ಒಳ ಮೀಸಲಾತಿ ಜಾರಿಗೆ ವಿರೋಧ

h15-banjara
Published on

ಹುಬ್ಬಳ್ಳಿ: ಒಳ ಮೀಸಲಾತಿ ಜಾರಿ ವಿರುದ್ಧ ಹೋರಾಟ ನಡೆಸಲು ಇಲ್ಲಿನ ಜೆಸಿ ನಗರದ ಬಂಜಾರಾ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಕೊರಚ, ಕೊರವ, ಭಜಂತ್ರಿ , ಭೋವಿ (ವಡ್ಡರ) , ಬಂಜಾರ (ಲಂಬಾಣಿ ), ಡೊಂಬರ ಸೇರಿ ವಿವಿಧ ಸಮಾಜದ ಮುಖಂಡರು ನಿರ್ಧರಿಸಿದರು.

ಸರ್ಕಾರವು ತರಾತುರಿಯಲ್ಲಿ ಸಚಿವ ಸಂಪುಟದಲ್ಲಿ ನಿರ್ಣಯಿಸಿ ಉಪ ಸಮಿತಿ ರಚಿಸಿ, ಒಳ ಮೀಸಲಾತಿ ಜಾರಿಗೆ ಹೊರಟಿರುವುದು ಹಾಸ್ಯಾಸ್ಪದವಾಗಿದೆ. ಇದಕ್ಕೆ ತೀವ್ರವಾಗಿ ಖಂಡಿಸುತ್ತೇವೆ. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಇದನ್ನು ವಿರೋಧಿಸಲಾಗುವುದು ಎಂದು ಬಂಜಾರಾ ಸಮಾಜದ ರಾಜ್ಯ ಅಧ್ಯಕ್ಷ ಪಾಂಡುರಂಗ ಪಮ್ಮಾರ ಹೇಳಿದರು. ಕಾನೂನು ಹೋರಾಟದೊಂದಿಗೆ ರಾಜ್ಯಾದ್ಯಂತ ತೀವ್ರ ತರಹದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಶಿವಾನಂದ ಕೊಣ್ಣೂರು, ಅಶೋಕ ಕಬ್ಬೇರ, ಯಮನೂರ ಗುಡಿಹಾಳ, ಶಶಿ ಬಿಜವಾಡ, ರಾಮಾ ನಾಯಕ, ಬಸವರಾಜ ಅಮ್ಮಿನಭಾವಿ, ಸುಭಾಷ ಮಲ್ನಾಡ, ಬಿ.ಆರ್. ಹವೇಲಿ, ಶ್ರೀಕಾಂತ ಇಂಗಳಹಳ್ಳಿ, ನಾರಾಯಣ ಭಜಂತ್ರಿ, ಸುರೇಶ ಗೋಕಾಕ, ದಯಾನಂದ ಸಾಗರ, ಜಯಲಕ್ಷ್ಮೀ ದೊಡ್ಡಮನಿ, ಶಿವರಾಂ ರಾಠೋಡ, ಮಂಜುನಾಥ ಭೋವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net