

ಚಿತ್ರದುರ್ಗ: ಉತ್ತಮದ ಆಹಾರ ಸೇವನೆ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕೆಂದು ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾ ಧಿಕಾರಿ ಡಾ.ಅಕ್ಷತಾ ಹೇಳಿದರು.
ಆರೋಗ್ಯಇಲಾಖೆ,ಎಸ್‌ಆರ್‌ಎಸ್ ಆಸ್ಕರ್ ಹಿರಿಯ ಪ್ರಾಥಮಿಕ ಶಾಲೆ ಚಿತ್ರದುರ್ಗ ತಾಲೂಕು ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಉತ್ತಮ ಆಹಾರ ಸೇವನೆ ಹೃದ್ರೋ ಗ,ಮಧುಮೇಹ,ಕ್ಯಾನ್ಸರ್‌ನಂತಹ ದೀರ್ಘಕಾಲದ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ,ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿದರು. ಆ ರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೃಷ್ಣಪ್ಪ,ಸಿದ್ದೇಶ್,ಪ್ರಸನ್ನ,ಗಂಗಾಧರ,ಆರೋಗ್ಯ ಸುರಕ್ಷತಾಧಿಕಾರಿಗಳಾದ ಮಮತಾ, ಆಶಾ, ಶಾರದ ಬಾ ಯಿ,ಎಸ್‌ಆರ್‌ಎಸ್ ಆಸ್ಕರ್ ಹಿರಿಯ ಪ್ರಾಥಮಿಕ ಶಾಲೆ ಸಂಯೋಜಕಿ ಶೈಲಾ, ಶಿಕ್ಷಕಿಯರಾದ ಶಾಂಭವಿ,ಅನುರಾಧ ಮತ್ತು ಮಧು ಇದ್ದ ರು.