ಒಳನುಸುಳುವಿಕೆ ಬಾಂಗ್ಲಾ ಅಕ್ರಮ ವಲಸಿಗರಿಗೆ ಸಲೀಸು

ctd sppp
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಬಡತನ, ನಿರುದ್ಯೋಗ, ಹೆಚ್ಚಿನ ಕೂಲಿಯಾಸೆಯಿಂದ ಬಾಂಗ್ಲಾದಿಂದ ಜಫ್ಲಾಂಗ್, ಅಸ್ಸಾಂ, ತ್ರಿಪುರಾ, ಮೇಘಾಲಯ ಮತ್ತಿತರ ಗಡಿ ಪ್ರದೇಶಗಳಿಂದ ಭಾರತಕ್ಕೆ ನುಸುಳುವುದು, ಬಾಂಗ್ಲಾ ಅಕ್ರಮ ವಲಸಿಗರಿಗೆ ಸಲೀಸಾಗಿದೆ.

ಪಾಸ್‌ಪೋರ್ಟ್ ಇಲ್ಲದಿದ್ದರೂ ಭಾರತಕ್ಕೆ ಅಕ್ರಮವಾಗಿ ಬರುವುದು, ತಮ್ಮ ದೇಶಕ್ಕೆ ಹಿಂತಿರುಗಿ ಹೋಗುವುದು, ಮತ್ತೆ ಬರುವುದು ಕೂಡ ಸುಲಭವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ 3 ವರ್ಷಗಳಿಂದ ಚಿತ್ರದುರ್ಗದಲ್ಲಿದ್ದ ಮೊಹಮ್ಮದ್ ಹುಸೇನ್ ಅಲಿ ಬಾಂಗ್ಲಾಕ್ಕೆ ಹಿಂತಿರುಗಿದ್ದು, 8 ತಿಂಗಳ ಹಿಂದೆ ಮತ್ತೆ ದುರ್ಗಕ್ಕೆ ಬಂದಿದ್ದಾನೆ.

ಚಿತ್ರದುರ್ಗ ಗಾರ್ಮೆಂಟ್‌ಗಳಲ್ಲಿ ಕೆಲಸದಲ್ಲಿದ್ದ ಅಕ್ರಮ ವಲಸಿಗರ ಬಳಿ ಕೊಲ್ಕೊತ್ತ, ಬೆಂಗಳೂರು ಮತ್ತಿತರ ಕಡೆಗಳ ದಾಖಲೆಗಳಿವೆ. ಇ ದನ್ನು ಗಮನಿಸಿದರೆ ದಾಖಲೆ ಒದಗಿಸುವ ರಾಕೆಟ್ ಅತ್ಯಂತ ಬಲಿಷ್ಠವಾಗಿದೆ ಎಂಬ ಆತಂಕಕಾರಿ ಅಂಶ ಬಯಲಾಗಿದೆ. ದುರ್ಗದ ಪೊಲೀ ಸರು ಮುಖ್ಯವಾಗಿ ಪಶ್ಚಿಮ ಬಂಗಾಳದ ದಾಖಲೆಗಳನ್ನು ಹೊಂದಿದ್ದ 20 ಜನರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ, ಆರು ಮಂದಿ ಬಾಂ ಗ್ಲಾದವರು ಎಂಬುದು ಸದ್ಯಕ್ಕೆ ಖಚಿತವಾಗಿದೆ.

ಇವರಂತೆ ದೇಶಕ್ಕೆ ಅಕ್ರಮವಾಗಿ ವಲಸೆ ಬಂದು ಬೆಂಗಳೂರಲ್ಲಿರುವ ಒಬ್ಬಾತ, ಹಣ ಪಡೆದು ಉದ್ಯೋಗ ಹಾಗೂ ಪೂರಕ ದಾಖಲೆ ಒದಗಿಸಲು ನೆರವಾಗಿದ್ದಾನೆ. ಭಾರತದ ಗಡಿಯೊಳಗೆ ನುಸುಳುತ್ತಿದ್ದಂತೆ ಕೋಲ್ಕೊತ್ತಾ ಸೇರುವ ಅಕ್ರಮ ವಲಸಿಗರು ಅಲ್ಲಿ ವಿದ್ಯಾಭ್ಯಾಸ ಪ್ರಮಾಣ ಪತ್ರ, ಪಾನ್‌ಕಾರ್ಡ್ ಇತರ ದಾಖಲೆಗಳೊಂದಿಗೆ ಮುಂಬೈ, ಬೆಂಗಳೂರು, ಚೆನ್ನೈ, ಕೊಯಂಬತ್ತೂರು, ತಿರುಪುರ ಗುಜರಾತ್ ಮೊದಲಾದ ಕಡೆಗಳಿಗೆ ಉದ್ಯೋಗ ಅರಸಿ ತೆರಳುತ್ತಿದ್ದಾರೆ. ನಾಗರಿಕತ್ವದ ಬಗ್ಗೆ ಕೊಂಚವೂ ಅನುಮಾನ ಬಾರದಂತೆ ದಾಖಲೆ ಒದಗಿಸುವವರು ಹಾಗೂ ಉದ್ಯೋಗ ಆಮಿಷದೊಂದಿಗೆ ಅಕ್ರಮವಾಗಿ ಕರೆತರುತ್ತಿರುವ ಜಾಲವನ್ನು ಭೇದಿಸಬೇಕಿದೆ.

ಚಿತ್ರದುರ್ಗ ಕೋಟೆ ಠಾಣೆ ವ್ಯಾಪ್ತಿಯಲ್ಲಿ ಸಿಕ್ಕಿಬಿದ್ದಿರುವ ಮೊಹಮ್ಮದ್ ಸುಮನ್ ಹುಸೇನ್ ಅಲಿ 2017ರಲ್ಲಿ ಅಸ್ಸಾಂ ಗಡಿಯಿಂದ ನು ಸುಳಿ, ತಿರುಪುರ, ದೊಡ್ಡಬಳ್ಳಾಪುರ ಗಾರ್ಮೆಂಟ್‌ಗಳ ಬಳಿಕ ಚಿತ್ರದುರ್ಗದ ಅರವಿಂದ್ ಗಾರ್ಮೆಂಟ್‌ನಲ್ಲಿದ್ದ. ಈತ ಬಾಂಗ್ಲಾಕ್ಕೂ ಹೋಗಿ ಮರಳಿದ್ದಾನೆ. ಇವನೊಂದಿಗಿದ್ದ ಶೇಖ್‌ಸೈಪುರ್ ರೋಹಮನ್ ಬೆಂಗಳೂರಿನ ವಿವಿಧ ಗಾರ್ಮೆಂಟ್‌ಗಳಲ್ಲಿದ್ದು, 20 ದಿನಗಳ ಹಿಂದೆ ದುರ್ಗಕ್ಕೆ ಬಂದಿದ್ದ.

ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿರುವ ನಾಲ್ವರು, ದುರ್ಗದ ವೈಟ್‌ವಾಷ್ ಗಾರ್ಮೆಂಟ್‌ನಲ್ಲಿದ್ದರು. 2018 ರಲ್ಲಿ ಬಂದು ಕಳೆದ ಐದು ವರ್ಷಗಳಿಂದ ದುರ್ಗದಲ್ಲಿರುವ ಸನಾವರ್ ಹುಸೇನ್ ಕನ್ನಡ ಕಲಿತಿದ್ದಾನೆ. 2 ವರ್ಷಗಳ ಹಿಂದೆ ಬಂದು ಗುಜರಾತ್‌ನಲ್ಲಿದ್ದ ಮಜಹರುಲ್ಲಾ 2 ದಿನಗಳ ಹಿಂದೆ ದುರ್ಗಕ್ಕೆ ಬಂದಿದ್ದ. ಅಜೀಜುಲ್ಲಾ ಶೇಕ್ ತ್ರಿಪುರಾ ಮೂಲಕ 4 ತಿಂಗಳ ದೇಶಕ್ಕೆ ನುಸುಳಿ ಈಚೆಗೆ ದುರ್ಗ ಕ್ಕೆ ಬಂದಿದ್ದರೆ, ಮೊಹಮ್ಮದ್ ಸಾಕೀಬ್ 2 ತಿಂಗಳ ಹಿಂದೆ ದುರ್ಗದಲ್ಲಿ ಕೆಲಸಕ್ಕೆ ಸೇರಿದ್ದ.

-----

ಕೋಟ್

ಡಿಟೈನ್ ಆಗಿರುವ ಅಕ್ರಮ ವಲಸಿಗರ ವಿರುದ್ಧ ಮುಂದಿನ ಕ್ರಮ ಜರುಗಿಸಲು ಬೆಂಗಳೂರಿನ ಎಫ್‌ಆರ್‌ಆರ್ ಹಾಗೂ ಬಾಂಗ್ಲಾರಾ ಯಭಾರಿ ಕಚೇರಿಗಳನ್ನು ಸಂಪರ್ಕಿಸಲಾಗುವುದು. ದಾಖಲಾತಿ ಒದಗಿಸಿದ್ದ ಬೆಂಗಳೂರಿನ ವ್ಯಕ್ತಿಯನ್ನು ಪತ್ತೆ ಮಾಡಬೇಕಿದೆ. ಉದ್ಯೋಗ ಆಮಿಷದೊಂದಿಗೆ ಭಾರತಕ್ಕೆ ಅಕ್ರಮವಾಗಿ ಕರೆತರುತ್ತಿರುವ ಜಾಲವನ್ನು ಭೇದಿಸಬೇಕಾಗಿದೆ. ವಶಕ್ಕೆ ಪಡೆದವರ ಬಗ್ಗೆ ಇನ್ನಷ್ಟು ತನಿಖೆ ನ ಡೆಯಲಿದೆ. ಗಾರ್ಮೆಂಟ್ ಮಾಲೀಕರಿಗೆ ಎಚ್ಚರಿಕೆ, ಸೂಕ್ತ ಸೂಚನೆ ಕೊಡಲಾಗುವುದು. ಪತ್ತೆಯಾದ ಅಕ್ರಮ ವಲಸಿಗರ ವಯೋಮಿತಿ ಅಂದಾಜು 30 ವರ್ಷವಿದೆ. ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲವೆಂಬುದು ಸದ್ಯಕ್ಕೆ ಗೊತ್ತಾಗಿದೆ.

ರಂಜಿತ್‌ಕುಮಾರ್ ಬಂಡಾರು, ಎಸ್‌ಪಿ ಚಿತ್ರದುರ್ಗ

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net