ಒಳ ಮೀಸಲು ವಿರೋಧ ಖಂಡನೀಯ

oppo_2
oppo_2
Published on

ಕಲಬುರಗಿ: ಒಳ ಮೀಸಲಾತಿಗೆ ಆಗ್ರಹಿಸಿ ಆಂಧ್ರಪ್ರದೇಶ, ಕರ್ನಾಟಕದಲ್ಲಿ ಮಾದಿಗ ಸಮಾಜದಿಂದ ಸತತ ಹೋರಾಟ ನಡೆಸುತ್ತಿದ್ದು, ಇದೀಗ ಸುಪ್ರೀಂ ಕೋರ್ಟ್ ಮೀಸಲಾತಿಗೆ ಒಪ್ಪಿಗೆ ಸೂಚಿಸಿದೆ. ಆದರೆ ಇದನ್ನು ವಿರೋಧಿಸಿ ದೇಶದ ಕೆಲವರು ಆ.೨೧ರಂದು ಭಾರತ್ ಬಂದ್ ಘೋಷಿಸಿರುವುದು ಸರಿಯಲ್ಲ ಎಂದು ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮಾಪಣ್ಣ ಹದನೂರ ಖಂಡಿಸಿದರು.
ಸತತ ಹೋರಾಟದಿಂದ ದಲಿತರಾಗಿಯೇ ಇರುವ ಸಮುದಾಯಕ್ಕೆ ಇದೀಗ ನ್ಯಾಯದ ದೊರೆಯುವ ಆಸೆ ಚಿಗುರೊಡೆದಿದೆ. ಉತ್ತರ ಭಾರತದ ನಾಯಕರುಗಳಾದ ರಾಮದಾಸ್ ಅಠಾವಲೆ, ಮಾಯಾವತಿ, ಚಿರಾಗ್ ಪಾಸ್ವಾನ್, ಭೀಮ್ ಆರ್ಮಿ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸುತ್ತೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದಲಿತರಲ್ಲಿಯೇ ಸತತ ಅನ್ಯಾಯಕ್ಕೆ ಒಳಗಾಗಿರುವ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಪ್ರಸ್ತುತ ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ನೇಮಕ ಪ್ರಕ್ರಿಯೆ ಸ್ಥಗಿತಗೊಳಿಸಿ, ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಮಲ್ಲಿಕಾರ್ಜುನ ಕಾಳಗಿ, ಬಸವರಾಜ ಮೈತ್ರಿ, ಚಂದ್ರಕಾAತ ಸಗರಕರ್, ಮಲ್ಲಿಕಾರ್ಜುನ ಕುರಕುಂದಿ, ಮಲ್ಲಪ್ಪ ಚಿಗನೂರ, ಶಿವರಾಜ ಜಿನಕೇರಿ, ಮಲ್ಲೇಶಿ ಸೈದಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net