

ಮೈಸೂರು:
ಒಳಮೀಸಲಾತಿ ಜಾರಿ ವಾಡಿ ನಂತರ ಹೊಸ ನೇಮಕಾತಿ, ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸಾವಾಜಿಕ ನ್ಯಾಯಪರ ವಕೀಲರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಸುಪ್ರೀಂ ಕೋರ್ಟ್ ತೀರ್ಪಿನಂತೆ ಪರಿಶಿಷ್ಟ ಜಾತಿಯವರಿಗೆ ನೀಡುವ ಒಳ ಮೀಸಲಾತಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿಯೂ ಇಲ್ಲ. ಭಾರತೀಂು ಸಂವಿಧಾನದ ಆರ್ಟಿಕಲ್ 341ರ ಉಲ್ಲಂಘನೆಯೂ ಆಗುವುದಿಲ್ಲ.
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯೊಳಗಿನ ಪ್ರಾಯೋಗಿಕ ದತ್ತಾಂಶಗಳನ್ನು ಸಂಗ್ರಹಿಸಲು 2005ರಲ್ಲಿ ನಿವೃತ್ತ ನ್ಯಾ.ಎ.ಜೆ.ಸದಾಶಿವ ನೇತೃತ್ವದಲ್ಲಿ ಆಯೋಗ ರಚಿಸಿತು. ಸಮಗ್ರ ಸಮೀಕ್ಷೆ ನಡೆಸಿ, ಎಲ್ಲ ಆಯಾಮಗಳನ್ನೂ ಪರಾಮರ್ಶಿಸಿ, ರಾಜ್ಯದ ಸರ್ಕಾರಿ ಇಲಾಖೆಗಳಿಂದ ವಾಹಿತಿ ಪಡೆದು ಪರಿಶಿಷ್ಟ ಜಾತಿಯೊಳಗಿನ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ವಿವರ ಸಂಗ್ರಹಿಸಿತು ಎಂದು ಪ್ರತಿಭಟನಾಕಾರರು ಹೇಳಿದರು.
2012ರಲ್ಲಿ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿತು. ಈ ವರದಿಯನ್ನು ಬಿಜೆಪಿ ಸರ್ಕಾರ 2023ರಲ್ಲಿ, ಕಾಂಗ್ರೆಸ್ ಸರ್ಕಾರ 2024ರಲ್ಲಿ ಅಂಗೀಕರಿಸುವ ಮೂಲಕ ಸದರಿ ವರದಿ ಅನುಷ್ಠಾನಗೊಳಿಸುವಲ್ಲಿ ತಮಗೆ ಯಾವುದೇ ಅಭ್ಯಂತರವಿಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ. ಒಳ ಮೀಸಲಾತಿ ಜಾರಿಯಾಗುವವರೆಗೂ ಂಾವುದೇ ಹುದ್ದೆಗಳ ನೇಮಕಾತಿ ಮತ್ತು ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ವಾಡುವುದಿಲ್ಲ ಎಂದು 2024ರ ಅ.28ರಂದು ನಡೆದ ಸಚಿವ ಸಂಪುಟದಲ್ಲಿ ತೀರ್ವಾನ ತೆಗೆದು ಕೊಂಡಿದೆ.
ಆದರೆ, ಈಗ ತರಾತುರಿಯಲ್ಲಿ ನೇಮಕಾತಿಗಾಗಿ 2024ರ ಆ.1ರ ಒಳ ಮೀಸಲಾತಿಯ ಸುಪ್ರೀಂಕೋರ್ಟ್ ತೀರ್ಪಿನ ನಂತರ ನಡೆದ ಸಚಿವ ಸಂಪುಟದ ದಿನಾಂಕದ ಹಿಂದೆಂೆುೀ ಅಧಿಸೂಚನೆ ಹೊರಡಿಸಿರುವಂತೆ ವಾಡಿ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಪ್ರಕ್ರಿಂೆು ನಡೆಸಲು ಹೊರಟಿರುವುದು ಖಂಡನೀಯ ಎಂದು ಕಿಡಿಕಾರಿದರು.
ಕೂಡಲೇ ಸರ್ಕಾರ ನಾಗಮೋಹನ್ ದಾಸ್, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಪರಿಗಣಿಸಿ ಅದರ ಅನ್ವಂು ಮಧ್ಯಂತರ ವರದಿ ಪಡೆದುಕೊಂಡು ತುರ್ತಾಗಿ ಒಳ ಮೀಸಲಾತಿ ಜಾರಿ ವಾಡಬೇಕು ಎಂದು ಒತ್ತಾಯಿಸಿದರು. ವೇದಿಕೆಯ ಅಧ್ಯಕ್ಷ ಎಸ್.ಅರುಣ್‌ಕುವಾರ್, ಉಪಾಧ್ಯಕ್ಷ ಎಂ.ದಾಸಂ್ಯು, ಶಿವಕುವಾರ್ ಎಂ.ಬೆಳ್ತೂರು ಸೇರಿದಂತೆ ಇತರರಿದ್ದರು.