

ಕಲಬುರಗಿ: ಮೂರುವರೆ ದಶಕದಿಂದ ಹೋರಾಟ ನಡೆಸಿದರೂ ರಾಜ್ಯದಲ್ಲಿ ಮಾದಿಗರಿಗೆ ಒಳ ಮೀಸಲಾತಿ ನೀಡುತ್ತಿಲ್ಲ. ಪ್ರಸ್ತುತ ಸಿಎಂ ಸಿದ್ದರಾಮಯ್ಯ ಮಾದಿಗರಲ್ಲಿ ಗೊಂದಲ ಸೃಷ್ಟಿಸುತ್ತ ವಿಳಂಬ ನೀತಿ ಅನುಸರಿಸುತ್ತಿದ್ದು, ಅದನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆ.೧ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ, ಮಾದಿಗ ಸಮಾಜದ ಮುಖಂಡ ಎ.ನಾರಾಯಣಸ್ವಾಮಿ ತಿಳಿಸಿದರು.
ಆ.೧೦ರ ಗಡುವು ನೀಡಲಿದ್ದು, ಅದುವರೆಗೆ ಬೇಡಿಕೆ ಈಡೇರಿಸದಿದ್ದರೆ ರಾಜ್ಯ ರ‍್ಕಾರದ ವಿರುದ್ಧ ಅಸಹಕಾರ ಚಳುವಳಿ ಹಮ್ಮಿಕೊಂಡು, ರಾಜ್ಯ ರ‍್ಕಾರದ ಪ್ರತಿನಿಧಿಗಳಿಗೆ ದಿಗ್ಬಂಧನ ಹಾಕಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಮುನ್ನ ಎಐಸಿಸಿ ಅಧ್ಯಕ್ಷರ ಸಮ್ಮುಖದಲ್ಲೇ ಒಳಮೀಸಲಾತಿ ನೀಡುವ ಭರವಸೆ ನೀಡಿದ್ದರು. ಆದರೆ ಇದೀಗ ದಿನದೂಡುತ್ತ ಕಾಲಹರಣ ಮಾಡಿ, ಮೋಸ ಮಾಡುತ್ತಿದ್ದಾರೆ. ದೇಶದಲ್ಲಿ ಒಳ ಮೀಸಲಾತಿ ಹೊಸದೇನು ಅಲ್ಲ. ೧೯೭೫ರಲ್ಲಿ ಪಂಜಾಬ್ ಮುಜ್ಬಿ ಸಿಖ್ಖರು, ವಾಲ್ಮಿಕಿ ಸಮುದಾಯಕ್ಕೆ ಒಳಮೀಸಲು ನೀಡಲಾಗಿತ್ತು. ೧೯೯೮ರಲ್ಲಿ ಆಂಧ್ರಪ್ರದೇಶದಲ್ಲಿ ಒಳಮೀಸಲು ಜಾರಿ ಆಗಿತ್ತು ಎಂದು ಹೇಳಿದರು.
ಆಂಧ್ರಪ್ರದೇಶದಲ್ಲಿ ಓಳಮೀಸಲು ನೀಡಿದ್ದಾಗ ಉದ್ಯೋಗ, ಚುನಾವಣೆ, ಸ್ಥಳಿಯ ಸಂಸ್ಥೆ, ಶಿಕ್ಷಣ ಸೇರಿ ವಿವಿಧ ಹಂತದಲ್ಲಿ ಅನುಕೂಲವಾಗಿತ್ತು. ಆದರೆ ಇ.ವಿ.ಚೆನ್ನಯ್ಯ ಎನ್ನುವರು ಕರ್ಟ್ಗೆ ಹೋದಾಗ ಒಳಮೀಸಲಿಗೆ ತದ್ವಿರುದ್ಧ ತರ‍್ಪು ಬಂದಿತ್ತು. ಇದರಿಂದ ಕೋಟ್ಯಂತರ ಮಾದಿಗರು, ಪಂಜಾಬ್ ಮುಜ್ಬಿ ಸಿಖ್ಖರು, ವಾಲ್ಮೀಕಿ ಸಮುದಾಯದವರಿಗೆ ಅನ್ಯಾಯವಾಯಿತು. ಇದರ ವಿರುದ್ಧ ಯಾವುದೇ ರ‍್ಕಾರಗಳು ರಿಟ್ ಪಿಟಿಷನ್ ಹಾಕದೇ ಸಮಾಜಕ್ಕೆ ಅನ್ಯಾಯ ಮಾಡಿದ್ದವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾ.ಚಂದ್ರಚೂಡ್ ಅವರು ೩೪೧ ತಿದ್ದುಪಡಿ ಅವಶ್ಯಕತೆ ಇಲ್ಲ. ಆಯಾ ರಾಜ್ಯಗಳಿಗೆ ಒಳಮೀಸಲು ನೀಡುವ ಅಧಿಕಾರವಿದೆ ಎಂದು ಸ್ಪಷ್ಟ ಆದೇಶ ಬಂದರೂ ಸಮಾಜ ಕಲ್ಯಾಣ ಇಲಾಖೆ ಸಚಿವರು ಮರ‍್ಖನ ರೀತಿ ರ‍್ತನೆ ಮಾಡಿದರು. ಆದ್ದರಿಂದ ಸಮಾಜಕ್ಕೆ ನ್ಯಾಯ ಕೊಡುವ ಭರವಸೆ ಇಲ್ಲ. ಆದ್ದರಿಂದ ಹೋರಾಟ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
೧೯೯೪ರಲ್ಲಿ ದೇಶದ ಯೋಜನಾ ಆಯೋಗ ಜನಸಂಖ್ಯೆ ಆಧಾರದಲ್ಲಿ ಯೋಜನೆ ರೂಪಿಸಿ ಎಂದಿತ್ತು. ಅದರಂತೆ ಎಸ್ಸಿ ಎಸ್ಟಿ ಶೇ.೧೭+೭ ಸೇರಿ ಶೇ.೨೪ ಮೀಸಲು ಆಗುತ್ತದೆ. ಈಗಾಗಲೇ ಶೇ.೧೭ ಒಳಮೀಸಲು ಜಾರಿಯಲ್ಲಿದೆ. ಬಿಜೆಪಿ ರ‍್ಕಾರ ನ್ಯಾ.ಸದಾಶಿವ ಆಯೋಗಕ್ಕೆ ಅನುದಾನ ನೀಡಿತ್ತು, ಕೇಂದ್ರ ರ‍್ಕಾರ ನಿರಂತರ ಸಹಕಾರ ನೀಡುತ್ತಿದೆ ಎಂದು ಹೇಳಿದರು.
ಶಾಸಕ ಬಸವರಾಜ ಮತ್ತಿಮಡು, ಉಮೇಶ ಕಾರಜೋಳ, ದೇವಿಂದ್ರ ಖನ್ನಾ, ರಾಜು ವಾಡೇಕರ್, ಪರಮೇಶ, ವಿಜಯಕುಮಾರ ಆಡಕಿ, ದಶರಥ ಕಲಗರ‍್ತಿ, ರಂಜಿತ್ ಮೂಲಿಮನಿ, ಮಂಜುನಾಥ ನಾಲವಾರ್, ಗಣೇಶ ಕಟ್ಟಿಮನಿ ಇತರರಿದ್ದರು.
ಖರ್ಗೆ ವಿರೋಧ: ದಕ್ಷಿಣ ಭಾರತದಲ್ಲಿ ಒಳಮೀಸಲಾತಿಗೆ ಹೋರಾಡಿದವರು ಮಾದಿಗ ಉಪಜಾತಿಯವರು ಮಾತ್ರ. ಸಚಿವ ಮದೇವಪ್ಪ, ಪರಮೇಶ್ವರ, ರ‍್ಖಗೆ ಒಳಗೊಂಡು ಯಾರೂ ಹೋರಾಟ ಮಾಡಲಿಲ್ಲ. ಸುಪ್ರೀಂ ಕರ‍್ಟ್ ಒಳಮೀಸಲು ತರ‍್ಪು ಬಂದ ನಾಲ್ಕನೇ ದಿನಕ್ಕೆ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕರ‍್ಜುನ ರ‍್ಖಗೆ ದೇಶದ ಎಲ್ಲ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ಸಭೆ ಕರೆದಿದ್ದರು. ಯಾರ ಅನುಮತಿ ಪಡೆದು ನೀನು ಒಳಮೀಸಲು ನೀಡಿದೆ ಎಂದು ರೇವಂತರೆಡ್ಡಿಗೆ ಪ್ರಶ್ನಿಸಿದ್ದರು. ಕೇಂದ್ರ ತರ‍್ಮಾನ ಮಾಡುವವರೆಗೆ ಒಳಮೀಸಲಾತಿ ಬಗ್ಗೆ ಯಾರೂ ಮಾತನಾಡಬಾರದು ಎಂದು ರ‍್ಖಗೆ ಸೂಚನೆ ನೀಡಿದ್ದರು ಎಂದು ಪರೋಕ್ಷವಾಗಿ ಎಐಸಿಸಿ ಅಧ್ಯಕ್ಷ ರ‍್ಖಗೆ ವಿರುದ್ಧ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.