

ಬಾಗಲಕೋಟೆ: ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಒಳಮೀಸಲಾತಿ ಜಾರಿ ಆಗುವುದನ್ನು ಪಕ್ಷ, ವ್ಯಕ್ತಿಗಳನ್ನು ಬಿಡಿ ಆ ಬ್ರಹ್ಮನಿಂದಲೂ ಇದನ್ನು ತಪ್ಪಿಸಲು ಸಾಧ್ಯವಾಗಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಒಳಮೀಸಲಾತಿ ಜಾರಿಗಾಗಿ ಸರ್ಕಾರ ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ನಿವೃತ್ತ ನ್ಯಾಯಾಽÃಶರನ್ನು ನೇಮಕ ಮಾಡಿದ ಹಿನ್ನಲೆಯಲ್ಲಿ ಬಾಗಲಕೋಟೆಯಲ್ಲಿ ಮಾದಿಗ ಸಮಾಜದ ಮುಖಂಡರಿಂದ ಸಚಿವ ಆರ್.ಬಿ.ತಿಮ್ಮಾಪುರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಹಿಂದೆ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಬಾಗಲಕೋಟೆಯಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದಿದ್ದವು. ಅದಕ್ಕೆ ಎಸ್.ಎಂ.ಕೃಷ್ಣಾ ಅವರು ಸಿಎಂ ಇದ್ದಾಗ ಸಮಾಜದ ಎಲ್ಲ ಮುಖಂಡರನ್ನು ಕರೆದು, ಒಂದು ಆಯೋಗ ರಚನೆ ಮಾಡಿ, ಅದು ವರದಿ ನೀಡಿದ ಬಳಿಕ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಇದಕ್ಕಾಗಿ ಆವತ್ತು ಸಾಕಷ್ಟು ಹೋರಾಟ ಮಾಡಿದ ಬಾಗಲಕೋಟೆ ಯುವಕರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ಅಲ್ಲಿಂದ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅದನ್ನು ಕ್ಯಾಬಿನೇಟ್ ಗೆ ತಂದರು. ಬಳಿಕ ಯಾವುದೇ ಸರ್ಕಾರಗಳು ಇದಕ್ಕೆ ಪೂರಕವಾಗಿ ಸ್ಪಂದಿಸಲಿಲ್ಲ. ಕೇಂದ್ರಕ್ಕೆ ಶಿಪಾರಸು ಮಾಡಿದ್ದೇವೆ ಎನ್ನುತ್ತಲೇ ಬಂದರು. ಇದೀಗ ಸುಪ್ರೀಂಕೋರ್ಟ್ ಒಳಮೀಸಲು ಜಾರಿಗೆ ರಾಜ್ಯ ಸರ್ಕಾರಕ್ಕೆ ಶಕ್ತಿ ನೀಡಿದೆ. ಅಲ್ಲದೇ ಕಾಂಗ್ರೆಸ್ ಪಕ್ಷ ಚುನಾವಣೆ ಪ್ರನಾಳಿಕೆಯಲ್ಲಿ ಇದನ್ನು ಹೇಳಿದ್ದೇವೆ. ಅದರಂತೆ ೩ ತಿಂಗಳು ಬಳಿಕ ಒಳಮೀಸಲಾತಿ ಜಾರಿಗೆ ತಂದೇ ತರುತ್ತೇವೆ ಎಂದು ಸಚಿವರು ಹೇಳಿದರು.
ಮಾದಿಗ ಸಮಾಜದ ಮುಖಂಡರಾದ ಫೀರಪ್ಪ ಮ್ಯಾಗೇರಿ, ಶಿವಾನಂದ ಮಾದರ, ಬಾಬು ಮಾದರ, ಅರ್ಜುನ ಯಂಕಂಚಿ, ಮುದಕಪ್ಪ ಮಾದರ, ಮೋಹನ ಬಳ್ಳಾರಿ, ಮುತ್ತಪ್ಪ ಛಬ್ಬಿ, ಸದು ಬೂದಿಹಾಳ, ವಿಠ್ಠಲ ಲೋಕಾಪುರ ಮತ್ತಿತರರು ಇದ್ದರು.