ಒಳಪಂಗಡ ಬಿಟ್ಟು ವೀರಶೈವ ಲಿಂಗಾಯತರು ಒಂದಾಗಲಿ

29 ydg 05
Published on

ಯಾದಗಿರಿ: ವೀರಶೈವ ಲಿಂಗಾಯತರು ಒಳಪಂಗಡಗಳ ಭೇದ ಮರೆತು ಒಂದಾದಾಗಲೇ ರಾಜಕೀಯ ಶಕ್ತಿ ಕಾಪಾಡಿಕೊಳ್ಳಲು ಸಾಧ್ಯ ಎಂದು ಮಾಜಿ ಸಚಿವರಾದ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಉಪಾಧ್ಯP್ಷÀ ಅಮರೇಗೌಡ ಬಯ್ಯಾಪುರ ಹೇಳಿದರು.

ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಮಹಾಸಭಾ ಜಿ¯್ಲÁ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಕರ್ನಾಟಕ ವಿಧಾನಸಭೆಗೆ ನೂರಕ್ಕೂ ಹೆಚ್ಚು ವೀರಶೈವ ಲಿಂಗಾಯತ ಶಾಸಕರು ಆಯ್ಕೆಯಾಗುತ್ತಿದ್ದರು. ಆದರೀಗ ಒಳಪಂಗಡಗಳ ಹೆಸರಲ್ಲಿ ಛಿಧ್ರವಾಗಿದ್ದರಿಂದ ನಮ್ಮ ಸಂಖ್ಯೆ ಅರ್ಧಕ್ಕಿಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾವು ರಾಜಕೀಯ ಪ್ರಾಬಲ್ಯ ಮೆರೆದು ಸಂವಿಧಾನಾತ್ಮಕ ಸೌಲಭ್ಯ ಪಡೆಯಬೇಕಾದರೆ ಒಂದಾಗಲೇಬೇಕು. ಇಲ್ಲವಾದರೆ ಆಳುವ ಪP್ಷÀಗಳು ನಮ್ಮ ದನಿಗೆ ಬೆಂಬಲ ಕೊಡುವುದಿಲ್ಲ ಎಂದು ಎಚ್ಚರಿಸಿದರು.

ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ಮಾತನಾಡಿ, ಪ್ರತಿ ಜಿ¯್ಲೆಯಲ್ಲೂ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಸ್ಟೆಲï ಹಾಗೂ ವೀರಶೈವ ಲಿಂಗಾಯತ ಭವನ ನಿರ್ಮಿಸಬೇಕು ಎಂಬುದು ರಾಜ್ಯ ಘಟಕದ ಯೋಜನೆಯಾಗಿದ್ದು, ಸ್ಥಳೀಯ ಸಚಿವ-ಶಾಸಕರು ಸೂಕ್ತ ನಿವೇಶನ ಒದಗಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಸಮಾಜದ ಮುಖಂಡರಾದ ಮಹೇಶರಡ್ಡಿ ಮುದ್ನಾಳ್, ಶರಣಪ್ಪಗೌಡ ಕರೆಡ್ಡಿ ಮಲ್ಹಾರ, ಅಯ್ಯಣ್ಣ ಹುಂಡೇಕಾರ, ನ್ಯಾಯವಾದಿ ಎಸ್.ಬಿ. ಪಾಟೀಲ್, ಅವಿನಾಶ ಜಗನ್ನಾಥ, ಯುವ ಘಟಕದ ಜಿ¯್ಲÁಧ್ಯP್ಷÀ ಸುರೇಶ ಜಾಕಾ ಇದ್ದರು.

ಮಹಾಸಭಾ ಜಿ¯್ಲÁಧ್ಯP್ಷÀ ಚನ್ನಪ್ಪಗೌಡ ಮೋಸಂಬಿ ಅಧ್ಯP್ಷÀತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಜಿ¯್ಲÁ ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧರಾಜರೆಡ್ಡಿ ಪ್ರಾಸ್ತಾವಿಕ ಮಾತನಾಡಿ ವಂದಿಸಿದರು. ಅಭಿಯಾನಕ್ಕೆ ಚಾಲನೆ ನೀಡಿದ ಅಮರೇಗೌಡ ಬಯ್ಯಾಪುರ ಸಾಂಕೇತಿಕವಾಗಿ ಸಿದ್ಧಲಿಂಗರೆಡ್ಡಿ ಹಳಿಮನಿ ಮಲ್ಹಾರ ಹಾಗೂ ಶಾಂತರೆಡ್ಡಿ ದೇಸಾಯಿ ನಾಯ್ಕಲï ಅವರಿಗೆ ಸದಸ್ಯತ್ವ ರಸೀದಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net