಲ: ಸರ್ಕಾರಿ ನೌಕರರು ಸೇವಾ ಅವಧಿಯಲ್ಲಿ ಮಾಡಿದ ಒಳ್ಳೆಯ ಕಾರ್ಯಗಳಿಂದ ಅವರು ಜನರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದು ಗೌರವಯುತ ಜೀವನ ಸಾಗಿಸುತ್ತಾರೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತ ವಿ.ಎಸ್. ಆನಿಕಿವಿ ಅವರ ಸೇವಾನಿವೃತ್ತಿ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಜನತೆಯ ಪ್ರಮುಖ ಕಾರ್ಯಗಳಾದ ರಸೆ, ಸೇತುವೆ ನಿರ್ವಹಣೆಯ ಪ್ರಮುಖ ಇಲಾಖೆಯಾಗಿರುವ ಪಿಡಬ್ಲುಡಿಯಲ್ಲಿ ಆನಿಕಿವಿ ಅವರು ತಮ್ಮ 34 ವರ್ಷಗಳ ಕಾಲದ ಸುಧೀರ್ ಸೇವಾ ಅವಧಿಯಲ್ಲಿ ನೆರೆ ಹಾವಳಿ, ಕರೊನಾ ಸೇರಿ ಎಲ್ಲ ಸಂದರ್ಭದಲ್ಲೂ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕಾರ್ಯ ನಿರ್ವಹಿಸಿದ್ದಾರೆ. ಅವರ ಮಾರ್ಗದರ್ಶನ ಇಲಾಖೆಗೆ ಸದಾ ಇರಲಿ ಎಂದರು.
ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ ಮಾತನಾಡಿ, ಆತ್ಮಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಧ್ಯಾತ್ಮಿಕ ಜೀವನ ಸಾಗಿಸಿದ ಆನಿಕಿವಿ ಅವರ ಕರ್ತವ್ಯ ನಿಷ್ಠೆ ಅಪಾರವಾಗಿತ್ತು. ಅವರ ಸೇವೆ ಇತರ ನೌಕರರಿಗೂ ಪ್ರೇರಣೆಯಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ.ಎಸ್.ಆನಿಕಿವಿ, ಆತ್ಮಾನಂದ ಗುರುವಿನ ಆಶೀರ್ವಾದದ ಬಲದಿಂದ ಜನತೆಗೆ ಉತ್ತಮ ಸೇವೆ ಸಲ್ಲಿಸಿದ ಆತ್ಮ ತೃಪ್ತಿ ಹೊಂದಿದ್ದೇನೆ. ನಿವೃತ್ತಿ ಜೀವನದಲ್ಲೂ ಇಲಾಖೆಗೆ ಮಾರ್ಗದರ್ಶನ ನೀಡುತ್ತ ಸಮಾಜಮುಖಿ ಕೆಲಸಗಳಲಿ ತೊಡಗುವೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಮಹಾಂತೇಶ ತುರಮರಿ, ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಕಸಾಪ ತಾಲೂಕಾ ಟಕದ ಮಾಜಿ ಅಧ್ಯಕ್ಷ ಈಶ್ವರ ಹೋಟಿ, ಬಿ.ಬಿ.ಗಣಾಚಾರಿ, ಪ್ರವಿಣ ಹುಳಜೆ, ಜಿಲ್ಲಾ ಲೋಕೋಪಯೋಗಿ ಇಲಾಖೆ ಅಭಿಯಂತ ಎಸ್.ಎಸ್. ಸೊಬರದ, ಆರ್.ಬಿ.ಹೆಡಗೆ, ಶಿವಾನಂದ ಆನಿಕಿವಿ ಮಾತನಾಡಿದರು. ಭಾರತಿ ಆನಿಕಿವಿ ಇದ್ದರು. ಪ್ರಕಾಶ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಭಾರತಿ ಹಾಗೂ ವೀರಣ್ಣ ಆನಿಕಿವಿ ದಂಪತಿಯನ್ನು ಸನ್ಮಾನಿಸಲಾಯಿತು. ಬಸವರಾಜ ಪುರಾಣಿಕಮಠ ನಿರೂಪಿಸಿದರು. ಮಹಾಂತೇಶ ಮತ್ತಿಕೊಪ್ಪ ವಂದಿಸಿದರು.