

ಕಲಬುರಗಿ: ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ವಿಂಗಡಣೆಗೆ ಸುಪ್ರೀಂ ಕೋರ್ಟ್ ಆದೇಶಿಸಿರುವ ತೀರ್ಪು ನೆಪವಾಗಿ ಅಸಂವಿಧಾನಿಕ, ಅಸಮಂಜಸವಾದ ಒಳಮೀಸಲಾತಿ ವಿಂಗಡಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನೀತಿ ಖಂಡಿಸಿ ಬೆಳಗಾವಿಯ ಸುವರ್ಣ ಸೌಧದ ಬಳಿ ಡಿ.೧೭ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಬಂಜಾರ, ಭೋವಿ, ಕೊರಚ, ಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಒಡೆಯರಾಜ ತಿಳಿಸಿದರು. ಸೂಕ್ತ ಗಣತಿ, ದತ್ತಾಂಶಗಳು ಇಲ್ಲದೆ ಮೀಸಲು ನೀಡುತ್ತಿರುವುದು ಸರಿಯಲ್ಲ. ೨೦೧೧ರ ಜನಗಣತಿ ಆಧಾರದಲ್ಲಿ ಒಳಮೀಸಲು ನೀಡುತ್ತಿರುವುದು ಒಪ್ಪಲ್ಲ. ಕಾಟಾಚಾರಕ್ಕೆ ವರ್ಗೀಕರಣ ಮಾಡಿದರೆ ನಮ್ಮ ಸಮಾಜಗಳಿಗೆ ಅನ್ಯಾಯವಾಗಲಿದೆ. ಇದನ್ನು ಖಂಡಿಸಿ, ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಲು ಆಗ್ರಹಿಸಿ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. . ಸಮಾಜದವರು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು ಎಂದು ತಿಳಿಸಿದರು. ಅಧ್ಯಕ್ಷ ಶಾಮರಾವ ಪವಾರ, ವಿನೋದ ಚವ್ಹಾಣ್, ಖೇಮಸಿಂಗ್ ರಾಠೋಡ್, ಚಂದು ಜಾಧವ್, ಲಕ್ಷö್ಮಣ ರಾಠೋಡ್, ಗುಂಡಪ್ಪ ಸಾಳುಂಕೆ, ಹರಿ ಜಾಧವ್ ಇತರರಿದ್ದರು.