ಒಳಮೀಸಲು ರದ್ದುಪಡಿಸಲು ಒತ್ತಾಯ

PH 02
Published on

ಕಲಬುರಗಿ: ಪರಿಶಿಷ್ಟ ಜಾತಿಯೊಳಗಿನ ಒಳಮೀಸಲು ರದ್ದುಪಡಿಸುವಂತೆ ಆಗ್ರಹಿಸಿ ಬಂಜಾರ ಸಮುದಾಯದ ಕಾರ್ಯಕರ್ತರು, ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಬಂಜಾರಾ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ಶೇ.4.5 ಮೀಸಲಾತಿ ನೀಡಿರುವುದು ಅವೈಜ್ಞಾನಿಕವಾಗಿದ್ದು, ಸಮುದಾಯಗಳಿಗೆ ಮಾಡಿದ ದ್ರೋಹವಾಗಿದೆ. ಯಾವುದೇ ಕಾರಣಕ್ಕೂ ಒಳಮೀಸಲಾತಿ ಒಪ್ಪುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಭಾರತದ ಸಂವಿಧಾನದಲ್ಲಿ ಅವಕಾಶವಿಲ್ಲದ ಮತ್ತು ಸುಪ್ರೀಂಕೋರ್ಟ್ ತೀರ್ಪುಗೆ ವಿರುದ್ಧವಾಗಿ ಎಸ್ಸಿ ನಾಲ್ಕು ಗುಂಪುಗಳಾಗಿ ವರ್ಗಿಕರಿಸಿ, ಒಳಮೀಸಲು ಹಂಚಿಕೆ ಮಾಡಲಾಗಿದೆ. ಈ ಸಮುದಾಯದ ಹಿಂದುಳಿಯುವಿಕೆ, ಜನಸಂಖ್ಯೆ ಪರಿಗಣಿಸದೆ ಶೇ.4.5 ಪ್ರಮಾಣದ ಮೀಸಲು ಹಂಚಿಕೆ ಮಾಡಿರುವುದು ಸರಿಯಲ್ಲ. ಇದನ್ನು ರದ್ದುಪಡಿಸಬೇಕು. ಇಲ್ಲದಿದ್ದಲ್ಲಿ ಸಂವಿಧಾನಿಕ ಹಕ್ಕು ಬಳಕೆ ಮಾಡಿಕೊಂಡು ವಿಧಾನಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಗರದ ಬಂಜಾರ ಭವನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೂ ನಡೆಯಿತು. ದಾರಿಯುದ್ದಕ್ಕೂ ರಾಜ್ಯ ಸಕರ್ಾರ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಜಿಲ್ಲಾಧಿಕಾರಿ ಕಚೇರಿ ಶಿಷ್ಠಾಚಾರ ತಹಸೀಲ್ದಾರ್ ನಿಸಾರ್ ಅಹ್ಮದ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಬಂಜಾರಾ ಶಕ್ತಿ ಪೀಠದ ಶ್ರೀ ಬಳಿರಾಮ ಮಹಾರಾಜ, ಮುಗಳನಾಗಾಂವದ ಶ್ರೀ ಜೇಮಸಿಂಗ್ ಮಹಾರಾಜ, ಚೌಡಾಪುರದ ಶ್ರೀ ಮುರಹರಿ ಮಹಾರಾಜ, ಶಾಮ ಪವಾರ್, ವಿನೋದ ಚವ್ಹಾಣ್, ಚಂದು ಜಾಧವ್, ಬಿ.ಬಿ.ನಾಯಕ, ಶ್ರೀಧರ್ ಚವ್ಹಾಣ್, ನಾರಾಯಣ ಪವಾರ್, ಜಗದೀಶ ಚವ್ಹಾಣ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net