ಒಳಮಿಸಲಾತಿ ಜಾರಿಗೆ 15 ಗಡುವು

FotoJet
Published on

*ನ.12ರಂದು ಎಲ್ಲ ಶಾಸಕರ ಮನೆಗೆ ಮುತ್ತಿಗೆ ಹಾಕಲು ಎಐಬಿಎಸ್‌ಪಿ ತೀರ್ಮಾನ

ದೇವನಹಳ್ಳಿ : ಒಳಮೀಸಲಾತಿ ಜಾರಿಗೆ 15 ದಿನಗಡುವು ನೀಡಿದ್ದು, ಅಷ್ಟರೊಳಗೆ ಸರ್ಕಾರ ಸೂಕ್ತ ನಿರ್ಧಾಕ್ಕೆ ಬರದಿದ್ದರೆ ರಾಜ್ಯದ 224 ಕ್ಷೇತ್ರಗಳ ಶಾಸಕರ ಮನೆಗಳಿಗೆ ನ.12ರಂದು ಮುತ್ತಿಗೆ ಹಾಕಿ ೇರಾವ್ ಹಾಕಲಾಗುವುದು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜಾಧ್ಯಕ್ಷ ಮಾರಸಂದ್ರ ಮುನಿಪ್ಪ ಎಚ್ಚರಿಕೆ ನೀಡಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಏಳು ಗೌರವಾನ್ವಿತ ನ್ಯಾಯಮೂರ್ತಿಗನ್ನೊಳಗೊಂಡ ಪೀಠ ಆ.1ರಂದು ಐತಿಹಾಸಿಕ ತೀರ್ಪು ನೀಡಿ ವರ್ಗೀಕರಣ ಮಾಡಿ ಜನಸಂಖ್ಯೆ ಆಧರಿಸಿ ಒಳಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಇಂತಹ ಗಂಭೀರ ವಿಷಯ ಇದ್ದರೂ ಸಿದ್ದರಾಮಯ್ಯ ಸರ್ಕಾರ ಈ ಬಗ್ಗೆ ಗಮನಹರಿಸದೆ ಜಾಣ ನಿದ್ರೆಗೆ ಜಾರಿದೆ ಎಂದು ದೂರಿದರು.

ಎಸ್ಸಿ ಸಮುದಾಯದಲ್ಲಿ ನೂರೊಂದು ಉಪಜಾತಿಗಳಿದ್ದು, ಅದರಲ್ಲಿ ಹೆಚ್ಚಿನ ಶೋಷಣೆ ಅಸ್ಪೃಶ್ಯತೆಗೆ ಒಳಗಾಗಿರುವುದು ಮಾದಿಗ ಸಮುದಾಯ. ಇತರ ಜಾತಿಗಳು ಜನಸಂಖ್ಯೆ ಆಧಾರದಲ್ಲಿ ಅವರ ಮೀಸಲಾತಿ ಹಕ್ಕು ಪಡೆದುಕೊಳ್ಳಲು ಅರ್ಹವಾಗಿವೆ. ಇದನ್ನರಿತು ರಾಜ್ಯ ಸರ್ಕಾರ ಕಾಂತರಾಜು ಜಾತಿ ಗಣತಿಯ ವರದಿಯನ್ನು ಕೂಡಲೆ ಬಿಡುಗಡೆ ಮಾಡಿ ಅದರನ್ವಯ ಒಳಮಿಸಲಾತಿ ಜಾರಿ ಮಾಡಿದರೆ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಎಲ್ಲ ಜಾತಿಗಳಿಗೂ ಪ್ರಾತಿನಿಧ್ಯ ಸಿಗಲಿದೆ ಎಂದರು.

ಜಿಲ್ಲಾ ಅಧ್ಯಕ್ಷ ಪಿ.ಮಹಾದೇವ್, ಉಪಾಧ್ಯಕ್ಷ ನಾಗರಾಜ್, ಪ್ರಧಾನಕಾರ್ಯದರ್ಶಿ ಗೋಪಾಲ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಮಾದೇವಿ ಮುನಿಯಪ್ಪ, ಜಿಲ್ಲಾ ಕಚೇರಿ ನಿರ್ವಾಹಕ ಗೋವಿಂದರಾಜು, ಕಾರ್ಯದರ್ಶಿ ಚಿಕ್ಕರಾಜು ಖಜಾಂಚಿ ಹೇಮಾ ಮತ್ತಿತರರು ಇದ್ದರು.

ಮನೆಯಿಂದ ಹೊರಹಾಕಿದ ಮಾಯಾವತಿ

ಒಳ ಮೀಸಲಾತಿಗೆ ಸಂಬಂಧಿಸಿದ ಸುಪ್ರೀಂಕೊರ್ಟ್ ತೀರ್ಪನ್ನು ಪಕ್ಷದ ವರಿಷ್ಠೆ ಮಾಯಾವತಿ ಕೆಲವರ ಮಾತು ಕೇಳಿ ವಿರೋಧಿಸಿದರು. ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲು ಹಲವು ಬಾರಿ ಪ್ರಯತ್ನಿಸಿದೆವು. ಕೊನೆಗೆ ಮಾರಸಂದ್ರ ಮುನಿಯಪ್ಪ ಅವರ ಕೋರಿಕೆಯಂತೆ ದಿನಾಂಕ ನಿಗದಿ ಮಾಡಿ ಪಕ್ಷದ ಕೇಂದ್ರ ಕಚೇರಿ, ಮಾಯಾವತಿ ಅವರ ಮನೆಗೆ ಕರೆದು ಸಂಜೆವರೆಗೂ ಭೇಟಿ ಮಾಡಲು ಅವಕಾಶ ನೀಡದೇ, ನಮ್ಮನ್ನು ಹೊರಹಾಕಿದರು. ಇದರಿಂದ ನೊಂದು ರಾಜ್ಯ ಹಾಗೂ ಇತರ ರಾಜ್ಯದ ನಾಯಕರು ಬಿಎಸ್‌ಪಿ ತೊರೆದು ಎಐಬಿಎಸ್‌ಪಿ ಸ್ಥಾಪಿಬೇಕಾಯಿತು ಎಂದು ರಾಜ್ಯ ಕಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್ ಹೇಳಿದರು.

ಪದಾಧಿಕಾರಿಗಳ ನೇಮಕ

ಆಲ್ ಇಂಡಿಯಾ ಬಹುಜನಸಮಾಜ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಜಿಲ್ಲಾ ಸಂಯೋಜಕರಾಗಿ ಬಿ.ಎಲ್.ರಾಜಪ್ಪ, ಜಿಲ್ಲಾ ಅಧ್ಯಕ್ಷರಾಗಿ ಸಿ.ಮಹದೇವ, ಜಿಲ್ಲಾ ಉಪಾಧ್ಯಕ್ಷರಾಗಿ ನಾಗರಾಜು, ಪ್ರಧಾನಕಾರ್ಯದರ್ಶಿಯಾಗಿ ಗೋಪಾಲ್, ಜಿಲ್ಲಾಕಾರ್ಯದರ್ಶಿಗಳಾಗಿ ಹರಳೂರು ನರಸಿಂಹಯ್ಯ, ಹೊಸಕೊಟೆ ದೇವಪ್ಪ. ನೆಲಮಂಗಲ ಚಿಕ್ಕರಂಗಣ್ಣ, ದೊಡ್ಡಬಳ್ಳಾಪುರ ರಾಜಕುಮಾರ್, ಖಜಾಂಚಿಯಾಗಿ ಹೇಮಾ ಅವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಗಿದೆ ಎಂದು ಪಿ.ವೆಂಕಟೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net