

ಚಿತ್ರದುರ್ಗ: ಒಳಮೀಸಲು ಜಾರಿಗೆ ಒತ್ತಾಯಿಸಿ ರಾಜ್ಯಸರ್ಕಾರದ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ ಎಂದು ಸಂಸದ ಗೋವಿಂ ದ ಎಂ.ಕಾರಜೋಳ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಪ್ರಿಂಕೋರ್ಟ್ ತೀರ್ಪಿನಂತೆ ಒಳಮೀಸಲು ಜಾರಿ ಅಧಿಕಾರ ರಾಜ್ಯ ಸರ್ಕಾರಗಳಿಗಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೋಸದಾಟವಾಡುತ್ತಿದ್ದಾರೆ. ಮೀಸಲು ವಿಚಾರದಲ್ಲಿ ತಮ್ಮ ಪಕ್ಷದ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದ್ದಾರೆ. ಪಕ್ಷ ಒಳಮೀಸಲಿಗೆ ಬದ್ಧವಿದೆ. ಒಳ ಮೀಸಲು ಜಾರಿಗೆ ಒತ್ತಾಯಿಸಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ ಎರಡು ದಿನಗಳ ಬಳಿಕ ಹೋರಾಟವನ್ನು ಪ್ರಾರಂಭಿಸಲಿದ್ದೇವೆ ಎಂದರು.
ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ 50 ಕ್ಕೂ ಹೆಚ್ಚು ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ನೌಕರಿಯಲ್ಲಿ ಮೀಸಲು ಕೊಡಬಾರದೆಂದು ಮುಖ್ಯಮಂತ್ರಿಯಾಗಿದ್ದಾಗ ಎಸ್.ಎಂ. ಕೃಷ್ಣ ತೀರ್ಮಾನಿಸಿದ್ದರು. ಆದರೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ನೌಕರಿಯೊಂದಿಗೆ, ಬಡ್ತಿಯಲ್ಲೂ ಮೀಸಲು ಕೊಟ್ಟಿದ್ದನ್ನು ನೆನಪಿಸಿದರು.
ಮೀಸಲಾತಿಯಲ್ಲಿ ಕೆನೆಪದರ ಅಳವಡಿಸುವುದಿಲ್ಲ್ಲವೆಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ. ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿರುವುದು ಮೋದಿ, ಆರ್‌ಎಸ್‌ಎಸ್, ಬಿಜೆಪಿ, ಜೆಡಿಎಸ್‌ನವರಿಗೆ ಸಮಾಧಾನವಿಲ್ಲ ಎಂದು ಆಪಾದಿಸುತ್ತಿದ್ದಾರೆ. ಅವರ ಕುರ್ಚಿಗೆ ಕಂಟಕ ಎದುರಾಗಿದ್ದರಿಂದ ಈಗ ಜಾತಿ ಗಣತಿ ವಿಚಾರ ಮುನ್ನೆಲೆಗೆ ತಂದು ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರಿಗೆ ಕಾಳಜಿ ಇದ್ದರೆ ಕೂಡಲೇ ಒಳಮೀಸಲಾತಿ ಜಾರಿ ಮಾಡಲಿ ಎಂದರು.
ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅನುಭವದ ಹೇಳಿಕೆ ನೀಡಿದ್ದಾರೆ. ಮುಡಾ ಹಗರಣ ಹರಿಯಾಣ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಿದೆ. ಮಹಾರಾಷ್ಟ್ರದಲ್ಲೂ ಕರಿನೆರಳು ಬೀರಲಿದೆ. ಹಗರಣಗಳ ಸರಮಾಲೆ ಸಿಎಂ ಕೊರಳಿಗೆ ಬಿದ್ದಿದೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ಮಾಡಿದ್ದಾರೆ ಎಂದರು.
ಸಿಎಂ ರಾಜೀನಾಮೆ ಕೊಡುತ್ತಾರೆಂದು ಕಾಂಗ್ರೆಸ್ಸಿನವರಿಗೆ ಕನಸು ಬಿದ್ದಿದೆ. ಆದ್ದರಿಂದಲೇ ಡಜನ್‌ಗೂ ಹೆಚ್ಚು ಆಕಾಕ್ಷಿಗಳು ಕುರ್ಚಿಗೆ ಟ ವೆಲ್ ಹಾಕಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗುತ್ತಾರೊ ಅಥವಾ ಅಧ್ಯಕ್ಷರಾಗಿ ಮುಂದುವರಿಯುತ್ತಾರೋ ಗೊತ್ತಿಲ್ಲ ಎಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಸಂಪತ್‌ಕುಮಾರ್, ನವೀನ್ ಚಾಲುಕ್ಯ,ನಾಗರಾಜ್‌ಬೇದ್ರೆ ಇದ್ದರು.
--
ರೈಲ್ವೆ ಕೆಳ ಸೇತುವೆ ಪರಿಶೀಲನೆ
ಚಿತ್ರದುರ್ಗ ತುರುವನೂರು ಮಾರ್ಗದ ಗೋನೂರು ರೈಲ್ವೆ ಕೆಳಸೇತುವೆಯನ್ನು ಸಂಸದ ಗೋವಿಂದ ಎಂ.ಕಾರಜೋಳ ಅವರು ಬುಧ ವಾರ ಪರಿಶೀಲನೆ ನಡೆಸಿದರು. ಸೇತುವೆಯಡಿ ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿ ಆಗುತ್ತಿರುವುದನ್ನು ಗಮನಿಸಿದ ಅವರು, ಕೂಡಲೇ ಸೂಕ್ತ ಕ್ರಮವನ್ನು ತೆಗೆದುಕೊಂಡು ಸಮಸ್ಯೆ ಬಗೆಹರಿಸುವಂತೆ ರೈಲ್ವೇ ಅಧಿಕಾರಿಗಳಿಗೆ ತಾಕೀತು ಮಾಡಿದರು.