ಒಳಮೀಸಲಾತಿಗಾಗಿ ಜನಜಾಗೃತಿ ರಥ ಯಾತ್ರೆ

11kkr2(4-25 ola misalati
ಕಿಕ್ಕೇರಿಗೆ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿಯು ಹಮ್ಮಿಕೊಂಡಿರುವ ಜನ ಜಾಗೃತಿ ರಥ ಯಾತ್ರೆ ಶುಕ್ರವಾರ ಸಂಜೆ ಆಗಮಿಸಿದ ವೇಳೆ ಸಮುದಾಯದವರು ಸಂಭ್ರಮದಿಂದ ಬರಮಾಡಿಕೊಂಡರು. ಭಾಸ್ಕರ್ ಪ್ರಸಾದ್, ಕೃಷ್ಣಯ್ಯ, ಹನುಮಯ್ಯ, ನಂಜಯ್ಯ, ಕಿಟ್ಟಯ್ಯ, ಕಿಟ್ಟಯ್ಯ ಮತ್ತಿತರರಿದ್ದರು.
Published on

ಕಿಕ್ಕೇರಿ: ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನೀಡಲು ರಾಜ್ಯಾದ್ಯಂತ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಕ್ರಾಂತಿಕಾರಿ ಪಾದಯಾತ್ರೆ ಹೋರಾಟದ ಮುಖಂಡ ಬಿ.ಆರ್. ಭಾಸ್ಕರ್ ಪ್ರಸಾದ್ ತಿಳಿಸಿದರು.

ಕಿಕ್ಕೇರಿ ಹಾಗೂ ಗಂಗೇನಹಳ್ಳಿ ಗ್ರಾಮಕ್ಕೆ ಗುರುವಾರ ಸಂಜೆ ಆಗಮಿಸಿದ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಜನಜಾಗೃತಿ ರಥಯಾತ್ರೆಯಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿತು. ಈಗ ಸದಾಶಿವ ಆಯೋಗದ ಕುಂಟು ನೆಪ ಹೇಳಿಕೊಂಡು ನುಣುಚಿಕೊಳ್ಳಲು ಯತ್ನಿಸುತ್ತಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲ ಪಕ್ಷಗಳು ತಮ್ಮ ಸಮುದಾಯಕ್ಕೆ ಒಳಮೀಸಲಾತಿಯಲ್ಲಿ ಮೋಸ ಮಾಡಿವೆ ಎಂದು ದೂರಿದರು.

ಒಳಮೀಸಲಾತಿಗೆ ರಚನೆಗೆ ಸುಪ್ರೀಂ ಕೋರ್ಟ್ ಆದೇಶ ವಿದ್ದರೂ ಮೀಸಲಾತಿ ಜಾರಿ ಮಾಡದೆ ಸರ್ಕಾರಗಳು ಮೌನವಾಗಿವೆ. ಸಮುದಾಯದವರು ಒಳಮೀಸಲಾತಿಗೆ ಜಾಗೃತರಾಗಲು ಈ ರಥಯಾತ್ರೆ, ಪಾದಯಾತ್ರೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜೂ. 9ರಂದು ಸಮುದಾಯದ ಎಲ್ಲರೂ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಸಮುದಾಯದ ನೋವು ತಿಳಿಸೋಣ ಎಂದು ಮನವಿ ಮಾಡಿದರು. ಮುಖಂಡರಾದ ಕೃಷ್ಣಯ್ಯ, ಹನುಮಯ್ಯ, ರಮೇಶ, ನಂಜಯ್ಯ, ಕಿಟ್ಟಯ್ಯ, ಪರಮೇಶ್, ಕುಮಾರಸ್ವಾಮಿ, ಸುಂದರ, ಶರತ್, ನಂಜುಂಡ, ರಂಗಸ್ವಾಮಿ, ಜಯರಾಂ, ರಾಮು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net