

ಚಿತ್ರದುರ್ಗ: ಒಳ ಮೀಸಲಾತಿ ಜಾರಿ ಮೇಲ್ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ನಂತರದ ಮುಂದಿನ ನಡೆ ಕುರಿತು ಚಿತ್ರದುರ್ಗದ ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ಚರ್ಚಿಸಲಾಯಿತು. ಸರ್ಕಾರ ತ್ವರಿತವಾಗಿ ಜಾರಿಗೊಳಿಸಲು ಒತ್ತಾಯಿಸಿ ದುರ್ಗದಿಂದಲೇ ಹೋರಾಟ ಆರಂಭಿಸಲು ಅಭಿಪ್ರಾಯಗಳು ವ್ಯಕ್ತವಾದವು.
ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ಡಿಎಸ್‌ಎಸ್ ರಾಜ್ಯ ಸಂಚಾಲಕ ರಾಜಣ್ಣ, ಪ್ರಧಾನ ಕಾರ್ಯದರ್ಶಿ ರವಿ, ಚಳ್ಳಕೆರೆ ಬಿಎಸ್‌ಐ ಅಧ್ಯಕ್ಷ ನನ್ನಿವಾಳ ರವಿ, ಉಪನ್ಯಾಸಕ ಈ.ನಾಗೇಂದ್ರಪ್ಪ, ರೇವಣ್ಣ, ಹಿಂದೂಧರ ಗೌತಮ್, ಬೆಸ್ಕಾಂ ತಿಪ್ಪೇಸ್ವಾಮಿ, ರಮೇಶ್ ಬನ್ನಿಕೋಡ್, ಶಿಕ್ಷಕಿ ಗಿರಿಜಾ, ಶಾಂತಾ, ಶಕುಂತಲಾ, ಉಷಾ, ರೈಲ್ವೆ ನಿವೃತ್ತ ಮುಖ್ಯ ಇಂಜಿನಿಯರ್ ರಂಗಸ್ವಾಮಿ ಇತರರಿದ್ದರು.