ಒಳಮೀಸಲು ತರಾತುರಿ ಜಾರಿ ಸಲ್ಲದು

oppo_2
oppo_2
Published on

ಕಲಬುರಗಿ: ಸುಪ್ರೀಂ ಕೋರ್ಟ್ ನೀಡಿರುವ ಒಳಮೀಸಲು ಕುರಿತ ತೀರ್ಪಿನಂತೆ ರಾಜ್ಯ ಸರ್ಕಾರವೂ ತರಾತುರಿಯಲ್ಲಿ ಒಳಮೀಸಲು ಜಾರಿ ಮಾಡುವ ಮುನ್ನ ಮುಂದಾಲೋಚನೆ ಮಾಡಬೇಕು, ಜಾತಿಗಳ ಸಮೀಕ್ಷೆ ನಡೆಸಿ ಪರಿಶಿಷ್ಟ ಜಾತಿಗಳ ವರ್ಗೀಕರಣ ಪರಿಶೀಲನೆ ನಡೆಸಬೇಕು ಎಂದು ಹಿರಿಯ ದಲಿತ ಮುಖಂಡ ವಿಠಲ್ ದೊಡ್ಮನಿ ಆಗ್ರಹಿಸಿದರು.

ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳಮೀಸಲು ಅನುಷ್ಠಾನ ಸ್ವಾಗತಾರ್ಹ. ಆದರೆ ಜಾತಿಗಳ ಮರುವಿಂಗಡಣೆ, ಉಪ ಜಾತಿಗಳಲ್ಲಿನ ಗೊಂದಲ ಬಗೆಹರಿಸಿ ನಂತರ ಒಳಮೀಸಲು ಜಾರಿ ಮಾಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ದಕ್ಷಿಣ ಕರ್ನಾಟಕದಲ್ಲಿ ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಎಂಬ ಸಮುದಾಯ ಪರಿಶಿಷ್ಟರ ಎಡಗೈ ಮತ್ತು ಬಲಗೈ ಸಮುದಾಯಗಳಲ್ಲಿ ಗುರುತಿಸಿಕೊಳ್ಳುತ್ತವೆ. ಈ ಸಮುದಾಯಗಳು ಯಾವ ಪಂಗಡಕ್ಕೆ ಸೇರುತ್ತವೆ ಎಂಬುದು ಸೂಕ್ತ ದಾಖಲೆ ಪಡೆಯಬೇಕು. ಗಣತಿ ನಡೆಸಿ, ಮೀಸಲು ವರ್ಗೀಕರಣ ಮಾಡಬೇಕು ಎಂದು ಆಗ್ರಹಿಸಿದರು.

ಜಾತಿ ಜನಗಣತಿ ಪುನಃ ಆಗಬೇಕು. ಅ.೨೮ರಂದು ನಡೆಯುವ ಸಚಿವ ಸಂಪುಟದಲ್ಲಿ ಯಾವುದೇ ಕಾರಣಕ್ಕೂ ಒಳಮೀಸಲು ಜಾರಿಯ ನಿರ್ಣಯ ಕೈಗೊಳ್ಳಬಾರದು. ತರಾತುರಿಯ ನಿರ್ಣಯ ಕೈಗೊಂಡರೆ ರಾಜ್ಯಾದ್ಯಂತ ಉಗ್ರ ಹೋರಾಟದ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಛಲವಾದಿ ಸಮುದಾಯದ ಜಿ¯್ಲÁ ಮುಖಂಡ ಎ.ಬಿ.ಹೊಸಮನಿ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿನ ಉಪ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗದ ಬಗ್ಗೆ ಖಚಿತ ಅಂಕಿ-ಅAಶ ಒಳಗೊಂಡ ವರದಿ ಆಧರಿಸಿ ವರ್ಗೀಕರಣ ಮಾಡಬೇಕು, ಪೂರ್ಣ ಅಂಕಿ ಅಂಶ ಒಳಗೊಂಡಿರಬೇಕು, ಅನುಕೂಲ ಸಿಂಧು ರಾಜಕೀಯಕ್ಕಾಗಿ ಮನಸ್ಸಿಗೆ ಬಂದAತೆ ಜಾರಿ ಮಾಡಬಾರದು, ಪರಿಶಿಷ್ಟರಲ್ಲಿನ ಭಿನ್ನತೆ, ವೈವಿಧ್ಯತೆ ಪರಿಗಣಿಸಬೇಕು ಎಂದು ಆಗ್ರಹಿಸಿರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net